ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ- digital public infrastructure) ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಭಾರಿ ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಡಿಜಿಟಲ್ ವ್ಯವಹಾರ ಸುಗಮವಾಗಿ ನಡೆಯುತ್ತಿರುವುದನ್ನು ವಿಶ್ವ ಬ್ಯಾಂಕ್ ಶುಕ್ರವಾರ ಶ್ಲಾಘಿಸಿದೆ.
ಭಾರತವು ನವದೆಹಲಿಯಲ್ಲಿ ಆಯೋಜಿಸಿರುವ ಜಿ20 ಶೃಂಗಸಭೆಯ ಪೂರ್ವಭಾವಿಯಾಗಿ ಸಿದ್ಧಪಡಿಸಲಾದ ವಿಶ್ವಬ್ಯಾಂಕ್ನ ಜಿ20 ಜಾಗತಿಕ ಪಾಲುದಾರಿಕೆಯ (GPFI) ಸಮಗ್ರ ವರದಿಯಲ್ಲಿ ಡಿಪಿಐ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಅದು ಶ್ಲಾಘಿಸಿದೆ. ಕನಿಷ್ಠ 47 ವರ್ಷಗಳಲ್ಲಿ ಸಾಧಿಸಬೇಕಾದ ಗುರಿಯನ್ನು ಕೇವಲ 6 ವರ್ಷಗಳಲ್ಲಿ ಭಾರತ ಸಾಧಿಸಿದೆ ತೋರಿಸಿದೆ ಎಂದು ಪ್ರಶಂಸಿಸಿದೆ.
-
India's leap in financial inclusion, powered by Digital Public Infrastructure!
— Narendra Modi (@narendramodi) September 8, 2023 " class="align-text-top noRightClick twitterSection" data="
A G20 document prepared by the @WorldBank shared a very interest point on India's growth. India has achieved financial inclusion targets in just 6 years which would otherwise have taken at least 47…
">India's leap in financial inclusion, powered by Digital Public Infrastructure!
— Narendra Modi (@narendramodi) September 8, 2023
A G20 document prepared by the @WorldBank shared a very interest point on India's growth. India has achieved financial inclusion targets in just 6 years which would otherwise have taken at least 47…India's leap in financial inclusion, powered by Digital Public Infrastructure!
— Narendra Modi (@narendramodi) September 8, 2023
A G20 document prepared by the @WorldBank shared a very interest point on India's growth. India has achieved financial inclusion targets in just 6 years which would otherwise have taken at least 47…
ಯುಪಿಐ, ಜನ್ ಧನ್, ಆಧಾರ್, ಒಎನ್ಡಿಸಿ ಹಾಗೂ CoWin ನಂತಹ ಉಪಕ್ರಮಗಳ ಜೊತೆಗೆ ಭಾರತ ಯಾವ ರೀತಿ ದೃಢವಾದ ಡಿಜಿಟಲ್ ಸಾರ್ವಜನಿಕ ಸರಕುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆ ಎಂಬುದನ್ನು ವಿಶ್ವ ಬ್ಯಾಂಕ್ ವಿಶ್ಲೇಷಿಸಿದೆ.
