ದಿಂಡಿಗಲ್( ತಮಿಳುನಾಡು): 'ನಿನ್ನನ್ನು ಇರುವೆಯಂತೆ ತುಳಿದು ಬಿಡುತ್ತೇನೆ' ಎಂದು ಜನರು ವ್ಯಂಗ್ಯವಾಗಿ ಹೇಳಬಹುದು. ಆದರೆ, ದಿಂಡಿಗಲ್ ಸಮೀಪದ ಗುಡ್ಡಗಾಡು ಗ್ರಾಮಗಳಲ್ಲಿ ವಾಸಿಸುವ ಜನರು ಇರುವೆಗಳನ್ನ ನೋಡಿ ಭಯ ಭೀತರಾಗಲು ಪ್ರಾರಂಭಿಸಿದ್ದಾರೆ.
ನಾಥಂ ಸಮೀಪದ ಕರಂದಮಲೈ ಪಕ್ಕದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಕಳೆದ ಕೆಲವು ದಿನಗಳಿಂದ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಸಾಕಿದ್ದ ಕುರಿ, ಕೋಳಿ, ಜಾನುವಾರುಗಳಿಗೆ ದೃಷ್ಟಿ ಮಾಯವಾಗುತ್ತಿದೆ. ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾವುಗಳು ಸಹ ಸಾವನ್ನಪ್ಪುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ದೈತ್ಯಾಕಾರದ 'ಯೆಲ್ಲೋ ಕ್ರೇಜಿ ಇರುವೆಗಳು'.
ಹೌದು, ಕರಂದಮಲೈ ಸುತ್ತ ಸುಮಾರು 100 ಕಿ.ಮೀ ಪ್ರದೇಶವನ್ನು ಈ ಇರುವೆಗಳು ವಿಸ್ತರಿಸಿಕೊಂಡಿವೆ. ಇವು ಮನುಷ್ಯರಿಗೆ ಮಾರಕವಾಗದಿದ್ದರೂ ಸಹ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದು, ಪ್ರಾಣಿಗಳನ್ನ ಬಲಿ ತೆಗೆದುಕೊಳ್ಳುತ್ತಿವೆ.
ಈ ಸಂಬಂಧ 'ಈಟಿವಿ ಭಾರತ'ದೊಂದಿಗೆ ಅಭಿಪ್ರಾಯ ಹಂಚಿಕೊಂಡ ಗ್ರಾಮಸ್ಥ ಸಿಂಘರಾಮ್, ಜಾನುವಾರುಗಳನ್ನು ಮೇಯಿಸಲು ಹೋಗುವುದಕ್ಕೆ ಭಯವಾಗುತ್ತದೆ. ಗೌರ್ ನಂತಹ ದೊಡ್ಡ ಪ್ರಾಣಿಗಳ ಕಣ್ಣುಗಳನ್ನು ಭಯಾನಕ ಇರುವೆಗಳು ತಿನ್ನುತ್ತವೆ ಎಂಬ ಆಘಾತಕಾರಿ ಮಾಹಿತಿ ನೀಡಿದರು.
