ETV Bharat / bharat

2-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ: ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತ್ ಬಯೋಟೆಕ್‌ಗೆ DCGI ಒಪ್ಪಿಗೆ - Covaxin 2/3 trials on kids

ವಯಸ್ಕರ ಬಳಿಕ ಮಕ್ಕಳಿಗಾಗಿ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ದಿಪಡಿಸಿದ್ದು, ಇದರ 2-3 ಹಂತದ ಕ್ಲಿನಿಕಲ್ ಪ್ರಯೋಗ ಅನುಮತಿ ದೊರೆತಿದೆ.

DCGI approves
ಡಿಸಿಜಿಐ ಅನುಮೋದನೆ
author img

By

Published : May 13, 2021, 12:01 PM IST

ನವದೆಹಲಿ: 2 ರಿಂದ 18 ವರ್ಷದೊಳಗಿನವರಿಗಾಗಿ ಸಿದ್ದಪಡಿಸಲಾದ ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ 2 ಮತ್ತು 3 ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ದೆಹಲಿ ಏಮ್ಸ್, ಪಾಟ್ನಾ ಏಮ್ಸ್​ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್​ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ನ ಸುಮಾರು 525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಭಾರತ್ ಬಯೋಟೆಕ್ ಲಸಿಕೆ ಪ್ರಯೋಗ ಮಾಡಲಿದೆ.

ಕೋವಿಡ್​ ಸೋಂಕನ್ನು ತ್ವರಿತವಾಗಿ ನಿಯಂತ್ರಿಸುವ ಸಲುವಾಗಿ, ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಈ ವಿಷಯವನ್ನು ವಿವರವಾಗಿ ಚರ್ಚಿಸಿದ ಬಳಿಕ ಕೆಲವು ಷರತ್ತುಗಳೊಂದಿಗೆ ಪ್ರಸ್ತಾವಿತ ಹಂತ 2 ಮತ್ತು 3 ರ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಿದೆ.

ಇದನ್ನೂ ಓದಿ: ರೋಗಿಗಳ ಸೇವೆಯಲ್ಲಿದ್ದಾಗ ಸೋಂಕು ತಗುಲಿ 40 ನರ್ಸ್‌ಗಳು ಸಾವು

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಬಳಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.