ಭಾರತವು ಕಳೆದ ಒಂದು ದಶಕದಲ್ಲಿ ಅದರಲ್ಲೂ ವಿಶೇಷವಾಗಿ ಮೋದಿ ಸರ್ಕಾರದ ನಾಯಕತ್ವದಲ್ಲಿ ಡಿಪಿಐ ಕ್ಷೇತ್ರದಲ್ಲಿ ಗಮನಾರ್ಹವಾದ ಹೆಗ್ಗುರುತನ್ನೇ ಭಾರತ ಸಾಧಿಸಿದೆ. ಈ ಡಿಜಿಟಲ್ ಉಪಕ್ರಮಗಳು ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿರುವುದು ಮಾತ್ರವಲ್ಲದೆ, ಆರ್ಥಿಕ ದಕ್ಷತೆಯನ್ನು ಸುಧಾರಿಸಿದೆ, ನವೀನ ಆಡಳಿತ ಹಾಗೂ ಡಿಜಿಟಲ್ ರೂಪಾಂತರಕ್ಕಾಗಿ ಜಾಗತಿಕ ಮಾನದಂಡವನ್ನು ರೂಪಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಡಿಪಿಐ ಕ್ಷೇತ್ರದಲ್ಲಿನ ಸುಧಾರಣೆಗಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳು, ಡಿಪಿಐ ರೂಪುರೇಷೆ ರೂಪಿಸುವಲ್ಲಿ ಸರ್ಕಾರದ ನೀತಿ, ನಿಯಂತ್ರಣದ ಪ್ರಮುಖ ಪಾತ್ರವನ್ನು ಹಾಗೂ ಅದರಲ್ಲೂ ಜ್ಯಾಮ್ ಟ್ರಿನಿಟಿ (JAM Trinity) ಮಹತ್ವವನ್ನು ವರದಿ ಒತ್ತಿ ಹೇಳಿದೆ.
ಹಣಕಾಸಿನ ಸೇರ್ಪಡೆ- ಗಮನಾರ್ಹ ಮೈಲಿಗಲ್ಲು: ಐದು ದಶಕಗಳು ಬೇಕಾಗುವಂತಹದ್ದನ್ನು ಕೇವಲ ಆರು ವರ್ಷಗಳಲ್ಲಿ ಸಾಧಿಸಿರುವ ಭಾರತದ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟಕ್ಚರ್ ವಿಧಾನ ಒಂದು ಕ್ರಾತಿಯೇ ಸರಿ. ಈ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ್ದು JAM ಟ್ರಿನಿಟಿ. ಇದು 2008ರಲ್ಲಿ 25 ಶೇಕಡಾವಿದ್ದ ಹಣಕಾಸು ಸೇರ್ಪಡೆಯನ್ನು ಕಳೆದ ಆರು ವರ್ಷಗಳಲ್ಲಿ 80ಶೇಕಡಾಕ್ಕೆ ಹೆಚ್ಚಿಸಿದೆ. ಡಿಪಿಐ ಅಲ್ಲದೇ ಇದ್ದರೆ, ಈ ಪ್ರಮಾಣಕ್ಕೆ ತಲುಪಲು ಕನಿಷ್ಠ 47 ವರ್ಷಗಳು ಬೇಕಾಗಿತ್ತು. ಹಾಗಾಗಿ ಡಿಪಿಐ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ ಧನ್ಯವಾದ ತಿಳಿಸಿದೆ.
ಈ ಬೇಳವಣಿಗೆಯಲ್ಲಿ ಡಿಪಿಐಗಳ ಪಾತ್ರ ನಿಸ್ಸಂದೇಹವಾಗಿದೆ. ಜೊತೆಗೆ ಡಿಪಿಐಗಳ ಲಭ್ಯತೆಗೆ ಪೂರಕವಾಗಿದ್ದ ಇತರ ವ್ಯವಸ್ಥೆಗಳು ಹಾಗೂ ನೀತಿಗಳು ಉದಾಹರಣೆಗೆ ರಾಷ್ಟ್ರೀಯ ನೀತಿಗಳು, ಗುರುತಿನ ಪರಿಶೀಲನೆಗಾಗಿ ಆಧಾರ್ನಂತಹವು ಕೂಡ ನಿರ್ಣಾಯಕವಾಗಿವೆ.
ಈ ಬೆಳವಣಿಗೆಯ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆ. ಈ ಯೋಜನೆ ಪ್ರಾರಂಭವಾದ ನಂತರ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2015 ಮಾರ್ಚ್ನಲ್ಲಿ 147.2 ಮಿಲಿಯನ್ ಇದ್ದ ಸಂಖ್ಯೆ 2022ರ ವೇಳೆ 462 ಮಿಲಿಯನ್ಎ ಏರಿಕೆಯಾಗಿದೆ. ಅದರಲ್ಲೂ ಶೇ 56ರಷ್ಟಿದ್ದ ಖಾತೆ ಹೊಂದಿದ್ದ ಮಹಿಳೆಯರ ಸಂಖ್ಯೆ 260 ಮಿರಿಯನ್ಗೂ ಮೀರಿ ಏರಿಕೆಯಾಗಿದೆ.
