ಉತ್ತರಕಾಶಿ : ಪವಿತ್ರ ಗಂಗೋತ್ರಿ ಚಾರ್ಧಾಮಗಳನ್ನು ಇಂದು ಶುಭ ಸಮಯದಲ್ಲಿ ತೆರೆಯಲಾಯಿತು. ಬಾಗಿಲು ತೆರೆದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ತಿರತ್ ಸಿಂಗ್ ರಾವತ್ ಅವರ ಹೆಸರಿನಲ್ಲಿ ಮೊದಲ ಪೂಜೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕೊರೊನಾ ವಿಮೋಚನೆಗಾಗಿ ವಿಶೇಷ ಪೂಜೆಯನ್ನು ಸಹ ಮಾಡಲಾಯಿತು. ಗಂಗೋತ್ರಿ ಧಾಮ್‌ನ ಬಾಗಿಲುಗಳನ್ನು 25-25 ಅರ್ಚಕರು ಮತ್ತು ಅಧಿಕಾರಿಗಳು ಮತ್ತು ಆಡಳಿತ ನೌಕರರ ಸಮ್ಮುಖದಲ್ಲಿ ತೆರೆಯಲಾಯಿತು. ಆದರೂ, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆ ಚಾರ್ಧಮ್ ಯಾತ್ರೆ ರದ್ದುಗೊಂಡಿದೆ.
ಅಲ್ಲದೆ, ಸುಮಾರು ಆರು ತಿಂಗಳ ನಂತರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇಂದು ಗಂಗೋತ್ರಿ ಧಾಮದ ಬಾಗಿಲನ್ನು ಬೆಳಗ್ಗೆ 6:30ಕ್ಕೆ ತೆರೆಯಲಾಯಿತು. ಈ ಸಂದರ್ಭದಲ್ಲಿ ಪುರೋಹಿತರ ಸಂಖ್ಯೆಯೂ ಸೀಮಿತವಾಗಿತ್ತು.
ಅಭಿಜೀತ್ ಮುಹೂರ್ತದಲ್ಲಿ ಯಮುನೋತ್ರಿ ಧಾಮ್‌ದ ಬಾಗಿಲುಗಳನ್ನು 12: 15 ಕ್ಕೆ ತೆರೆಯಲಾಗಿದೆ. ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಚಾರ್ಧಮ್ ಯಾತ್ರೆ ಭಕ್ತರಿಲ್ಲದೆ ಪ್ರಾರಂಭವಾಗಿದೆ.
ಚಾರ್ಧಮ್ ಆರಂಭಿಕ ದಿನಾಂಕಗಳು
- ಯಮುನೋತ್ರಿ ಧಾಮ್ - 14 ಮೇ 2021
- ಗಂಗೋತ್ರಿ ಧಾಮ್ - 15 ಮೇ 2021
- ಕೇದಾರನಾಥ ಧಮ್ - 17 ಮೇ 2021
- ಬದ್ರಿನಾಥ್ ಧಾಮ್ - 18 ಮೇ 2021