ETV Bharat / bharat

ಕ್ರಿಕೆಟ್‌​ ಬೆಟ್ಟಿಂಗ್‌ನಲ್ಲಿ ಸೋತ ಯುವಕ; ಹಣ ಮರಳಿಸಲಾಗದೆ ಆತ್ಮಹತ್ಯೆ ಯತ್ನ

ಬೆಟ್ಟಿಂಗ್​ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಾಗ್ಯೂ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದು ಯುವಕರ ಪ್ರಾಣಕ್ಕೂ ಎರವಾಗಿದೆ.

ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನ
ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನ
author img

By

Published : Jun 14, 2022, 4:56 PM IST

ಕೃಷ್ಣಾ(ಆಂಧ್ರಪ್ರದೇಶ): ಬೆಟ್ಟಿಂಗ್​ ನಡೆಸುವುದು ಕಾನೂನುಬಾಹಿರವಾದರೂ ಎಗ್ಗಿಲ್ಲದೇ ನಡೆಯುತ್ತಿದೆ. ಬೆಟ್ಟಿಂಗ್​ ಮಾಡಿದ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹದ್ದೇ ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದೆ. ಬೆಟ್ಟಿಂಗ್​ ಮಾಡಿದ್ದ ಯುವಕನೊಬ್ಬ ಹಣ ಹಿಂತಿರುಗಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೃಷ್ಣಾ ಜಿಲ್ಲೆಯ ಉಂಗುಟೂರು ವಲಯದ ಇಂದುಪಲ್ಲಿಯಲ್ಲಿ ಘಟನೆ ನಡೆದಿದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಕಿರುಕುಳ ತಾಳಲಾರದೇ ಜ್ಞಾನ ಪ್ರವೀಣ್ ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಮನೆಯವರು ತಕ್ಷಣವೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐಪಿಎಲ್​ನಲ್ಲಿ ಬೆಟ್ಟಿಂಗ್ ಆಡಿದ್ದ ಯುವಕ 8 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ 1.5 ಲಕ್ಷ ರೂ. ಹಣವನ್ನು ಪಾವತಿಸಿದ್ದಾನೆ. ಉಳಿದ ಹಣ ನೀಡುವಂತೆ ಬೆಟ್ಟಿಂಗ್​ ನಡೆಸುವವರು ಕಿರುಕುಳ ನೀಡಿದ್ದರಿಂದ ಮನನೊಂದ ಯುವಕ ಸಾವಿನ ಹಾದಿ ತುಳಿದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆತನನ್ನು ಪಿನ್ನಮನೇನಿ ಸಿದ್ದಾರ್ಥ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಅಮರಾವತಿ ಐತಿಹಾಸಿಕ ತೀರ್ಪು ನೀಡಿದ ಜಡ್ಜ್​ ನಿವೃತ್ತ: ರೈತರಿಂದ ಅದ್ಧೂರಿ ಬೀಳ್ಕೊಡುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.