ಇದಲ್ಲದೆ ಜನ್ ಧನ್ ಪ್ಲಸ್ ಕಾರ್ಯಕ್ರಮ ಕಡಿಮೆ ಆದಾಯವಿದ್ದ ಮಹಿಳೆಯರಲ್ಲಿ ಉಳಿತಾಯವನ್ನು ಪ್ರೇರೇಪಿಸಿದೆ. ಇದರಿಂದಾಗಿ 2023 ಏಪ್ರಿಲ್ ಹೊತ್ತಿಗೆ ಮಹಿಳಾ ಖಾತೆದಾರರ ಸಂಖ್ಯೆ 12 ಮಿಲಿಯನ್ಗೆ ತಲುಪಿದೆ.ಕೇವಲ ಐದು ತಿಂಗಳುಗಳಲ್ಲಿ ಈ ಖಾತೆಗಳಲ್ಲಿ ಸರಾಸರಿ ಬ್ಯಾಲೆನ್ಸ್ ಶೇ50 ಹೆಚ್ಚಳವಾಗಿದೆ. ಇದೆಲ್ಲದಕ್ಕೆ ಡಿಪಿಐ ಉಪಕ್ರಮಗಳು ಕಾರಣ. ಇದರಿಂದಾಗಿ 100 ಮಿಲಿಯನ್ ಕಡಿಮೆ ಆದಾಯದ ಮಹಿಳೆಯರನ್ನು ಉಳಿತಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕ್ಗಳು ಸರಿ ಸುಮಾರು 25,000 ಕೋಟಿ ಠೇವಣಿಗಳನ್ನು ಆಕರ್ಷಿಸಬಹುದು ಎಂಬುದನ್ನು ಅಂದಾಜಿಸಲಾಗಿದೆ.
ಸರ್ಕಾರದಿಂದ ವ್ಯಕ್ತಿಗೆ(G2P) ಪಾವತಿಗಳು: ಕಳೆದ ಒಂದು ದಶಕದಲ್ಲಿ ಭಾರತ ಡಿಪಿಐ ಅನ್ನು ಸುಧಾರಿಸುವ ಮೂಲಕ ವಿಶ್ವದ ಅತಿದೊಡ್ಡ ಡಿಜಿಟಲ್ ಸರ್ಕಾರದಿಂದ ವ್ಯಕ್ತಿಗೆ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆ. ಈ ವಿಧಾನದಿಂದ 53 ಕೇಂದ್ರ ಸರ್ಕಾರದ ಸಚಿವಾಲಯಗಳಿಂದ 312 ಪ್ರಮುಖ ಯೋಜನೆಗಳ ಮೂಲಕ ಫಲಾನಭವಿಗಳಿಗೆ ನೇರವಾಗಿ ಸುಮಾರು 361 ಶತಕೋಟಿ ಮೊತ್ತದ ಹಣ ವರ್ಗಾವಣೆ ಸುಗಮವಾಗಿ ಆಗಿದೆ. 2022 ಮಾರ್ಚ್ ಹೊತ್ತಿಗೆ 33 ಬಿಲಿಯನ್ ಉಳಿತಾಯಕ್ಕೆ ಕಾರಣವಾಗಿದೆ. ಇದು ಭಾರತದ ಜಿಡಿಪಿಯ ಸುಮಾರು 1.14 ಪ್ರತಿಶತಕ್ಕೆ ಸಮಾನವಾಗಿದೆ.
