ETV Bharat / bharat

55 ವಕೀಲರಿಗೆ 'ಹಿರಿಯ ವಕೀಲ' ಸ್ಥಾನಮಾನ ನೀಡಿದ ದೆಹಲಿ ಹೈಕೋರ್ಟ್​ - 55 ವಕೀಲರನ್ನು ಹಿರಿಯ ಸ್ಥಾನ ನೀಡಿ ಆದೇಶಿಸಿದ ದೆಹಲಿ ಹೈಕೋರ್ಟ್​ ಸುದ್ದಿ,

ದೆಹಲಿ ಹೈಕೋರ್ಟ್​ ಆದೇಶದಂತೆ ಮುಖ್ಯ ನ್ಯಾಯಾಧೀಶ ಡಿಎನ್​ ಪಟೇಲ್​ ಅಧ್ಯಕ್ಷತೆಯ ಸಮಿತಿ 55 ವಕೀಲರಿಗೆ ಹಿರಿಯ ಸ್ಥಾನವನ್ನು ನೀಡಿದೆ.

Delhi high court order  Senior advocate order delhi  senior advocates status in delhi  55 ವಕೀಲರನ್ನು ಹಿರಿಯ ಸ್ಥಾನ ನೀಡಿ ಆದೇಶಿಸಿದ ದೆಹಲಿ ಹೈಕೋರ್ಟ್​ 55 ವಕೀಲರನ್ನು ಹಿರಿಯ ಸ್ಥಾನ ನೀಡಿ ಆದೇಶಿಸಿದ ದೆಹಲಿ ಹೈಕೋರ್ಟ್​ ಸುದ್ದಿ,  ಹಿರಿಯ ವಕೀಲರ ಸ್ಥಾನಮಾನ
55 ವಕೀಲರನ್ನು ಹಿರಿಯ ಸ್ಥಾನ ನೀಡಿ ಆದೇಶಿಸಿದ ದೆಹಲಿ ಹೈಕೋರ್ಟ್​
author img

By

Published : Mar 20, 2021, 11:30 AM IST

ನವದೆಹಲಿ: 55 ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನ ನೀಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಸ್ಥಾನಮಾನ ಪಡೆದಿರುವ ವಕೀಲರಲ್ಲಿ ರಾಹುಲ್ ಮೆಹ್ರಾ, ಸೌರಭ್ ಕೃಪಾಲ್, ಸಾತ್ವಿಕ್ ಶರ್ಮಾ, ತ್ರಿದೀಪ್ ಪೈಸ್, ಸಂಜಯ್ ಘೋಷ್, ವಿರಾಜ್ ಆರ್ ದತಾರ್, ಪರಿಧಿ ಬಿಲಿಮೋರಿಯಾ, ಚಿನ್ಮಯ್ ಶರ್ಮಾ ಸೇರಿದ್ದಾರೆ.

ಹೈಕೋರ್ಟ್​ ಆದೇಶದಂತೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ನೇತೃತ್ವದ ಸಮಿತಿಯು 55 ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನವನ್ನು ನೀಡಿದೆ.

ಹಿರಿಯ ವಕೀಲರ ಸ್ಥಾನಮಾನಕ್ಕಾಗಿ ಹೈಕೋರ್ಟ್ 2019 ರಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ನಂತರ ಹಿರಿಯ ವಕೀಲರ ಸ್ಥಾನಮಾನವನ್ನು ನೀಡುವ ನಿಯಮಾವಳಿಗಳ ನಿಯಮ -7 ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನು ಪ್ರಶ್ನಿಸಿದ ನಂತರ ಹೈಕೋರ್ಟ್ ನಿಯಮ-7ನ್ನು 15 ಮೇ 2019 ರಂದು ತಡೆಹಿಡಿದಿತ್ತು. ಅದೇ ಸಮಯದಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ನೇತೃತ್ವದ ನ್ಯಾಯಪೀಠವು ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನವನ್ನು ನೀಡುವ ಸಮಿತಿಗೆ ನೇರವಾಗಿ ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಹೈಕೋರ್ಟ್​ ಆದೇಶದಂತೆ ಸಮಿತಿ 55 ವಕೀಲರಿಗೆ ಹಿರಿಯ ಸ್ಥಾನಮಾನ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.