ETV Bharat / bharat

ಲವ್​ ಜಿಹಾದ್​ ಸಂಬಂಧಿತ ವಿಧೇಯಕ ಅಂಗೀಕರಿಸಿದ ವಿಧಾನಸಭೆ

author img

By

Published : Apr 2, 2021, 8:06 AM IST

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003, ಧಾರ್ಮಿಕ ಮತಾಂತರ ತಡೆಯಲು ಶ್ರಮಿಸಲಿದೆ. ಆಕರ್ಷಣೆ, ಬಲ ಅಥವಾ ಮೋಸದ ವಿಧಾನಗಳಿಂದ ಮನಪರಿವರ್ತನೆ ಮಾಡಿ ಮತಾಂತರ ಮಾಡಿವುದನ್ನ ತಡೆಯಲಿದೆ.

ಗುಜರಾತ್​ ವಿಧಾನಸಭೆ ಗಾಂಧಿನಗರ
ಗುಜರಾತ್​ ವಿಧಾನಸಭೆ ಗಾಂಧಿನಗರ

ಗಾಂಧಿನಗರ(ಗುಜರಾತ್): 'ಲವ್ ಜಿಹಾದ್' ಎಂದು ಕರೆಯಲ್ಪಡುವ ಬಲವಂತದ ಧಾರ್ಮಿಕ ಮತಾಂತರ ತಡೆಯುವ ಗುರಿ ಹೊಂದಿರುವ 2003 ರ ಧರ್ಮ ಸ್ವಾತಂತ್ರ್ಯ (ಧಾರ್ಮಿಕ ಸ್ವಾತಂತ್ರ್ಯ) ಕಾಯ್ದೆ 2003 ಅನ್ನು ತಿದ್ದುಪಡಿ ವಿಧೇಯಕವನ್ನು ಗುಜರಾತ್ ವಿಧಾನಸಭೆ ಅಂಗೀಕರಿಸಿದೆ.

ಧಾರ್ಮಿಕ ಸ್ವಾತಂತ್ರ್ಯ 2003 ಕಾನೂನಿಗೆ ತಿದ್ದುಪಡಿ ಮಾಡಲಾಗಿದೆ. ಉತ್ತಮ ಜೀವನಶೈಲಿ, ದೈವಿಕ ಆಶೀರ್ವಾದ ಮತ್ತು ವಿವಾಹದ ನೆಪದಲ್ಲಿ ಸೋಗು ಹಾಕಿ ಭರವಸೆ ನೀಡುವ ಧಾರ್ಮಿಕ ಮತಾಂತರ ನಿಷೇಧಿಸಲು ಮತ್ತು ಶಿಕ್ಷಿಸಲು ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಧೇಯಕವನ್ನು ಸಚಿವ ಪ್ರದೀಪ್ಸಿಂಗ್ ಜಡೇಜಾ ನಿನ್ನೆ ಗುಜರಾತ್​ ವಿಧಾನಸಭೆಯಲ್ಲಿ ಮಂಡಿಸಿದರು.

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003, ಧಾರ್ಮಿಕ ಮತಾಂತರವನ್ನ ತಡೆಯಲು ಶ್ರಮಿಸಲಿದೆ. ಆಕರ್ಷಣೆ, ಬಲ ಅಥವಾ ಮೋಸದ ವಿಧಾನಗಳಿಂದ ಮನಪರಿವರ್ತನೆ ಮಾಡಿ ಮತಾಂತರ ಮಾಡಿವುದನ್ನ ತಡೆಯಲಿದೆ. ಉತ್ತಮ ಜೀವನಶೈಲಿ, ದೈವಿಕ ಆಶೀರ್ವಾದ ಮತ್ತು ಸೋಗು ಹಾಕುವಿಕೆಯ ಭರವಸೆ ನೀಡುವ ಧಾರ್ಮಿಕ ಮತಾಂತರಗಳಿಗೆ ಹೊಸ ವಿಧೇಯಕದಲ್ಲಿ ಕಡಿವಾಣ ಹಾಕಲಾಗಿದೆ. ಮತ್ತು ಹಾಗೆ ಮಾಡದಂತೆ ಹೊಸ ವಿಧೇಯಕದಲ್ಲಿ ನಿರ್ಬಂಧಿಸಲಾಗಿದೆ. ಧಾರ್ಮಿಕ ಮತಾಂತರದ ಉದ್ದೇಶದಿಂದ ಮಹಿಳೆಯರನ್ನು ಮದುವೆಗೆ ಆಮಿಷ ಒಡ್ಡುವುದನ್ನ ಹೊಸ ವಿಧೇಯಕ ನಿರ್ಬಂಧಿಸಿದೆ.

