ETV Bharat / bharat

ನಾಲ್ವರು ಸಹೋದರಿಯರು ಸೇರಿ ಐದು ಮಕ್ಕಳು ಸಾವು.. ಮೌನಕ್ಕೆ ಶರಣಾದ ಗ್ರಾಮ! - ನಾಲ್ವರು ಸಹೋದರಿ ಸೇರಿ ಐವರು ಮಕ್ಕಳು ಸಾವು ಸುದ್ದಿ

ಆಟವಾಡುತ್ತಿದ್ದ ಸಹೋದರ-ಸಹೋದರಿಯರು ಸೇರಿ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬಿಕಾನೆರ್​ ಜಿಲ್ಲೆಯಲ್ಲಿ ನಡೆದಿದೆ.

bikaner news  rajasthan news  Children died in Bikaner  Bikaner Children Death  Children closed in tank  Accident in Bikaner  latest hindi news  ನಾಲ್ವರು ಸಹೋದರಿ ಸೇರಿ ಐವರು ಮಕ್ಕಳು ಸಾವು  ಬಿಕಾನೆರ್​ನಲ್ಲಿ ನಾಲ್ವರು ಸಹೋದರಿ ಸೇರಿ ಐವರು ಮಕ್ಕಳು ಸಾವು  ನಾಲ್ವರು ಸಹೋದರಿ ಸೇರಿ ಐವರು ಮಕ್ಕಳು ಸಾವು ಸುದ್ದಿ  ಬಿಕಾನೆರ್​ ಅಪರಾಧ ಸುದ್ದಿ
ನಾಲ್ವರು ಸಹೋದರಿ ಸೇರಿ ಐವರು ಮಕ್ಕಳು ಸಾವು
author img

By

Published : Mar 22, 2021, 7:44 AM IST

ಬಿಕಾನೆರ್: ಆಟವಾಡುತ್ತಿದ್ದ ಐದು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರಿಂದ ನಿನ್ನೆ ಸಂಜೆ ಹಿಮ್ತಾಸರ್ ಗ್ರಾಮವೇ ಮೌನಕ್ಕೆ ಶರಣಾಗಿತ್ತು.

ಹಿಮ್ತಾಸರ್ ಗ್ರಾಮದಲ್ಲಿ ಮನೆಯಲ್ಲಿ ಆಡುತ್ತಿದ್ದ ಐವರು ಮಕ್ಕಳು ತೊಟ್ಟಿಯೊಂದರಲ್ಲಿ ಬಚ್ಚಿಟ್ಟುಕೊಂಡು ಒಳಗಡೆಯಿಂದ ತಮ್ಮನ್ನು ತಾವು ಲಾಕ್​ ಮಾಡಿಕೊಂಡಿದ್ದಾರೆ. ಬಳಿಕ ಹೊರ ಬರಲಾರದೇ ಅಲ್ಲೇ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತ ಮಕ್ಕಳಲ್ಲಿ ನಾಲ್ವರು ಬಾಲಕಿಯರು ಮತ್ತು ಬಾಲಕನೊಬ್ಬನಿದ್ದು, ಇವರು ಸಹೋದರ ಮತ್ತು ಸಹೋದರಿಯರು ಎಂದು ತಿಳಿದು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ನಪಾಸರ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ಮಕ್ಕಳ ಶವವನ್ನು ತೊಟ್ಟಿಯಿಂದ ಹೊರ ತೆಗೆದಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನು ನೋಡಿದ ಇಡೀ ಗ್ರಾಮವೇ ಮೌನಕ್ಕೆ ಶರಣಾಗಿತ್ತು.

ಈ ಘಟನೆ ಕುರಿತು ನಪಾಸರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.