ಯುಪಿಐ- ಡಿಜಿಟಲ್ ಪಾವತಿ ಕ್ರಾಂತಿ: ಭಾರತದಲ್ಲಿ ಯುಪಿಐ ಪಾವತಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. ಕೇವಲ 2023 ಮೇ ಒಂದರಲ್ಲೇ ಸುಮಾರು 14.89 ಟ್ರಿಲಿಯನ್ ಮೌಲ್ಯದ, 9.41 ಬಿಲಿಯನ್ಗೂ ಹೆಚ್ಚು ವಹಿವಾಟು ಯುಪಿಐ ಪಾವತಿಯಲ್ಲಿ ದಾಖಲಾಗಿದೆ. 2022-23 ಆರ್ಥಿಕ ವರ್ಷದಲ್ಲಿ ಯುಪಿಐ ವಹಿವಾಟು ಭಾರತದ ಜಿಡಿಪಿಯ ಸುಮಾರು ಶೇ 50 ರಷ್ಟಿದೆ .
ಖಾಸಗಿ ವಲಯಕ್ಕೆ ಲಾಭ ತಂದ ಡಿಪಿಐ: ಸಾರ್ವಜನಿಕ ವಲಯದಲ್ಲಿ ಡಿಪಿಐಗಳ ವಿಸ್ತರಣೆಯಿಂದ ಖಾಸಗಿ ಸಂಸ್ಥೆಗಳಿಗೆ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚು ಮಾಡಿದೆ. ಕೆಲವು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (SME) ಸಾಲದಲ್ಲಿ 8% ಹೆಚ್ಚಿನ ಪರಿವರ್ತನೆ ದರವನ್ನು ಸಾಧಿಸಿವೆ.
KYCಗಾಗಿ ಬ್ಯಾಂಕ್‌ಗಳಿಗೆ ಅನುಸರಣೆಯ ಕಡಿಮೆ ವೆಚ್ಚ: ಡಿಪಿಐ ವ್ಯವಸ್ಥೆಯ ಭಾಗವಾದ ಇಂಡಿಯಾ ಸ್ಟಾಕ್ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಕಾರ್ಯವಿಧಾನಗಳನ್ನು ಡಿಜಿಟಲೀಕರಣಗೊಳಿಸಿರುವುದರ ಜೊತೆಗೆ ಸರಳಗೊಳಿಸಿವೆ. ಇ- ಕೆವೈಸಿಯನ್ನು ಬಳಸುವ ಬ್ಯಾಂಕ್ಗಳು ತಮ್ಮ ಅನುಸರಣೆಯ ವೆಚ್ಚವನ್ನು 0.12 ರಿಂದ ಕೇವಲ 0.06 ಕ್ಕೆ ಇಳಿಸಿವೆ. ಇದರಿಂದಾಗಿ ಬ್ಯಾಂಕಿಂಗ್ ಕಾರ್ಯಾಚರಣೆ ಸುವ್ಯವಸ್ಥೆಗೊಂಡಿರುವುದಲ್ಲದೆ, ಕಡಿಮೆ ಆದಾಯದ ಗ್ರಾಹಕರು ಹೆಚ್ಚು ಬರುವಂತೆ ಮಾಡಿದೆ.
ಕ್ರಾಸ್-ಬಾರ್ಡರ್ ಪಾವತಿಗಳು- ಜಾಗತಿಕ ಏಕೀಕರಣ: G20 ಯ ಹಣಕಾಸು ಸೇರ್ಪಡೆ ಆದ್ಯತೆಗಳೊಂದಿಗೆ ಜೋಡಿಸಲಾದ ಕ್ರಮದಲ್ಲಿ, ಫೆಬ್ರವರಿ 2023 ರಲ್ಲಿ ಕಾರ್ಯಾರಂಭಗೊಂಡ ಭಾರತ ಮತ್ತು ಸಿಂಗಾಪುರದ ನಡುವಿನ UPI-PayNow ಇಂಟರ್‌ಲಿಂಕಿಂಗ್, ವೇಗವಾಗಿ, ಅಗ್ಗದ ಮತ್ತು ಹೆಚ್ಚು ಪಾರದರ್ಶಕ ಗಡಿಯಾಚೆಯ ಪಾವತಿಗಳನ್ನು ಸುಗಮಗೊಳಿಸಿದೆ. ಈ ಉಪಕ್ರಮ ಭಾರತದ ಅಂತಾರಾಷ್ಟ್ರೀಯ ಹಣಕಾಸು ಏಕೀಕರಣವನ್ನು ಹೆಚ್ಚಿಸಿರುವುದು ಮಾತ್ರವಲ್ಲದೇ ಡಿಜಿಟಲ್ ಪಾವತಿಗಳು ಮತ್ತು ಆರ್ಥಿಕ ಮೂಲಸೌಕರ್ಯದಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿ ಮಾಡಿದೆ.