ವಿಧೇಯಕದಲ್ಲಿ ಏನೇನಿದೆ?

ಒಂದೊಮ್ಮೆ ಕಾನೂನು ಮೀರಿ ಧಾರ್ಮಿಕ ಮತಾಂತರಕ್ಕಾಗಿ ವಿವಾಹ ಮಾಡಿಕೊಳ್ಳುವುದು,ಮದುವೆಯಾಗಲು ವ್ಯಕ್ತಿಗೆ ಸಹಾಯ ಮಾಡುವುದನ್ನು ಮಾಡಿದ್ದು ಕಂಡು ಬಂದರೆ, ಮೂರು ವರ್ಷಕ್ಕಿಂತ ಕಡಿಮೆಯಿಲ್ಲದ ಮತ್ತು ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಅಷ್ಟೇ ಅಲ್ಲ 2 ಲಕ್ಷ ರೂ.ಗಳ ದಂಡವನ್ನೂ ಹಾಕುವುದಾಗಿ ವಿಧೇಯಕದಲ್ಲಿ ಹೇಳಲಾಗಿದೆ. ಅಪ್ರಾಪ್ತ ವಯಸ್ಕ ಮಹಿಳೆ ಅಥವಾ ಎಸ್‌ಸಿ ಅಥವಾ ಎಸ್‌ಟಿ ಸಮುದಾಯದ ವ್ಯಕ್ತಿಯನ್ನ ಮೋಸದ ಅಥವಾ ಮರಳು ಮಾಡಿ ಇಲ್ಲವೇ ಆಮಿಷ ಒಡ್ಡಿ ಮದುವೆಯಾದರೆ, ಆಗ ಶಿಕ್ಷೆಯು ಕನಿಷ್ಠ ನಾಲ್ಕು ವರ್ಷದಿಂದ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ಹಾಕಲಾಗುವುದು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಇವೆಲ್ಲ ನಿಬಂಧನೆಗಳು ಹೊಸ ಕಾನೂನಿನಲ್ಲಿ ಉಂಟು

ಇದಲ್ಲದೆ, ಒಂದು ಧರ್ಮದ ವ್ಯಕ್ತಿಯು ಮತ್ತೊಂದು ಧರ್ಮದ ವ್ಯಕ್ತಿಯೊಂದಿಗೆ ಕಾನೂನುಬಾಹಿರ ಮತಾಂತರದ ಉದ್ದೇಶಕ್ಕಾಗಿ ಮದುವೆ ಆಗಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮದುವೆಗೆ ಮೊದಲು ಅಥವಾ ನಂತರ ಆಮೀಷ ಒಡ್ಡಿ ಮತಾಂತರ ಆಗಿರುವುದು ಸಾಬೀತಾದರೆ ಕುಟುಂಬ ನ್ಯಾಯಾಲಯ ಅಥವಾ ಇತರ ಯಾವುದೇ ನ್ಯಾಯಾಲಯ ಅಂತಹ ಮದುವೆಯನ್ನು ಅನೂರ್ಜಿತವೆಂದು ಘೋಷಿಸುತ್ತದೆ. ಪ್ರಸ್ತಾವಿತ ತಿದ್ದುಪಡಿಯ ನಿಬಂಧನೆಗಳು ಯಾವುದೇ ಸಂಸ್ಥೆ ಅಥವಾ ಸಂಸ್ಥೆಯು ಅಂತಹ ವಿವಾಹದ ಜವಾಬ್ದಾರಿಯನ್ನು ಹೊತ್ತುಕೊಂಡರೆ, ಅವರಿಗೆ ಕನಿಷ್ಠ ಮೂರು ವರ್ಷ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 5 ಲಕ್ಷ ರೂ. ಜುಲ್ಮಾನೆ ವಿಧಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರಕರಣಗಳ ವಿಚಾರಣೆಯನ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ದರ್ಜೆಯ ಮೇಲಿರುವ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದು ಹೊಸ ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.