ETV Bharat / bharat

ಕರ್ನಾಟಕದಲ್ಲಿ ಅಪರಾಧ ಪ್ರಕರಣ ಹೆಚ್ಚಳ: ಕಳೆದ ವರ್ಷ 1,404 ಮಂದಿ ಕೊಲೆ - ಕೊಲೆ ಸುಲಿಗೆ

Crime cases on the rise in Karnataka: ಕರ್ನಾಟಕದಲ್ಲಿ 2022ನೇ ಸಾಲಿನಲ್ಲಿ ನಡೆದ ಅಪರಾಧ ಪ್ರಕರಣಗಳ ಬಗೆಗಿನ ಎನ್​ಸಿಆರ್​ಬಿ ವರದಿಯ ಮಾಹಿತಿ ಇಲ್ಲಿದೆ.

Crime cases on the rise in Karnataka NCRB comprehensive report for 2022

author img

By ETV Bharat Karnataka Team

Published : Dec 5, 2023, 6:07 PM IST

Updated : Dec 5, 2023, 11:01 PM IST

ನವದೆಹಲಿ: ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) 'ಕ್ರೈಮ್ ಇನ್ ಇಂಡಿಯಾ' ಅಂಕಿ-ಅಂಶಗಳ 2022ರ ವರದಿ ಬಿಡುಗಡೆ ಮಾಡಿದೆ. 2022ರ ಜನವರಿ 1ರಿಂದ ಡಿಸೆಂಬರ್ 31ರವರೆಗಿನ ಪ್ರಕರಣಗಳ ಅಂಕಿ-ಅಂಶಗಳನ್ನು ಈ ವರದಿ ಒಳಗೊಂಡಿದೆ. ವರದಿಯಲ್ಲಿನ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣಗಳ ಬಗೆಗಿನ ಸಮಗ್ರ ಅಂಕಿ-ಅಂಶಗಳ ಒಂದು ಅವಲೋಕನ ಹೀಗಿದೆ.

ಬೆಂಗಳೂರಿನಲ್ಲಿ ವೃದ್ಧರು, ಮಕ್ಕಳ ಮೇಲೆ ಹೆಚ್ಚು ಅಪರಾಧ: ದಕ್ಷಿಣ ಭಾರತದ ಇತರ ನಗರಗಳಿಗೆ ಹೋಲಿಸಿದರೆ 2022ರಲ್ಲಿ ಬೆಂಗಳೂರಿನಲ್ಲಿ ವೃದ್ಧರು ಮತ್ತು ಯುವಕರ ಮೇಲೆ ಹೆಚ್ಚಿನ ಅಪರಾಧ ಕೃತ್ಯಗಳು ನಡೆದಿವೆ. 19 ಮೆಟ್ರೋಪಾಲಿಟನ್ ನಗರಗಳಿಗೆ ಸಂಬಂಧಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದ ರಾಜಧಾನಿಯಲ್ಲಿ ಮಕ್ಕಳ ವಿರುದ್ಧ 1,578 ಮತ್ತು ಹಿರಿಯ ನಾಗರಿಕರ ವಿರುದ್ಧ 458 ಅಪರಾಧ ಪ್ರಕರಣಗಳು ದಾಖಲಾಗಿವೆ.

ಒಂದು ವರ್ಷದಲ್ಲಿ 1,404 ಮಂದಿ ಕೊಲೆ: ರಾಜ್ಯದಲ್ಲಿ ನಡೆದ ಒಟ್ಟು ಕೊಲೆ ಪ್ರಕರಣಗಳ ಪೈಕಿ ಹೆಚ್ಚಿನವರು ಪುರುಷರು (1,007); 472 ಮಹಿಳೆಯರು ಮತ್ತು ಮೂವರು ತೃತೀಯ ಲಿಂಗಿಗಳು ಕೊಲೆಯಾಗಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ 2022ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ವಿವಾದಗಳು ಮತ್ತು ವೈಯಕ್ತಿಕ ದ್ವೇಷದ ಕಾರಣದಿಂದ ನಡೆದಿವೆ. 28 ರಾಜ್ಯಗಳ ಪೈಕಿ, ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿದ್ದು, ಬಿಹಾರ (2,930) ಮತ್ತು ಮಹಾರಾಷ್ಟ್ರ (2,295) ನಂತರದ ಸ್ಥಾನದಲ್ಲಿವೆ.

2018ರಿಂದ 2022ರವರೆಗೆ ನಡೆದ ಅಪರಾಧ ಪ್ರಕರಣಗಳ ಹೋಲಿಕೆ: ಕರ್ನಾಟಕದಲ್ಲಿ 2022 ರಲ್ಲಿ 129461 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧಗಳು ಮತ್ತು 51281 ವಿಶೇಷ ಮತ್ತು ಸ್ಥಳೀಯ ಕಾನೂನು (ಎಸ್ಎಲ್ಎಲ್) ಅಪರಾಧಗಳನ್ನು ಒಳಗೊಂಡ ಒಟ್ಟು 180742 ಗುರುತಿಸಬಹುದಾದ ಅಪರಾಧಗಳು ದಾಖಲಾಗಿವೆ.

