ನವದೆಹಲಿ : ರಾಜ್ಯಸಭೆಯಲ್ಲಿ ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ಕುರಿತು ಚರ್ಚಿಸುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು "ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವು "ತಾರೀಖ್ ಪೆ ತಾರೀಖ್ ಯುಗ"ದ ಅಂತ್ಯಕ್ಕೆ ನಾಂದಿ ಹಾಡುತ್ತದೆ. ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತದೆ" ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಮೂರು ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ ಮತ್ತು ಭಾರತೀಯ ಸಾಕ್ಷಾ (ಎರಡನೇ) ಮಸೂದೆ ಯನ್ನು ಅಂಗೀಕರಿಸಲಾಗಿದೆ.
ಈ ಮಸೂದೆಗಳನ್ನು ಕೇಂದ್ರ ಗೃಹ ಸಚಿವರು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದರು, ಇದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಹೊಸ ಕ್ರಿಮಿನಲ್ ಕಾನೂನಿನ ಅನುಷ್ಠಾನದ ಮೇಲೆ ಸೆಕ್ಷನ್ 375 ಮತ್ತು ಸೆಕ್ಷನ್ 376 ಅನ್ನು ಅತ್ಯಾಚಾರಕ್ಕೆ ಸಮಾನವಾದ ಸೆಕ್ಷನ್ 63 ರಿಂದ ಬದಲಾಯಿಸಲಾಗುತ್ತದೆ. ಗ್ಯಾಂಗ್ ರೇಪ್ ಅನ್ನು ಸೆಕ್ಷನ್ 70 ರ ಅಡಿ ವ್ಯವಹರಿಸಲಾಗುವುದು ಮತ್ತು ಸೆಕ್ಷನ್ 302 ರ ಬದಲಿಗೆ ಸೆಕ್ಷನ್ 101 ಕೊಲೆಗೆ ಅನ್ವಯಿಸುತ್ತದೆ. ಈ ಮೂರು ಕ್ರಿಮಿನಲ್ ಕಾನೂನು ಮಸೂದೆಗಳು ಈಗಾಗಲೇ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿವೆ. ಈಗ, ಈ ಮಸೂದೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ನಂತರ ಕಾನೂನು ಆಗುತ್ತವೆ. ಈ ಮಸೂದೆಗಳ ಅಂಗೀಕಾರದ ನಂತರ ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ವಿಧೇಯಕಗಳ ಮೇಲಿನ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, "ನಾನು ಇಂದು ರಾಜ್ಯಸಭೆಯಲ್ಲಿ ತಂದಿರುವ ಮಸೂದೆಯ ಉದ್ದೇಶ ಶಿಕ್ಷಿಸುವುದಲ್ಲ, ನ್ಯಾಯ ನೀಡುವುದಾಗಿದೆ. ಈ ಮಸೂದೆಗಳಲ್ಲಿ ವ್ಯಾಸ, ಬೃಹಸ್ಪತಿ, ಕಾತ್ಯಾಯನ, ಚಾಣಕ್ಯ, ವಾತ್ಸಾಯನ, ದೇವನಾಥ ಠಾಕೂರ್, ಜಯಂತ ಭಟ್ಟ, ರಘುನಾಥ ಶಿರೋಮಣಿ ಸೇರಿದಂತೆ ಇತರ ಹಲವಾರು ಜನರು ನೀಡಿದ ನ್ಯಾಯದ ಸಿದ್ಧಾಂತದ ಪರಿಕಲ್ಪನೆಯನ್ನು ಸೇರ್ಪಡೆ ಮಾಡಲಾಗಿದೆ" ಎಂದರು.
"ದೇಶದ ತೊಂಬತ್ತೇಳು ಪ್ರತಿಶತ ಪೊಲೀಸ್ ಠಾಣೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು 82 % ಪೊಲೀಸ್ ಠಾಣೆಗಳ ದಾಖಲೆಗಳು ಡಿಜಿಟಲ್ ಆಗಿವೆ. ಎಫ್‌ಐಆರ್‌ನಿಂದ ತೀರ್ಪಿನವರೆಗೆ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಆಗಿರುತ್ತದೆ. ಶೂನ್ಯ ಎಫ್‌ಐಆರ್‌ಗಳು ಇರುತ್ತವೆ" ಎಂದು ಹೇಳಿದರು.