ಕಾರಂತಮಲೈ ನಿವಾಸಿ ರಾಸು ಮಾತನಾಡಿ, ಇರುವೆಗಳು ಮೇಕೆಗಳ ಗೊರಸುಗಳನ್ನು ಕಚ್ಚಿ ತಿನ್ನುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆತಂಕಗೊಂಡ ರಾಸು. ಕುರಿಗಾಹಿಗಳು ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಇವು ಜನರಿಗೆ ಆರ್ಥಿಕ ಹಾನಿಯನ್ನುಂಟು ಮಾಡುವುದಲ್ಲದೇ, ಸಹಜ ಪರಿಸರಕ್ಕೂ ತೊಂದರೆ ಮಾಡುವ ಈ ಇರುವೆಗಳ ನಾಶಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಯೆಲ್ಲೋ ಕ್ರೇಜಿ ಆ್ಯಂಟ್ : ಸಹಾಯಕ ಪ್ರಾಧ್ಯಾಪಕ ಕೋ. ಅಶೋಕ ಚಕ್ರವರ್ತಿ ಮಾಹಿತಿ ನೀಡಿ, ಪರಿಸರಶಾಸ್ತ್ರಜ್ಞ ಮತ್ತು ವನ್ಯಜೀವಿ ಸಂಶೋಧಕರ ಪ್ರಕಾರ ಈ ಇರುವೆಯ ಹೆಸರು 'ಯೆಲ್ಲೋ ಕ್ರೇಜಿ ಆ್ಯಂಟ್'. ಈ ರೀತಿಯ ಇರುವೆ ಯಾವುದಕ್ಕೂ ಹೆದರುವುದಿಲ್ಲ. ಅಲ್ಲದೇ ಇದು ಹೆಚ್ಚಾಗಿ ಜನಜಂಗುಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಈ ರೀತಿಯ ಇರುವೆ ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿ ಕಂಡುಬರುತ್ತದೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ವಿಶ್ವದ ಅಗ್ರ 100 ಅತ್ಯಂತ ಅಪಾಯಕಾರಿ ಮತ್ತು ಆಕ್ರಮಣಕಾರಿ ಜಾತಿಗಳಲ್ಲಿ ಈ ಇರುವೆಗಳನ್ನು ಕೂಡ ಒಂದಾಗಿದೆ ಎಂದು ತಿಳಿಸಿದೆ. ಇದು ಎಲ್ಲ ರೀತಿಯ ಕೀಟಗಳನ್ನು ತಿನ್ನುತ್ತದೆ. ಅದರಲ್ಲೂ ಮೃತದೇಹಗಳನ್ನು ತಿನ್ನಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಹಳದಿ ಕ್ರೇಜಿ ಇರುವೆಗಳು ಫಾರ್ಮಿಕ್ ಎಂಬ ಆಮ್ಲವನ್ನು ಸ್ರವಿಸುತ್ತದೆ. ಇದು ಪ್ರಾಣಿಗಳಲ್ಲಿ ಕುರುಡುತನ ಉಂಟುಮಾಡುತ್ತದೆ. ಇವು ಕಚ್ಚಿದ ನಂತರ ಚರ್ಮ ರೋಗಗಳು ಬರುತ್ತವೆ. ಹಗಲು - ರಾತ್ರಿ ಎರಡೂ ಸಮಯದ್ಲೂ ಈ ಇರುವೆಗಳು ಸಕ್ರಿಯವಾಗಿರುತ್ತದೆ. ಇದು ಇರುವೆಗಳ ಅತಿದೊಡ್ಡ ವಿಧವಾಗಿದೆ. ಅದರ ಉದ್ದ ಸುಮಾರು 7 ಮಿ.ಮೀ ಆಗಿರುತ್ತದೆ. ಸದ್ಯಕ್ಕೆ ದಿಂಡಿಗಲ್ ಜಿಲ್ಲೆಯ ಕರಂದಮಲೈ ಪ್ರದೇಶದಲ್ಲಿ ಈ ಜಾತಿಯ ಇರುವೆಗಳು ಹೆಚ್ಚಾಗಿ ಕಂಡುಬಂದಿವೆ . ಇದನ್ನು ಕೀಟನಾಶಕಗಳಿಂದ ನಿಯಂತ್ರಿಸಬಹುದು ಎಂದು ಅವರು ಹೇಳಿದರು.
ಜಿಲ್ಲಾ ಅರಣ್ಯಾಧಿಕಾರಿ ಪ್ರಭು ಮಾತನಾಡಿ, ಈ ಕುರಿತು ನಮಗೆ ಮಾಹಿತಿ ಬಂದ ತಕ್ಷಣವೇ ಅದು ಯಾವ ರೀತಿಯ ಇರುವೆ ಎಂಬುದನ್ನು ಪತ್ತೆ ಹಚ್ಚಲು ವೈಜ್ಞಾನಿಕ ಸಂಶೋಧನೆ ನಡೆಸಲಾಗುತ್ತಿದೆ. ಈ ಕುರಿತು ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಒಡಿಶಾದ ಈ ಬುಡಕಟ್ಟು ಜನರಿಗೆ ಇರುವೆ ಚಟ್ನಿ ಬಲು ಇಷ್ಟ... ಕೊರೊನಾಗೆ ಇದು ಮದ್ದಂತೆ!