ಕರ್ನಾಟಕದಲ್ಲಿ 2021 ರಲ್ಲಿ 115728 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧಗಳು ಮತ್ತು 47969 ವಿಶೇಷ ಮತ್ತು ಸ್ಥಳೀಯ ಕಾನೂನುಗಳು (ಎಸ್ಎಲ್ಎಲ್) ಅಪರಾಧಗಳನ್ನು ಒಳಗೊಂಡ ಒಟ್ಟು 163697 ಗುರುತಿಸಬಹುದಾದ ಅಪರಾಧಗಳು ದಾಖಲಾಗಿವೆ.

ಕರ್ನಾಟಕದಲ್ಲಿ 2020 ರಲ್ಲಿ 106350 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧಗಳು ಮತ್ತು 43730 ವಿಶೇಷ ಮತ್ತು ಸ್ಥಳೀಯ ಕಾನೂನು (ಎಸ್ಎಲ್ಎಲ್) ಅಪರಾಧಗಳು ಸೇರಿದಂತೆ ಒಟ್ಟು 150080 ಗುರುತಿಸಬಹುದಾದ ಅಪರಾಧಗಳು ದಾಖಲಾಗಿವೆ.

ಮಾನವ ದೇಹದ ಮೇಲೆ ಪರಿಣಾಮ ಬೀರುವ ಅಪರಾಧಗಳು: 2022ರಲ್ಲಿ ಮಾನವ ದೇಹದ ಮೇಲೆ ಪರಿಣಾಮ ಬೀರುವ ಒಟ್ಟು 5818 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಅಪಹರಣ (3365 ಪ್ರಕರಣಗಳು), ಕೊಲೆ (1404 ಪ್ರಕರಣಗಳು), ಅತ್ಯಾಚಾರ ಪ್ರಕರಣಗಳು (598 ಪ್ರಕರಣಗಳು) ದಾಖಲಾಗಿವೆ.

ಕೊಲೆ ಪ್ರಕರಣಗಳು: 2022 ರಲ್ಲಿ ಒಟ್ಟು 1404 ಕೊಲೆ ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ (1357 ಪ್ರಕರಣಗಳು) ಹೋಲಿಸಿದರೆ ಹೆಚ್ಚಳವಾಗಿದೆ.

ಕೊಲೆಯ ಉದ್ದೇಶಗಳು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ 2022 ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ವಿವಾದಗಳ ಪರಿಣಾಮದಿಂದಾಗಿ ನಡೆದಿವೆ. ಎನ್​ಸಿಆರ್​ಬಿ ದತ್ತಾಂಶದ ವಿಶ್ಲೇಷಣೆಯು ರಾಜ್ಯದಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ 2021 ರಲ್ಲಿ ಇದ್ದ 1,357 ರಿಂದ ಕಳೆದ ವರ್ಷದಲ್ಲಿ 1,404 ಕ್ಕೆ ಏರಿದೆ ಎಂದು ತೋರಿಸಿದೆ.

28 ರಾಜ್ಯಗಳ ಪೈಕಿ, ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿದ್ದು, ಬಿಹಾರ (2,930) ಮತ್ತು ಮಹಾರಾಷ್ಟ್ರ (2,295) ನಂತರದ ಸ್ಥಾನದಲ್ಲಿವೆ. 2022 ರಲ್ಲಿ ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳ ಪೈಕಿ ವಿವಾದಗಳ ಕಾರಣದಿಂದ 706 ಕೊಲೆಗಳು ನಡೆದರೆ, 44 ಕೊಲೆಗಳು ಪ್ರೇಮ ಸಂಬಂಧದ ವಿಷಯಕ್ಕಾಗಿ ನಡೆದಿವೆ ವರದಿಯಲ್ಲಿನ ಅಂಕಿ ಅಂಶಗಳು ತಿಳಿಸಿವೆ.

ಮಹಿಳೆಯರ ಮೇಲಿನ ಅಪರಾಧಗಳು: 2018ರಲ್ಲಿ 13514, 2019ರಲ್ಲಿ 13828, 2020ರಲ್ಲಿ 12680, 2021ರಲ್ಲಿ 14468 ಹಾಗೂ 2022 17813 ಅಪರಾಧಗಳು ನಡೆದಿವೆ.

ಮಹಿಳೆಯರ ವಿರುದ್ಧದ ಐಪಿಸಿ ಅಪರಾಧಗಳು (ಅಪರಾಧಗಳ ವರ್ಗೀಕರಣ) 2018-2022: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 2022ರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ 17,813 ಎಫ್ಐಆರ್​ಗಳು ದಾಖಲಾಗಿವೆ. ಅದಕ್ಕೂ ಹಿಂದಿನ ವರ್ಷ ಈ ಸಂಖ್ಯೆ 14,468 ಆಗಿತ್ತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ದತ್ತಾಂಶದ ವಿಶ್ಲೇಷಣೆಯ ಪ್ರಕಾರ, 28 ರಾಜ್ಯಗಳಲ್ಲಿ, 2022 ರಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧ ಪ್ರಕರಣಗಳು ಉತ್ತರ ಪ್ರದೇಶ (65,743), ಮಹಾರಾಷ್ಟ್ರ (45,331) ಮತ್ತು ರಾಜಸ್ಥಾನ (45,058) ದಾಖಲಾಗಿವೆ.

