ಪುಣೆ (ಮಹಾರಾಷ್ಟ್ರ): ಪುಣೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮಹಾಮಾರಿ ಕೊರೊನಾದಿಂದ ಒಬ್ಬರಾದ ಮೇಲೆ ಒಬ್ಬರಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಮೃತರನ್ನು ಶಂಕರ್ ಜಾಧವ್, ಅವರ ಪತ್ನಿ ಅಲ್ಕಾ ಜಾಧವ್ (62), ಮಕ್ಕಳಾದ ರೋಹಿತ್ (38) ಮತ್ತು ಅತುಲ್ ಜಾಧವ್ (40) ಮತ್ತು ವೈಶಾಲಿ ಗಾಯಕ್ವಾಡ್ (43) ಎಂದು ಗುರುತಿಸಲಾಗಿದೆ.
ಮೃತವ್ಯಕ್ತಿಯ ಪೂಜೆಗೆ ಬಂದಿದ್ದ ನಾಲ್ವರು ಬಲಿ
ಜನವರಿ 15 ರಂದು ಕೋವಿಡ್ ಸೋಂಕಿಗೆ ಒಳಗಾಗಿ ಮೊದಲು ಶಂಕರ್ ಜಾಧವ್ ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಬಳಿಕ ಮೃತ ಶಂಕರ್ ಜಾಧವ್ ಹೆಸರಲ್ಲಿ ಪೂಜೆ ಮಾಡಿಸಲೆಂದು ಉಳಿದ ನಾಲ್ವರು ಒಂದೆಡೆ ಸೇರಿದ್ದಾರೆ. ಒಬ್ಬೊಬ್ಬರಾಗಿಯೇ ಅನಾರೋಗ್ಯಕ್ಕೆ ತುತ್ತಾಗಿದ್ದು, ಎಲ್ಲರ ವರದಿ ಪಾಸಿಟಿವ್ ಬರುತ್ತಾ ಹೋಗಿದೆ. ಕೇವಲ 15 ದಿನಗಳಲ್ಲಿಯೇ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ವರೂ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ದೇವರಂತೆ ಬಂದು ಮಗು ಕಾಪಾಡಿದ ರೈಲ್ವೆ ಸಿಬ್ಬಂದಿ.. ಎದೆ ಝಲ್ಲೆನಿಸುವ ದೃಶ್ಯ ನೋಡಿ
ಮಾರ್ಚ್ 30 ರಂದು ಖೇದ್ ಶಿವಪುರದ ಶ್ಲೋಕ್ ಆಸ್ಪತ್ರೆಯಲ್ಲಿ ವೈಶಾಲಿ, ಏಪ್ರಿಲ್ 3 ರಂದು ಬ್ಯಾನರ್ ಕೋವಿಡ್ ಕೇಂದ್ರದಲ್ಲಿ ರೋಹಿತ್, ಮರುದಿನ ಏಪ್ರಿಲ್ 4 ರಂದು ವಿನೋದ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅಲ್ಕಾ ಶಂಕರ್, ಏಪ್ರಿಲ್ 14 ರಂದು ದೇವಯಾನಿ ಆಸ್ಪತ್ರೆಯಲ್ಲಿ ಅತುಲ್ ಕೊನೆಯುಸಿರೆಳೆದಿದ್ದಾರೆ.
ಮೃತ ವೈಶಾಲಿ ಅವರ ಪತಿ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅತುಲ್ ಮತ್ತು ರೋಹಿತ್ಗೆ ಹೆಂಡತಿ-ಮಕ್ಕಳಿದ್ದು ಅವರಿಗೆ ಈ ನೋವಿನಿಂದ ಹೊರಬರಲು ಆಗುತ್ತಿಲ್ಲ.