ನವದೆಹಲಿ: ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ದೆಹಲಿಯಲ್ಲಿಂದು ಬಿಜೆಪಿ ಸೇರಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು.
ಇದೇ ಸಮಾರಂಭದಲ್ಲಿ ಪಂಜಾಬ್‌ನ ಹಾಲಿ ಕಾಂಗ್ರೆಸ್ ಶಾಸಕ ಫತೇಹ್ ಸಿಂಗ್ ಬಾಜ್ವಾ ಕೂಡ ಕಮಲ ಹಿಡಿದರು. ಈ ಇಬ್ಬರನ್ನು ಬಿಜೆಪಿ ನಾಯಕರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದ್ದಾರೆ.
ಪಂಜಾಬ್ ಮೂಲದ ದಿನೇಶ್ ಮೊಂಗಿಯಾ (44) ಟೀಂ ಇಂಡಿಯಾ ಪರ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಿದ್ದಾರೆ. ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶತಾಯಗತಾಯ ಅಧಿಕಾರಕ್ಕೆ ಬರಲು ಹಲವು ರಣತಂತ್ರಗಳನ್ನು ರೂಪಿಸುತ್ತಿದೆ.
ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೋವಿಡ್ ಸೋಂಕು; ಆಸ್ಪತ್ರೆಗೆ ದಾಖಲು