'ಸ್ವರಾಜ್' ಎಂದರೆ ಒಬ್ಬರ ಸ್ವಂತ ಧರ್ಮವನ್ನು ಮುಂದಕ್ಕೆ ಕೊಂಡೊಯ್ಯುವುದು, ಒಬ್ಬರ ಸ್ವಂತ ಭಾಷೆಯನ್ನು ಮುನ್ನಡೆಸುವವನು. ಸ್ವ-ಸಂಸ್ಕೃತಿಯನ್ನು ಮುನ್ನಡೆಸುವವನು 'ಸ್ವರಾಜ್'. ಸ್ವರಾಜ್ಯವನ್ನು ಸ್ಥಾಪಿಸುವವರನ್ನು 'ಸ್ವರಾಜ್' ಎಂದು ಕರೆಯಲಾಗುತ್ತದೆ ಎಂದರು. ಬಳಿಕ ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ , ಗಾಂಧೀಜಿ ಅವರು, ಆಡಳಿತದಲ್ಲಿನ ಬದಲಾವಣೆಗಾಗಿ ಹೋರಾಡಲಿಲ್ಲ ಆದರೆ ಅವರು 'ಸ್ವರಾಜ್' (ಸ್ವಯಂ ಸ್ವಾತಂತ್ರ್ಯ) ಕ್ಕಾಗಿ ಹೋರಾಡಿದರು ಎಂದು ಕೇಂದ್ರ ಗೃಹ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಿದ ನಂತರ ತಾರೀಖ್ ಪೆ ತಾರೀಖ್ ಯುಗವು ಕೊನೆಗೊಳ್ಳುತ್ತದೆ ಎಂದು ನಾನು ಈ ಸದನಕ್ಕೆ ಭರವಸೆ ನೀಡುತ್ತೇನೆ. ಯಾವುದೇ ಸಂತ್ರಸ್ತರಿಗೆ ಮೂರು ವರ್ಷಗಳಲ್ಲಿ ನ್ಯಾಯ ಸಿಗುವಂತಹ ವ್ಯವಸ್ಥೆಯನ್ನು ದೇಶದಲ್ಲಿ ಸ್ಥಾಪಿಸಲಾಗುವುದು. ನಾಲ್ಕು ದಶಕಗಳಿಂದ ಭಯೋತ್ಪಾದನೆಯ ತೀವ್ರತೆಯನ್ನು ಎದುರಿಸುತ್ತಿದ್ದರೂ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಭಯೋತ್ಪಾದನೆಯ ವ್ಯಾಖ್ಯಾನ ಇರಲಿಲ್ಲ, ಈಗ ಭಯೋತ್ಪಾದನೆಯ ವ್ಯಾಖ್ಯಾನವನ್ನು ಅದರಲ್ಲಿ ಸೇರಿಸಲಾಗಿದೆ ಎಂದು ಶಾ ಇದೇ ವೇಳೆ ಸದನಕ್ಕೆ ಹೇಳಿದರು.
ಇದನ್ನೂ ಓದಿ : "ನ್ಯಾಯಾಲಯ ತಾರೀಖ್ ಪೆ ತಾರೀಖ್ ಆಗಲು ಸಾಧ್ಯವಿಲ್ಲ..ಅನಗತ್ಯವಾಗಿ ಪ್ರಕರಣಗಳನ್ನು ಮುಂದೂಡಬೇಡಿ" ಸಿಜೆಐ ಚಂದ್ರಚೂಡ್
"ದೇಶದ್ರೋಹದ ಕಾನೂನಿನ ಇಂಗ್ಲಿಷ್ ಪರಿಕಲ್ಪನೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ವಿರುದ್ಧ ಯಾರು ಬೇಕಾದರೂ ಮಾತನಾಡಬಹುದು. ಆದರೆ, ಇನ್ನು ಮುಂದೆ ದೇಶದ ವಿರುದ್ಧ ಮಾತನಾಡುವಂತಿಲ್ಲ. ದೇಶದ ವಿರುದ್ಧ ಮಾತನಾಡಿದರೆ ಅಥವಾ ಕ್ರಮ ತೆಗೆದುಕೊಂಡರೆ ಶಿಕ್ಷೆಗೆ ಅವಕಾಶವಿದೆ. ಹೊಸ ಕಾನೂನಿನ ಅನುಷ್ಠಾನದಿಂದ ನ್ಯಾಯವನ್ನು ತ್ವರಿತವಾಗಿ ಒದಗಿಸಲಾಗುತ್ತದೆ. ಬಡವರಿಗೆ ನ್ಯಾಯವು ದುಬಾರಿಯಾಗುವುದಿಲ್ಲ. ಒಂಬತ್ತು ಹೊಸ ವಿಭಾಗಗಳು ಮತ್ತು 39 ಹೊಸ ಉಪವಿಭಾಗಗಳನ್ನು ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತೆಗೆ ಸೇರಿಸಲಾಗಿದೆ, 44 ಹೊಸ ವ್ಯಾಖ್ಯಾನಗಳು ಮತ್ತು ವಿವರಣೆಗಳನ್ನು ಸೇರಿಸಲಾಗಿದೆ. 14 ವಿಭಾಗಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಗೆ 21 ಹೊಸ ಅಪರಾಧಗಳನ್ನು ಸೇರಿಸಲಾಗಿದೆ, ಇದರಲ್ಲಿ ಒಂದು ಹೊಸ ಅಪರಾಧವೆಂದರೆ ಗುಂಪು ಹತ್ಯೆ" ಎಂದರು.
ಅದೇ ರೀತಿ, ಭಾರತೀಯ ಸಾಕ್ಷಾ (ಎರಡನೇ) ಮಸೂದೆಯ ಅಡಿ 170 ವಿಭಾಗಗಳು ಇರುತ್ತವೆ, 24 ವಿಭಾಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ವಿಭಾಗಗಳು ಮತ್ತು ಉಪವಿಭಾಗಗಳನ್ನು ಸೇರಿಸಲಾಗಿದೆ ಎಂದು ಸದನಕ್ಕೆ ಅಮಿತ್ ಶಾ ಎಳೆ ಎಳೆಯಾಗಿ ವಿವರಿಸಿದರು.