ETV Bharat / bharat

ಒಂದೇ ಕಾಲಲ್ಲಿ 750 ಕಿಮೀ ದೂರ ಸಾಗಿಬಂದು ಅಯ್ಯಪ್ಪನ ದರ್ಶನ ಪಡೆದ ವಿಶೇಷಚೇತನ! - 750 ಕಿಲೋ ಮೀಟರ್ ನಡೆದು ಬಂದ ವಿಶೇಷ ಚೇತನ ವ್ಯಕ್ತಿ

ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ವಿಶೇಷ ಚೇತನ ವ್ಯಕ್ತಿಯೊಬ್ಬರು ಸುಮಾರು 750 ಕಿಲೋ ಮೀಟರ್​ ನಡೆದುಕೊಂಡೇ ಸಾಗಿ ಬಂದಿದ್ದಾರೆ. ಸ್ವಾಮಿಯ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿರುವ ಇವರಿಗೆ ದೇವಸ್ಥಾನದಲ್ಲಿ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.

Disabled man from AP visits Sabarimala
Disabled man from AP visits Sabarimala
author img

By

Published : Jan 4, 2022, 6:21 PM IST

ಪತ್ತನಂತಿಟ್ಟ(ಕೇರಳ): ವಿಶ್ವಪ್ರಸಿದ್ಧ ದೇವಸ್ಥಾನಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವೂ ಒಂದು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಇಲ್ಲಿಗೆ ಭಕ್ತರು ಬಸ್​, ರೈಲು ಹಾಗೂ ಇನ್ನಿತರ ವಾಹನ ಸೌಲಭ್ಯದೊಂದಿಗೆ ಬರುತ್ತಾರೆ. ಆದರೆ, ಇಲ್ಲೊಬ್ಬ ಅಯ್ಯಪ್ಪನ ಪರಮ ಭಕ್ತ, ವಿಶೇಷ ಚೇತನ ವ್ಯಕ್ತಿ ಸುಮಾರು 750 ಕಿಲೋ ಮೀಟರ್​ ನಡೆದುಕೊಂಡೇ ಬಂದು ಭಕ್ತಿಯ ಪರಾಕಾಷ್ಠೆ ಮರೆದಿದ್ದಾರೆ.

ಆಂಧ್ರಪ್ರದೇಶ ನೆಲ್ಲೂರಿನ ಅಕರಪಕ್ಕ ಸುರೇಶ್​ ಎಂಬವರು ತಮ್ಮ ಹುಟ್ಟೂರಿನಿಂದ ಕೇರಳದ ಅಯ್ಯಪ್ಪನ ಸನ್ನಿಧಿಯವರೆಗೆ ಅಂದಾಜು 750 ಕಿಲೋ ಮೀಟರ್​​ ನಡೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ

ಅಖಿಲ ಭಾರತ ಅಯ್ಯಪ್ಪ ದೀಕ್ಷಾ ಪ್ರಚಾರ ಸಭೆಯ ಸದಸ್ಯರಾಗಿರುವ ಸುರೇಶ್,​ ಕಳೆದ 105 ದಿನಗಳಿಂದ 750 ಕಿಲೋ ಮೀಟರ್​ ದೂರ ಕ್ರಮಿಸಿದ್ದು, ಶಬರಿಮಲೆ ದೇವಸ್ಥಾನ ತಲುಪಿದ್ದಾರೆ. ವಿಶೇಷ ಚೇತನ ವ್ಯಕ್ತಿಯಾಗಿರುವ ಇವರು, ನಡೆದುಕೊಂಡು ಬರಲು ಊರುಗೋಲು ಬಳಸಿದ್ದಾರೆ.

ಕಳೆದ ಸೆಪ್ಟೆಂಬರ್​​ 20ರಂದು ಆಂಧ್ರಪ್ರದೇಶದ ನೆಲ್ಲೂರಿನಿಂದ ಇವರು ಕಾಲ್ನಡಿಗೆ ಆರಂಭಿಸಿದ್ದರು. ಇದೀಗ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಆಗಮಿಸಿದ್ದು ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.