ಹೈದರಾಬಾದ್ : ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆಗಳ ಹಿನ್ನೆಲೆಯಲ್ಲಿ ಹೈದರಾಬಾದ್ ಮಹಾನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೈಬರಾಬಾದ್ ಪೊಲೀಸರು ಮುಂದಾಗಿದ್ದಾರೆ. ಸೈಬರಾಬಾದ್ನಲ್ಲಿ ನೂರಾರು ದೊಡ್ಡ ಐಟಿ ಕಂಪನಿಗಳಿದ್ದು, ಎಲ್ಲ ಉದ್ಯೋಗಿಗಳು ಒಂದೇ ಸಮಯದಲ್ಲಿ ಲಾಗ್ ಔಟ್ ಮಾಡಿ ಹೊರಗೆ ಬರುವುದರಿಂದ ಒಮ್ಮೆಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಹೀಗಾಗಿ ಪ್ರಮುಖ ಐಟಿ ಕ್ಲಸ್ಟರ್‌ಗಳಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳು ಹಂತ ಹಂತವಾಗಿ ಲಾಗ್ ಔಟ್ ಮಾಡುವ ಕ್ರಮ ಅನುಸರಿಸುವಂತೆ ಸೈಬರಾಬಾದ್ ಪೊಲೀಸರು ಕಂಪನಿಗಳಿಗೆ ಸಲಹೆ ನೀಡಿದ್ದಾರೆ. ಹೈಟೆಕ್ ಸಿಟಿ, ರಾಯದುರ್ಗಂ ಮತ್ತು ಗಚಿಬೌಲಿಯ ಐಟಿ ಕ್ಲಸ್ಟರ್‌ಗಳಲ್ಲಿನ ಐಟಿ ಕಂಪನಿಗಳ ಸುತ್ತಮುತ್ತ ಸೋಮವಾರ ಸಂಜೆ ಭಾರೀ ಮಳೆಯ ನಂತರ ಐಕಿಯಾ - ಸೈಬರ್ ಟವರ್ ರಸ್ತೆ, ಬಯೋ ಡೈವರ್ಸಿಟಿ ಕ್ರಾಸ್‌ರೋಡ್ಸ್ ಮತ್ತು ಗಚಿಬೌಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಕಂಪನಿಗಳಿಗೆ ಪೊಲೀಸರು ಲಾಗ್ ಔಟ್ ಸಮಯದ ಸಲಹೆಗಳನ್ನು ನೀಡಿದ್ದಾರೆ.
ರಹೇಜಾ ಮೈಂಡ್‌ಸ್ಪೇಸ್, ಪೂರ್ವ ಸಮಿಟ್, ವಾಟರ್‌ಮಾರ್ಕ್, ಫೀನಿಕ್ಸ್ (ಮಾದಾಪುರ)/ಕೊಂಡಾಪುರ ಅವಾನ್ಸ್‌ನಲ್ಲಿರುವ ಎಲ್ಲ ಕಂಪನಿಗಳು ಮತ್ತು ಟಿಟಿಎಸ್, ಎಚ್ಎಸ್ಬಿಸಿ, ಡೆಲ್, ಒರಾಕಲ್, ಕ್ವಾಲ್ ಕಾಮ್ ಮತ್ತು ಟೆಕ್ ಮಹಿಂದ್ರಾನಂಥ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮಧ್ಯಾಹ್ನ 3 ಗಂಟೆಗೆ ಲಾಗ್‌ಔಟ್ ಮಾಡುವಂತೆ ಸೂಚಿಸಲಾಗಿದೆ. ಈ ಐಟಿ ಪಾರ್ಕ್‌ಗಳು ಮತ್ತು ಕಂಪನಿಗಳು ಐಕಿಯಾದಿಂದ ಸೈಬರ್ ಟವರ್ಸ್ ರಸ್ತೆಯಲ್ಲಿವೆ.
