ETV Bharat / bharat

ಬಿರ್ಭೂಮ್ ಹತ್ಯಾಕಾಂಡ: ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ ದೀದಿ, ಅಪರಾಧಿಗಳನ್ನು ಕ್ಷಮಿಸಬೇಡಿ ಎಂದ ಮೋದಿ - Modi on Rampurhat Massacre

ದೀದಿ ನಾಡಲ್ಲಿ ನಡೆದಿರುವ ಬಿರ್ಭೂಮ್​ ಹಿಂಸಾಚಾರ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಇದರಲ್ಲಿ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಪ್ರಕರಣದ ನೈತಿಕ ಹೊಣೆ ಹೊತ್ತು ಮಮತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದೆ.

modi condolences over Birbhum violence
modi condolences over Birbhum violence
author img

By

Published : Mar 23, 2022, 9:31 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಬಿರ್ಭೂಮ್​​ನಲ್ಲಿ 8 ಜನರನ್ನು ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿದ್ದು, ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಗುರುವಾರ ತೆರಳಿ ಪರಿಸ್ಥಿತಿ ಅವಲೋಕನ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ, ಪ್ರಕರಣದಲ್ಲಿ ವಿರೋಧ ಪಕ್ಷಗಳ ಕೈವಾಡವಿದ್ದು, ಅಲ್ಲಿಗೆ ಹೋಗಲು ನಾನು ಬಯಸುವುದಿಲ್ಲ. ಈಗಾಗಲೇ ಅನೇಕ ರಾಜಕೀಯ ಪಕ್ಷಗಳು ಆ ಸ್ಥಳಕ್ಕೆ ತೆರಳಿರುವ ಕಾರಣ ಜಗಳಕ್ಕಿಳಿಯಲು ನನಗಿಷ್ಟವಿಲ್ಲ. ವಿರೋಧ ಪಕ್ಷಗಳು ಸ್ಥಳದಲ್ಲೇ ಬೀಡುಬಿಟ್ಟು ಸಿಹಿತಿಂಡಿ ಸವಿಯುತ್ತಾ ಕುಳಿತುಕೊಂಡಿವೆ. ವಿರೋಧ ಪಕ್ಷದ ನಾಯಕರು ಅಲ್ಲಿರುವಾಗ ನಾನು ಯಾವುದೇ ಜಗಳಕ್ಕೂ ಇಳಿಯಲು ಮುಂದಾಗುವುದಿಲ್ಲ ಎಂದರು.

ಘಟನೆ ದುರದೃಷ್ಟಕರ. ಇದು ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳಿಂದ ನಮ್ಮ ಸರ್ಕಾರಕ್ಕೆ ಮಸಿ ಬಳಿಯುವ ಹುನ್ನಾರ. ಘಟನೆಗೆ ಕಾರಣವಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಭಾರಿ ಪೊಲೀಸ್ ಅಧಿಕಾರಿ, ಎಸ್​ಡಿಪಿಒ ಹಾಗೂ ಹಿರಿಯ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ಡಿಜಿಪಿ ಆ ಜಿಲ್ಲೆಯಲ್ಲೇ ಉಳಿದುಕೊಂಡಿದ್ದಾರೆ ಎಂದರು.

  • #WATCH | I express my condolences over Birbhum violence, WB. Whatever help is needed to book culprits, I assure all possible help from Centre to State. I hope state govt takes strict action against culprits, & those who encourage such criminals should not be forgiven too: PM Modi pic.twitter.com/AEXKAew4JP

    — ANI (@ANI) March 23, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಮದುವೆ ಲೈಸೆನ್ಸ್​​ ಅಲ್ಲ; ಪತ್ನಿಯ ಇಚ್ಛೆಗೆ ವಿರುದ್ಧದ ಪತಿಯ ಲೈಂಗಿಕ ಕ್ರಿಯೆ ಅತ್ಯಾಚಾರ: ಹೈಕೋರ್ಟ್​

ಅಪರಾಧಿಗಳನ್ನ ಕ್ಷಮಿಸಬೇಡಿ- ಪ್ರಧಾನಿ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಘಟನೆಯಲ್ಲಿ ಸಾವನ್ನಪ್ಪಿರುವವರ ಬಗ್ಗೆ ಸಂತಾಪ ಸೂಚಿಸಿದ್ದು, ಪಶ್ಚಿಮ ಬಂಗಾಳದ ಬಿರ್ಭೂಮ್ ಹತ್ಯೆಯ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು ಎಂದಿದ್ದಾರೆ. ವಿಕ್ಟೋರಿಯಾ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ನಮೋ, ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಾಯ ನೀಡಲು ಸಿದ್ಧವಾಗಿದೆ. ತಪ್ಪಿತಸ್ಥರ ವಿರುದ್ಧ ಪಶ್ಚಿಮ ಬಂಗಾಳ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಏನಿದು ಪ್ರಕರಣ?: ಟಿಎಂಸಿ ನಾಯಕ ಭದು ಶೇಖ್ ಹತ್ಯೆಯಾದ ಬಳಿಕ ಪ್ರತಿಭಟನೆ ನಡೆಸಿದ್ದ ಕೆಲ ದುಷ್ಕರ್ಮಿಗಳು ಬಿರ್ಭೂಮ್​​ನಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿದರು. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ದಳ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಜೀವಂತ ಶವ ಹೊರತೆಗೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.