ETV Bharat / bharat

ಕುಡಿತದ ಚಟ ತೀರಿಸಿಕೊಳ್ಳಲು 70 ಸಾವಿರಕ್ಕೆ ಕಂದಮ್ಮನ ಮಾರಿದ ಕಟುಕ ತಂದೆ!

ಕುಡಿಯಲು ಹಣ ಇಲ್ಲದ ತಂದೆಯೊಬ್ಬ ತನ್ನ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.

the father of a butcher who sold the baby
ಮತ್ತೆ ತಾಯಿಯ ಮಡಿಲು ಸೇರಿದ ಮಗು
author img

By

Published : Jan 2, 2021, 8:43 PM IST

ಹೈದರಾಬಾದ್​ : ಕಟುಕ ತಂದೆಯೊಬ್ಬ ತನ್ನ ಮದ್ಯ ದಾಹ ತೀರಿಸಿಕೊಳ್ಳುವ ಸಲುವಾಗಿ ಒಂದು ತಿಂಗಳ ಮಗುವನ್ನು 70,000 ರೂ.ಗೆ ಮಾರಾಟ ಮಾಡಿದ ಅಮಾನವೀಯ ಘಟನೆ ಹೈದರಾಬಾದ್‌ನ ಚಾದರ್‌ಘಾಟ್​ ಬಳಿ ನಡೆದಿದೆ.

ಕುಡಿಯಲು ಹಣವಿಲ್ಲದ ತಂದೆಯೇ ತನ್ನ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿ ಮಗುವಿನ ತಾಯಿ ಚಾದರ್‌ಘಾಟ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು.

ಓದಿ : ಅಸಾಧಾರಣ ನೆನಪಿನ ಶಕ್ತಿಯ ಪುಟಾಣಿ.. ಇಂಡಿಯನ್ ಬುಕ್ ಆಫ್ ರೆಕಾರ್ಡ್​ನಲ್ಲಿ ಮಂಡ್ಯದ ಪೋರಿಯ ಹೆಸರು..

ಮಹಿಳೆ ನೀಡಿದ ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು ಹಲವಡೆ ಹುಡುಕಾಟ ನಡೆಸಿದ್ದರು. ಎಲ್‌ಬಿ ನಗರ ಹಾಗೂ ಎನ್‌ಟಿಆರ್ ನಗರದ ಕೆಲವು ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ಆಧರಿಸಿ ಮಗು ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ, ಅಫ್ರೀನ್ ಎಂಬ ಮಹಿಳೆ ಬಳಿ ಮಗು ಇದೆ ಎಂದು ತಿಳಿದ ತಕ್ಷಣ ದಾಳಿ ಮಾಡಿದ ಪೊಲೀಸರು ಮಗುವನ್ನು ವಶಕ್ಕೆ ಪಡೆದು ತಾಯಿಯ ಮಡಿಲು ಸೇರಿಸಿದ್ದಾರೆ.

ಕುಡುಕ ತಂದೆ ಅಷ್ಟೇ ಅಲ್ಲದೇ ಮಗುವಿನ ಮಾರಾಟದಲ್ಲಿ ಹಲವರ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.