ಆಗ್ರಾ(ಉತ್ತರ ಪ್ರದೇಶ): ಜಿಲ್ಲೆಯ ತಹಸಿಲ್ ಫತೇಬಾದ್ ವ್ಯಾಪ್ತಿಯ ಧರಿಯೈ ಗ್ರಾಮದಲ್ಲಿ ಆಟವಾಡುತ್ತಿದ್ದಾಗ 4 ವರ್ಷದ ಬಾಲಕ ಶಿವ ಎಂಬಾತ ತೆರೆದ ಕೊಳಬೆ ಬಾವಿಗೆ ಬಿದ್ದಿದ್ದ ಬಾಲಕ ಸಾವು ಗೆದ್ದು ಬಂದಿದ್ದಾನೆ.. ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಕುಟುಂಬಸ್ಥರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ.
ರೈತ ಚೋಟೆಲಾಲ್ ಮನೆಯ ಮುಂದೆ ಕೊರೆಯಿಸಿದ್ದ 135 ಅಡಿಯ ಬೋರ್‌ವೆಲ್ ಹಾಳಾಗಿತ್ತು. ಎರಡು ದಿನಗಳ ಹಿಂದೆ ಚೋಟೆಲಾಲ್ ಪೈಪ್ ತೆಗೆದ ನಂತರ ಕೊಳವೆ ಬಾವಿಯನ್ನು ಮುಚ್ಚದೇ ಹಾಗೇ ಬಿಟ್ಟಿದ್ದರು ಎನ್ನಲಾಗ್ತಿದೆ. ಇಂದು ಬೋರ್‌ವೆಲ್ ಬಳಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಚೋಟೆಲಾಲ್ರ ನಾಲ್ಕು ವರ್ಷದ ಮಗ ಶಿವ ಅದರಲ್ಲಿ ಬಿದ್ದಿದ್ದಾನೆ. ಶಿವನ ಜೊತೆ ಆಟವಾಡುತ್ತಿದ್ದ ಮಕ್ಕಳು ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದರು.
ಮೊದಲು ಕುಟುಂಬಸ್ಥರು ಹಾಗೂ ಸ್ಥಳೀಯರು ಶಿವನನ್ನು ಬೋರ್ವೆಲ್ನಿಂದ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದ ಕಾರಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕ ಬೋರ್‌ವೆಲ್‌ನಲ್ಲಿ ಬಿದ್ದಿರುವ ಸುದ್ದಿ ತಿಳಿದ ತಕ್ಷಣ ಹತ್ತಿರದ ಹಳ್ಳಿಗಳ ಜನರು ಕೂಡ ಸ್ಥಳಕ್ಕೆ ದೌಡಾಯಿಸಿದ್ದರು. ಅಧಿಕಾರಿಗಳು ಬಾಲಕನಿಗೆ ಆಮ್ಲಜನಕ ಸಹ ಪೂರೈಸಿ ಕಾರ್ಯಾಚರಣೆ ನಡೆಸಿ ಶಿವನನ್ನು ಬದುಕಿಸಿದ್ದಾರೆ.
ಈಗ ಕುಟುಂಬಸ್ಥರು, ಸ್ಥಳೀಯರು ಬಾಲಕನ ಜೀವ ಉಳಿಸಿದ ಅಧಿಕಾರಿ, ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಸ್ವಲ್ಪ ಮಟ್ಟಿಗೆ ಅಸ್ವಸ್ಥಗೊಂಡಿರುವ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ:ನಾಳೆಯಿಂದ ಶೈಕ್ಷಣಿಕ ವರ್ಷ ಆರಂಭ.. ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದ ಶಿಕ್ಷಣ ಇಲಾಖೆ