ETV Bharat / bharat

ಗರ್ಭಿಣಿ ಪತ್ನಿ, ಮೂರು ವರ್ಷದ ಮಗನ ಜೀವಂತ ಸುಟ್ಟು ಹಾಕಿದ ಪಾಪಿ ಗಂಡ - ಬೆಂಕಿ ಹಂಚಿ ಹೆಂಡತಿ ಮಗನ ಕೊಲೆ ಮಾಡಿದ ಪಾಪಿ

ಹೆಂಡತಿ ತವರು ಮನೆಯಿಂದ ಹಣ ತೆಗೆದುಕೊಂಡು ಬರಲಿಲ್ಲವೆಂದು ಮೂರು ವರ್ಷದ ಮಗ ಹಾಗೂ ಪತ್ನಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಬಿಹಾರದ ಸುಪೌಲ್​ನಲ್ಲಿ ನಡೆದಿದೆ.

Husband Murdered His wife and son in Bihar

author img

By

Published : Jan 4, 2022, 7:38 PM IST

ಸುಪೌಲ್(ಬಿಹಾರ): ಬಿಹಾರದ ಸುಪೌಲ್​​ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪಾಪಿ ಗಂಡನೋರ್ವ ಗರ್ಭಿಣಿ ಪತ್ನಿ ಮತ್ತು ಮೂರು ವರ್ಷದ ಮಗನನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ.

ಪತ್ನಿ ಹಾಗೂ ಮಗುವಿನ ಕಣ್ಣಿಗೆ ಬ್ಯಾಂಡೇಜ್​ ಕಟ್ಟಿ, ಅವರನ್ನು ಹಾಸಿಗೆಗೆ ಬಿಗಿದಿರುವ ಗಂಡ ಬೆಂಕಿ ಹಚ್ಚಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಆರೋಪಿ ತನ್ನ ಸಹೋದರಿ ಜೊತೆ ಪರಾರಿಯಾಗಿದ್ದಾನೆ. ಸುಪೌಲ್​ನ ತ್ರಿವೇಣಿಗಂಜ್​​ನ ಮಯೂರ್ವಾ ವಾರ್ಡ್​​ನಲ್ಲಿ ಈ ಪ್ರಕರಣ ನಡೆದಿದೆ.

ಮೃತ ಮಹಿಳೆಯ ಸಂಬಂಧಿಕರು, ಪತಿ ಹಾಗೂ ಆತನ ಸಹೋದರಿ ಸೇರಿ ಈ ದುಷ್ಕೃತ್ಯ ವೆಸಗಿದ್ದಾರೆಂದು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ರಂಜನ್​ ದೇವಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್‌ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿ ಪತಿ ಆಶಿಶ್ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ಕೆಲಸಕ್ಕೆ ಲಂಚ ಕೊಡಲು ಪತ್ನಿಯಿಂದ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನಂತೆ. ಕಳೆದ ಆರು ತಿಂಗಳಿಂದ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.