ETV Bharat / bharat

ಡ್ರೋನ್​ ಮೂಲಕ ಸ್ಫೋಟಕಗಳ ಕಳ್ಳಸಾಗಣೆ.. ಗಡಿಯಲ್ಲಿ ಮೂರು ಟೈಮರ್​ ಐಇಡಿ ಪತ್ತೆ ಹಚ್ಚಿದ ಸೇನೆ

ಅಖ್ನೂರ್ ಸೆಕ್ಟರ್‌ನ ಕನಚಕ್‌ನ ಕಾಂಟೋವಾಲಾ-ದಯಾರನ್ ಪ್ರದೇಶದಿಂದ ಟಿಫಿನ್ ಬಾಕ್ಸ್‌ಗಳಲ್ಲಿ ಟೈಮರ್‌ಗಳನ್ನು ಹೊಂದಿಸಿ ಪ್ಯಾಕ್ ಮಾಡಲಾದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ.

Drone activity in Jammu, EID recovered from Kanachak, Jammu district news, ಜಮ್ಮುವಿನಲ್ಲಿ ಡ್ರೋನ್​ ಚಲನವಲನ, ಕನಚಕ್​ನಲ್ಲಿ ಐಇಡಿ ವಶ, ಜಮ್ಮು ಜಿಲ್ಲೆಯ ಸುದ್ದಿ,
ವೈಮಾನಿಕ ಮಾರ್ಗದ ಮೂಲಕ ಸ್ಫೋಟಕಗಳನ್ನು ಕಳ್ಳಸಾಗಣೆ
author img

By

Published : Jun 7, 2022, 10:38 AM IST

Updated : Jun 7, 2022, 10:47 AM IST

ಜಮ್ಮು: ವೈಮಾನಿಕ ಮಾರ್ಗದ ಮೂಲಕ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಹೊಸ ಪ್ರಯತ್ನವನ್ನು ಉಗ್ರರು ಮಾಡಿದ್ದು, ಪಾಕ್​ನ ಕುತಂತ್ರ ಬುದ್ಧಿ ಅರಿತ ಭಾರತೀಯ ಸೇನೆ ಜಮ್ಮುವಿನ ಗಡಿ ಪ್ರದೇಶದಲ್ಲಿ ಡ್ರೋನ್‌ನಿಂದ ಬೀಳಿಸಲಾದ ಮೂರು ಮ್ಯಾಗ್ನೆಟಿಕ್ ಐಇಡಿಗಳನ್ನು ವಶಪಡಿಸಿಕೊಂಡಿದೆ.

ಅಖ್ನೂರ್ ಸೆಕ್ಟರ್‌ನ ಕನಚಕ್‌ನ ಕಾಂಟೋವಾಲಾ-ದಯಾರನ್ ಪ್ರದೇಶದಿಂದ ಟಿಫಿನ್ ಬಾಕ್ಸ್‌ಗಳಲ್ಲಿ ಟೈಮರ್‌ಗಳನ್ನು ಹೊಂದಿಸಿ ಪ್ಯಾಕ್ ಮಾಡಲಾದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ.

ಓದಿ: ಕುಪ್ವಾರಾ​ ಎನ್​ಕೌಂಟರ್: ಪಾಕ್ ಭಯೋತ್ಪಾದಕ ಸೇರಿ ಎಲ್​​ಇಟಿಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಸೋಮವಾರ ರಾತ್ರಿ ಭಾರತ-ಪಾಕಿಸ್ತಾನ ಗಡಿಯ ಜಮ್ಮು ಜಿಲ್ಲೆಯಲ್ಲಿ ಬಿಎಸ್‌ಎಫ್ ಪಡೆಗಳಿಗೆ ಗುಂಡು ಹಾರಿಸುವ ಶಬ್ದ ಕೇಳಿದ್ದು, ಈ ಸ್ಥಳದಲ್ಲಿ ಡ್ರೋನ್​ನ ಚಲನವಲನ ನಡೆದಿರುವುದರ ಬಗ್ಗೆ ಯೋಧರು ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸ್ ಪಾರ್ಟಿಯನ್ನು ನಿಯೋಜಿಸಿ ಆ ಪ್ರದೇಶದಲ್ಲಿ ಆ್ಯಂಟಿ-ಡ್ರೋನ್ ಸ್ಟ್ಯಾಂಡರ್ಡ್ ಆಪರೇಟಿಂಗ್ ವಿಧಾನವನ್ನು ಕೈಗೊಂಡರು ಎಂದು ಎಡಿಜಿಪಿ ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಕನಚಕ್‌ನ ದಯಾರನ್ ಪ್ರದೇಶದಲ್ಲಿ ಡ್ರೋನ್ ಅನ್ನು ಗಮನಿಸಿದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೋನ್​ ಕ್ಯಾರಿ ಮಾಡುತ್ತಿದ್ದ ವಸ್ತು ಕೆಳಗೆ ಬಿದ್ದಿದೆ. ಆದ್ರೆ ಡ್ರೋನ್​ಗೆ ಶೂಟ್​ ಮಾಡಲು ಸಾಧ್ಯವಾಗಲಿಲ್ಲ. ಡ್ರೋನ್​ ಕ್ಯಾರಿ ಮಾಡುತ್ತಿದ್ದ ವಸ್ತುವನ್ನು ಪರಿಶೀಲನೆ ನಡೆಸುತ್ತಿದ್ದಾಗ ಮೂರು ಮ್ಯಾಗ್ನೆಟಿಕ್ ಐಇಡಿಗಳು ಕಂಡು ಬಂದಿವೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

Last Updated : Jun 7, 2022, 10:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.