ಜಮುಯಿ(ಬಿಹಾರ): ಮಗನನ್ನು ಮದುವೆಯಾಗಿ ಗಂಡನ ಮನೆಗೆ ಬಂದ ಸೊಸೆ ಮೇಲೆ ಕಾಮುಕ ಮಾವನೋರ್ವ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದೆ. ಮನ ನೊಂದಿರುವ ಸೊಸೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಪ್ರಕರಣದ ವಿವರ:
ಸಂತ್ರಸ್ತೆ ತಿಳಿಸಿರುವ ಪ್ರಕಾರ, ಆಕೆಯ ಗಂಡ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಅಲ್ಲೇ ಉಳಿದುಕೊಂಡಿದ್ದಾರೆ. ಮಾವ ತನ್ನೊಂದಿಗೆ ವಾಸವಾಗಿರುವ ಸೊಸೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಗಂಡನಿಗೆ ಮಾಹಿತಿ ನೀಡಿದ್ದು, ಆತ ಸಹಕರಿಸುವಂತೆ ಸೂಚನೆ ನೀಡಿದ್ದಾನೆಂದು ತಿಳಿಸಿದ್ದಾಳೆ.
ಈಗಾಗಲೇ ನಮಗೆ ಎರಡು ಮಕ್ಕಳಿವೆ. ಸಹಕಾರ ನೀಡಿದರೆ ಎಲ್ಲರೂ ಸಂತೋಷವಾಗಿರಬಹುದು ಎಂದು ತಿಳಿಸಿದ್ದಾನಂತೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಇದಾದ ನಂತರ, ಸಂತ್ರಸ್ತೆ ತನ್ನ ಸಹೋದರನ ಸಹಾಯದಿಂದ ಖೈರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದಾದ ಬಳಿಕ ಗ್ರಾಮ ಪಂಚಾಯ್ತಿಯಲ್ಲೂ ಇದರ ಚರ್ಚೆ ನಡೆದಿದ್ದು, ಸಂತ್ರಸ್ತೆಗೆ ಬೆಂಬಲ ಸೂಚಿಸಿಲ್ಲ. ಇದಾದ ಬಳಿಕ ತನಿಖೆ ನಡೆಸಿರುವ ಪೊಲೀಸರು ಇದೊಂದು ಸುಳ್ಳು ಪ್ರಕರಣ ಎಂದು ಕೇಸ್ ಮುಚ್ಚಿ ಹಾಕಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ದೇಶಾದ್ಯಂತ 2 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಣೆ: ಮೋದಿ ಜನ್ಮದಿನದಂದು ಐತಿಹಾಸಿಕ ದಾಖಲೆ
ಗ್ರಾಮ ಪಂಚಾಯ್ತಿ ಹಾಗೂ ಪೊಲೀಸ್ ಠಾಣೆಯಲ್ಲಿ ಸೋಲು ಕಂಡಿರುವ ಸಂತ್ರಸ್ತೆ, ಜಮುಯಿ ಕೋರ್ಟ್ ವಕೀಲೆ ಸಾಧನಾ ಸಿಂಗ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾಳೆ. ಈ ವೇಳೆ ಕೋರ್ಟ್ನಲ್ಲಿ ಪ್ರಕರಣದ ಪರ ವಾದ ಮಂಡನೆ ಮಾಡಿದ್ದು, ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಪ್ರಕರಣವನ್ನು ಜಿಲ್ಲಾ ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಅತ್ಯಾಚಾರ ಆರೋಪಿ ವಿರುದ್ಧ ಆರ್ಟಿಕಲ್ 376 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.