ETV Bharat / bharat

ಟ್ರಕ್​ ಚಾಲಕರಿಗೂ ಚಾಲನಾ ಸಮಯ ನಿಗದಿ : ಅಪಘಾತ ತಪ್ಪಿಸಲು ಕೇಂದ್ರದ ಹೊಸ ಪ್ಲಾನ್ - ವಾಣಿಜ್ಯ ಟ್ರಕ್​ ಚಾಲಕರು

ಟ್ರಕ್​ ಚಾಲನೆ ವೇಳೆ ನಿದ್ದೆ ಮಾಡುವುದನ್ನ ಪತ್ತೆ ಹಚ್ಚಲು ಸಂವೇದಕ ಅಳವಡಿಕೆ ಮಾಡಬೇಕು ಎಂದು ತಿಳಿಸಿರುವ ನಿತಿನ್ ಗಡ್ಕರಿ, ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದಿದ್ದಾರೆ..

Gadkari
Gadkari
author img

By

Published : Sep 21, 2021, 10:24 PM IST

ನವದೆಹಲಿ : ರಸ್ತೆ ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸದೊಂದು ಯೋಜನೆಗೆ ಕೈಹಾಕಿದ್ದಾರೆ. ವಾಣಿಜ್ಯ ಟ್ರಕ್​ ಚಾಲಕರಿಗೂ ಪೈಲಟ್​ಗಳ ಮಾದರಿ ಚಾಲನಾ ಸಮಯ ನಿಗದಿಗೊಳಿಸುವ ನಿರ್ಧಾರ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಪೈಲಟ್​ಗಳಂತೆ ಟ್ರಕ್​ ಚಾಲಕರಿಗೂ ಚಾಲನಾ ಸಮಯ ನಿಗದಿಪಡಿಸಬೇಕು. ಇದರಿಂದ ಆಯಾಸ ರಹಿತ ಡ್ರೈವ್​ ಮಾಡಬಹುದಾಗಿದ್ದು, ರಸ್ತೆ ಅಪಘಾತ ಕಡಿಮೆ ಮಾಡಬಹುದಾಗಿದೆ ಎಂದಿದ್ದಾರೆ.

  • I will also write letters to CMs and Collectors to ensure that District Road Committee meetings happen regularly. Emphasised on deciding driving hours for truck drivers of commercial vehicles, similar to pilots, to reduce fatigue-induced road accidents. pic.twitter.com/2R1jvAXAV7

    — Nitin Gadkari (@nitin_gadkari) September 21, 2021 " class="align-text-top noRightClick twitterSection" data=" ">

ಯುರೋಪ್ ದೇಶಗಳಲ್ಲಿ ಚಾಲನೆಯಲ್ಲಿರುವ ಮಾನದಂಡಗಳಿಗೆ ಸಮನಾದ ವಾಣಿಜ್ಯ ಸೇವೆಗಳಿಗೆ ಆನ್​ಬೋರ್ಡ್ ಸ್ಲೀಪ್​ ಡಿಟೆಕ್ಷನ್​​ ಸೆನ್ಸರ್​​ ಅಳವಡಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿರುವ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಟ್ರಕ್​ ಚಾಲನೆ ವೇಳೆ ನಿದ್ದೆ ಮಾಡುವುದನ್ನ ಪತ್ತೆ ಹಚ್ಚಲು ಸಂವೇದಕ ಅಳವಡಿಕೆ ಮಾಡಬೇಕು ಎಂದು ತಿಳಿಸಿರುವ ನಿತಿನ್ ಗಡ್ಕರಿ, ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದಿದ್ದಾರೆ.

ಇದನ್ನೂ ಓದಿರಿ: ಮಹಿಳೆಯಿಂದ ಪುರುಷ, ಪುರುಷನಿಂದ ಮಹಿಳೆಯರಿಗೆ ಮಸಾಜ್​ ನಿಷೇಧ : ದೆಹಲಿಯಲ್ಲಿ ಹೊಸ ರೂಲ್ಸ್​​!

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿತೆ ನಾಮನಿರ್ದೇಶನಗೊಂಡಿರುವ ಹೊಸ ಸದಸ್ಯರೊಂದಿಗೆ ನಡೆದ ಸಭೆಯಲ್ಲೂ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.