ETV Bharat / bharat

14ರ ಬಾಲಕಿ ಮೇಲೆ ಅತ್ಯಾಚಾರ.. 64ರ ವೃದ್ಧನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪೋಕ್ಸೋ ಕೋರ್ಟ್​ - ಉತ್ತರಪ್ರದೇಶದಲ್ಲಿ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ

ಪ್ರಸಾದ ನೀಡುವ ನೆಪದಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಮನೆಗೆ ಕರೆದು ಅವಳ ಮೇಲೆ ಅತ್ಯಾಚಾರವೆಸಗಿದ್ದ ಜಿಲ್ಲೆಯ ಕಿಲಾ ಪ್ರದೇಶದ ನಿವಾಸಿಯಾದ ಪಾದ್ರಿ ದಿನೇಶ್​ ಮಿಶ್ರಾಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

life imprisonment
ಅಪ್ರಾಪ್ತೆ ಮೇಲೆ ಅತ್ಯಾಚಾರ
author img

By

Published : Dec 5, 2021, 5:06 PM IST

ಬರೇಲಿ(ಉತ್ತರಪ್ರದೇಶ): ಪ್ರಸಾದ ನೀಡುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ವೃದ್ಧನಿಗೆ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಾದ್ರಿ ಎಂದು ಹೇಳಲಾಗುವ ದಿನೇಶ್​ ಮಿಶ್ರಾ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಜಿಲ್ಲೆಯ ಕಿಲಾ ಪ್ರದೇಶದ ನಿವಾಸಿಯಾದ ಪಾದ್ರಿ ದಿನೇಶ್​ ಮಿಶ್ರಾ ಆಗಸ್ಟ್​ 26 ರಂದು ಪ್ರಸಾದ ನೀಡುವ ನೆಪದಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಮನೆಗೆ ಕರೆದು ಅವಳ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆ ನೀಡಿದ ದೂರಿನ ಮೇರೆಗೆ ವೃದ್ಧನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸೆಪ್ಟೆಂಬರ್​ 16 ರಂದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮೀಸೆ ಚಿಗುರದ ಹುಡುಗರಿಂದ ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ : 6 ಬಾಲಕರು ವಶಕ್ಕೆ

ತನಿಖೆಯ ನಂತರ ಪೊಲೀಸರು ನವೆಂಬರ್​ 16 ರಂದು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮ್​ದಯಾಳ್​, ಪಾದ್ರಿ ದಿನೇಶ್​ ಮಿಶ್ರಾರನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ಅಲ್ಲದೇ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ಪ್ರಕಟಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.