ಸಂಜೆ 4:30ಕ್ಕೆ ಲಾಗ್‌ಔಟ್ ಆಗುವಂತೆ ಸಲಹೆ: ಐಕಿಯಾ ವಲಯ ಮತ್ತು ಸುತ್ತಮುತ್ತಲಿನ ಬಯೋ ಡೈವರ್ಸಿಟಿ ಪಾರ್ಕ್ ಮತ್ತು ರಾಯದುರ್ಗಂನಲ್ಲಿರುವ ಇತರ IT ಪಾರ್ಕ್‌ಗಳು ಮತ್ತು ಕಂಪನಿಗಳು ಸಂಜೆ 4.30 ಕ್ಕೆ ಲಾಗ್ ಔಟ್ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಇವುಗಳಲ್ಲಿ ನಾಲೆಡ್ಜ್ ಸಿಟಿ, ನಾಲೆಡ್ಜ್ ಪಾರ್ಕ್, ಟಿ-ಹಬ್, ಗ್ಯಾಲಕ್ಸಿ, LTI & Twitza, Commerzone, RMZ Nexity, Skyview 10 &20, ದಿವ್ಯಶ್ರೀ ಓರಿಯನ್ ಮತ್ತು ಅಸೆಂಡಾಸ್ನಲ್ಲಿರುವ ಎಲ್ಲಾ ಕಂಪನಿಗಳು ಸೇರಿವೆ.
ಪ್ರಮುಖ ಆರ್ಥಿಕ ವಲಯವಾದ ಗಚಿಬೌಲಿಯಲ್ಲಿರುವ ಕಂಪನಿಗಳು ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಲಾಗ್ ಔಟ್ ಅಳವಡಿಸಿಕೊಳ್ಳುವಂತೆ ಮಾದಾಪುರದ ಉಪ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಇವುಗಳಲ್ಲಿ ಮೈಕ್ರೊಸಾಫ್ಟ್, ಇನ್ಫೊಸಿಸ್, ವಿಪ್ರೊ, ಸೆಂಟಾರಸ್, ಬ್ರಾಡವೇ, ವಿರ್ಟುಸಾ, ಐಸಿಐಸಿಐ, ಅಮೆಜಾನ್, ಹನೀವೆಲ್, ಹಿಟಾಚಿ, ಸತ್ವ ಕ್ಯಾಪಿಟಲ್, ಕ್ಯಾಪ್ಜೆಮಿನಿ, ಫ್ರಾಂಕ್ಲಿನ್ ಟೆಂಪಲ್ಟನ್ ಮತ್ತು ಬಿಎಸ್ಆರ್ ಐಟಿ ಪಾರ್ಕ್, ವೇವ್ ರಾಕ್, ಜಿಎಆರ್, ಕ್ಯೂ ಸಿಟಿ ಮತ್ತು ಡಿಎಲ್ಎಫ್ನಲ್ಲಿರುವ ಎಲ್ಲಾ ಕಂಪನಿಗಳು ಸೇರಿವೆ.
ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಐಟಿ ಕ್ಲಸ್ಟರ್‌ಗಳು ಮತ್ತು ಮಾದಾಪುರ, ಗಚ್ಚಿಬೌಲಿ ಮತ್ತು ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ನೂರಾರು ಕಾರುಗಳು ಕಿಲೋಮೀಟರ್ ಉದ್ದದ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು. ಈಗ ಮತ್ತೆ ಮುಂದಿನ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರಸ್ತೆಗಳಲ್ಲಿ ದಟ್ಟಣೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಸಂಘಟನೆಗಳು ಒತ್ತಾಯಿಸಿದ್ದವು.
ಇದನ್ನೂ ಓದಿ : ChatGPT: ಆ್ಯಂಡ್ರಾಯ್ಡ್ನಲ್ಲಿ ChatGPT ಡೌನ್ಲೋಡ್ ಹೇಗೆ? ಇಲ್ಲಿದೆ ಮಾಹಿತಿ