ಪುಣೆ (ಮಹಾರಾಷ್ಟ್ರ): ಕಾರ್ತಿಕ ಮಾಸದ ನಿಮಿತ್ತ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಆಳಂದಿಯಲ್ಲಿರುವ ವಿಠಲ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಭಕ್ತರ ಮೇಲೆ ಪಿಕಪ್ ಟ್ರಕ್ ಹರಿದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪುಣೆಯ ಕನ್ಹೆ ಗ್ರಾಮದ ಮುಂಬೈ-ಪುಣೆ ಹೆದ್ದಾರಿ ಬಳಿ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಭಕ್ತರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ರೈಲು ಅಪಘಾತದಲ್ಲಿ ಬಲಿಯಾದ ಆನೆ ಗರ್ಭಿಣಿಯಾಗಿತ್ತು.. ಮರಣೋತ್ತರ ಪರೀಕ್ಷೆಯಲ್ಲಿ ಬಯಲು
ಆರೋಪಿ ಚಾಲಕನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ವಿಲಾಸ್ ಭೋಸಲೆ ತಿಳಿಸಿದ್ದಾರೆ.