ಖಾತೆ ಸಂಗ್ರಾಹಕ (AA) ಫ್ರೇಮ್‌ವರ್ಕ್- ಡೇಟಾ ಮೂಲಸೌಕರ್ಯ ಬಲವರ್ಧನೆ: ಭಾರತದ ಅಕೌಂಟ್ ಅಗ್ರಿಗೇಟರ್ (AA) ಫ್ರೇಮ್‌ವರ್ಕ್ ರಾಷ್ಟ್ರದ ಡೇಟಾ ಮೂಲಸೌಕರ್ಯವನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಣದ ಎಲೆಕ್ಟ್ರಾನಿಕ್ ಸಮ್ಮತಿ ಚೌಕಟ್ಟಿನ ಮೂಲಕ ಗ್ರಾಹಕರು ಮತ್ತು ಉದ್ಯಮಗಳು ತಮ್ಮ ಒಪ್ಪಿಗೆ ಇದ್ದರೆ ಮಾತ್ರ ತಮ್ಮ ಡೇಟಾವನ್ನು ಹಂಚಿಕೊಳ್ಳಲು ಸಾಧ್ಯ.
ಡೇಟಾ ಸಬಲೀಕರಣ ಮತ್ತು ರಕ್ಷಣೆ ಆರ್ಕಿಟೆಕ್ಚರ್ (DEPA)- ವ್ಯಕ್ತಿಗಳ ಕೈಯಲ್ಲಿ ಡೇಟಾ ನಿಯಂತ್ರಣ: ಭಾರತದ ಡೇಟಾ ಎಂಪವರ್‌ಮೆಂಟ್ ಮತ್ತು ಪ್ರೊಟೆಕ್ಷನ್ ಆರ್ಕಿಟೆಕ್ಚರ್ (DEPA) ನಲ್ಲಿ ವ್ಯಕ್ತಿಗಳು ತಮ್ಮ ಡೇಟಾದ ಮೇಲೆ ನಿಯಂತ್ರಣ ಹೊಂದಬಹುದು. ಮಾತ್ರವಲದೆ ಅದನ್ನು ಪೂರೈಕೆದಾರರಾದ್ಯಂತ ಹಂಚಿಕೊಳ್ಳಲು ಅವರಿಗೆ ಅವಕಾಶವೂ ಇದೆ. ಈ ಕ್ರಾಂತಿಕಾರಿ ವಿಧಾನ ಗ್ರಾಹಕರ ಸಂಬಂಧಗಳನ್ನು ನಿರ್ಮಿಸಲು, ಹೊಸ ಮಾರುಕಟ್ಟೆ ಪ್ರವೇಶಿಸುವವರು ಹೆಚ್ಚು ಹೂಡಿಕೆಗಳ ಕಡ್ಡಾಯ ಇಲ್ಲದೆಯೇ ಸೂಕ್ತವಾದ ಉತ್ಪನ್ನ ಮತ್ತು ಸೇವೆಯ ನೀಡಲು ಉತ್ತೇಜಿಸುತ್ತದೆ. DEPA ಭಾರತದ ಡಿಜಿಟಲ್ ಮೂಲಸೌಕರ್ಯದ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: G-20 Summit: ದೆಹಲಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮನ