ಮೇಷ: ನಿಮ್ಮ ಧಾರಾಳ ಕ್ರಮದಿಂದ ನೀವು ನಿಮ್ಮ ಮೌಲ್ಯವನ್ನು ಪ್ರದರ್ಶಿಸುತ್ತೀರಿ. ನೀವು ಕೆಲಸದಲ್ಲಿ ಬಹುಶಃ ಮಹತ್ತರ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸುತ್ತೀರಿ, ಮತ್ತು ಇವು ಅತ್ಯಂತ ಅನುಕೂಲಕರವಾಗಿರುತ್ತವೆ. ಇಷ್ಟೆಲ್ಲ ಇದ್ದರೂ ಅಗತ್ಯವಿರುವ ಮಾನ್ಯತೆಯನ್ನು ನೀವು ಪಡೆಯುವುದಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ನಿರುತ್ಸಾಹಗೊಳ್ಳದೆ ಹಿನ್ನಡೆಗಳನ್ನು ಎದುರಿಸುವುದನ್ನು ಕಲಿಯಿರಿ.
ವೃಷಭ: ಈ ದಿನ ನೀವು ನಿಮ್ಮ ಅದೃಷ್ಟಕ್ಕೆ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ. ಯಾವುದೇ ಒಂದು ದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.
ಮಿಥುನ: ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಪರಿಪೂರ್ಣತೆಯನ್ನು ಬಯಸುತ್ತೀರಿ, ಮತ್ತು ನೀವು ಈ ತತ್ವವನ್ನು ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಅಭ್ಯಾಸ ಮಾಡುತ್ತೀರಿ. ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಿಮ್ಮ ಎಲ್ಲ ಶಕ್ತಿಗಳನ್ನೂ ಕ್ರೋಢೀಕರಿಸುವುದನ್ನು ದೃಢಪಡಿಸಿಕೊಳ್ಳಿ.
ಕರ್ಕಾಟಕ: ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ನೀವು ನಿಮ್ಮ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಬಿಡುವಿಲ್ಲದ ಕೆಲಸದಿಂದ ನೀವು ನಿತ್ರಾಣಗೊಳ್ಳುತ್ತೀರಿ. ಆದ್ದರಿಂದ ಅದು ನಿಮಗೆ ಸಾಕಷ್ಟು ಒತ್ತಡ ಮತ್ತು ಆತಂಕ ಉಂಟು ಮಾಡುತ್ತದೆ.
ಸಿಂಹ: ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನವಾಗಿದೆ.
ಕನ್ಯಾ: ಅಗೋಚರ ಭಯವೊಂದು ನಿಮ್ಮ ಮನಸ್ಸನ್ನು ಇಂದು ಕಾಡುತ್ತಿರುತ್ತದೆ. ದಿನ ಪ್ರಗತಿಯಾದಂತೆ ಈ ನೆರಳು ಮತ್ತಷ್ಟು ಹೆಚ್ಚಾಗಿ ಬೆಳೆಯುತ್ತದೆ. ನಿಮ್ಮ ವಿದೇಶಿ ಮಿತ್ರರಿಗೆ ನೀವು ಅತಿಯಾಗಿ ಖರ್ಚು ಮಾಡುತ್ತಿರುವುದನ್ನು ನೀವು ಕಾಣುತ್ತೀರಿ. ಈ ನಿಟ್ಟಿನಲ್ಲಿ ಇಂದು ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.
ತುಲಾ: ನಿಮ್ಮ ಮಕ್ಕಳು ಮಾಡುವ ಸಾಧನೆ ನಿಮಗೆ ಅವರ ಕುರಿತು ಹೆಮ್ಮೆಯ ಭಾವನೆ ಮೂಡಿಸುತ್ತದೆ. ನೀವು ಹಣಕಾಸಿನ ಅನುಕೂಲವನ್ನು ವೇತನ ಹೆಚ್ಚಳ ಅಥವಾ ಪಿತ್ರಾರ್ಜಿತವಾಗಿ ಪಡೆಯುತ್ತೀರಿ. ರಿಯಲ್ ಎಸ್ಟೇಟ್ ಅಥವಾ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಮನಾರ್ಹ ಗಳಿಕೆ ಪಡೆಯುತ್ತೀರಿ.
ವೃಶ್ಚಿಕ : ನಿಮ್ಮ ಜೀವನದಲ್ಲಿ ಮತ್ತೊಂದು ಸಾಧಾರಣ ದಿನವಾಗಿದ್ದು, ಉತ್ಸಾಹ ಹುಟ್ಟಿಸುವ ಯಾವುದೂ ನಿಮಗಾಗಿ ಇಲ್ಲ. ಆದಾಗ್ಯೂ, ಉತ್ಸಾಹದಿಂದಿರಿ ಮತ್ತು ಜೀವನಕ್ಕೆ ಕೊಂಚ ಮಸಾಲೆ ತರಲು ಪ್ರಯತ್ನ ನಡೆಸುತ್ತಲೇ ಇರಿ. ಗ್ರಹಗಳು ತಮ್ಮ ಮನಸ್ಥಿತಿ ಎಂದು ಬದಲಾಯಿಸಿಕೊಳ್ಳುತ್ತವೆ ಹಾಗೂ ಉತ್ಸಾಹದ ಭವಿಷ್ಯ ರೂಪಿಸುತ್ತವೆ ಎಂದು ನಿಮಗೆ ಗೊತ್ತಿಲ್ಲ. ಭರವಸೆಯನ್ನು ಜೀವಂತವಾಗಿರಿಸಿ.
ಧನು: ನೀವು ನಿಮ್ಮ ವಿದೇಶಗಳ ಸಂಪರ್ಕಗಳನ್ನು ಬಳಸಿಕೊಳ್ಳುವುದರಿಂದ ನಿಮ್ಮ ವ್ಯಾಪಾರ ವಿಸ್ತರಿಸಲು ಸಜ್ಜಾಗಿದೆ. ನಿಮ್ಮ ಗುರಿಗಳನ್ನು ಪೂರೈಸಿಕೊಳ್ಳಲು ಪರಿಣಾಮಕಾರಿ ಸಂವಹನ ಕೌಶಲ್ಯಗಳು ನಿಮಗೆ ನೆರವಾಗಲಿದೆ. ಅಲ್ಲದೆ, ನಿಮ್ಮ ತಂಡದ ನಾಯಕನಾಗಲು ನೀವು ಎಲ್ಲ ಸರಿಯಾದ ನಡೆಗಳನ್ನೇ ಅನುಸರಿಸುತ್ತಿದ್ದೀರಿ.
ಮಕರ: ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದೇ ಇದ್ದರೆ, ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.
ಕುಂಭ: ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.
ಮೀನ: ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.