ಒಟ್ಟಾರೆ ಪಟ್ಟಿಯಲ್ಲಿ ಕರ್ನಾಟಕ 10 ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 53.6 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಚಾರ್ಜ್​ಶೀಟ್​ ಪ್ರಮಾಣ ಶೇ 82.8 ರಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಸೈಬರ್ ಅಪರಾಧ: ಎನ್​ಸಿಆರ್​ಬಿ ಅಂಕಿಅಂಶಗಳ ಪ್ರಕಾರ, ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. 2022ರಲ್ಲಿ ರಾಜ್ಯದಲ್ಲಿ 12,556 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ರಾಜ್ಯದಲ್ಲಿ 8136 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದವು. 2020 ರಲ್ಲಿ ರಾಜ್ಯದಲ್ಲಿ 10741 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದವು.

ಮಕ್ಕಳ ಮೇಲಿನ ಅಪರಾಧಗಳು: ಎನ್​ಸಿಆರ್​ಬಿ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. 2021ರಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 7261 ರಿಂದ 7988 ಕ್ಕೆ ಏರಿವೆ. 2020ರಲ್ಲಿ 5471, 2019ರಲ್ಲಿ 6305 ಹಾಗೂ 2018ರಲ್ಲಿ 6131 ಪ್ರಕರಣಗಳು ನಡೆದಿದ್ದವು.

ಎಸ್ಸಿ ಮತ್ತು ಎಸ್ಟಿ ಜನಾಂಗದವರ ಮೇಲಿನ ಅಪರಾಧ ಪ್ರಕರಣಗಳು: ಎಸ್​ಸಿ ಸಮುದಾಯದ ವಿರುದ್ಧದ ಅಪರಾಧಗಳ ಸಂಖ್ಯೆ 2021 ರಲ್ಲಿ 1673 ಇದ್ದದ್ದು 2022 ರಲ್ಲಿ 1977ಕ್ಕೆ ಹೆಚ್ಚಾಗಿದೆ. 2020 ರಲ್ಲಿ ಇದ್ದ 1398 ಪ್ರಕರಣಗಳಿಗೆ ಹೋಲಿಸಿದರೆ 2021 ರಲ್ಲಿ ಎಸ್​ಸಿ ವಿರುದ್ಧದ ಅಪರಾಧಗಳ ಸಂಖ್ಯೆ 1673ಗೆ ಹೆಚ್ಚಾಗಿದೆ. 2019 ರ ಅಂಕಿಅಂಶಗಳಿಗೆ (1504 ಪ್ರಕರಣಗಳು) ಹೋಲಿಸಿದರೆ 2020 ರಲ್ಲಿ ಎಸ್​ಸಿ ವಿರುದ್ಧದ ಅಪರಾಧಗಳ ಸಂಖ್ಯೆ (1398 ಪ್ರಕರಣಗಳು) ಕಡಿಮೆಯಾಗಿತ್ತು. ಎಸ್​ಸಿ ವಿರುದ್ಧ 2018ಕ್ಕೆ (1325 ಪ್ರಕರಣಗಳು) ಹೋಲಿಸಿದರೆ, ಪ್ರಸ್ತುತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ, ಎಸ್​ಟಿ ವಿರುದ್ಧದ ಅಪರಾಧಗಳು 2020 ರಲ್ಲಿ ಇದ್ದ 293 ಪ್ರಕರಣಗಳಿಂದ 361 ಕ್ಕೆ ಏರಿದೆ.

ಮಕ್ಕಳ ನಾಪತ್ತೆ ಪ್ರಕರಣಗಳು: 2022 ರಲ್ಲಿ ಒಟ್ಟು 1717 ಮಕ್ಕಳು (894 ಗಂಡು ಮಕ್ಕಳು, 823 ಹೆಣ್ಣು ಮಕ್ಕಳು ಮತ್ತು 0 ತೃತೀಯ ಲಿಂಗಿಗಳು) ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2020ರಲ್ಲಿ 1638 (ಗಂಡು 804, ಹೆಣ್ಣು 834) ಮಕ್ಕಳು, 2019ರಲ್ಲಿ 1385 (ಗಂಡು 677, ಹೆಣ್ಣು 703 ಮತ್ತು ತೃತೀಯ ಲಿಂಗಿ 05) ಹಾಗೂ 2018ರಲ್ಲಿ 1623 ಮಕ್ಕಳು (ಗಂಡು 677, ಹೆಣ್ಣು 946) ಕಾಣೆಯಾಗಿದ್ದರು.

ಹಿರಿಯ ನಾಗರಿಕರ ಮೇಲೆ ನಡೆದ ಅಪರಾಧ ಪ್ರಕರಣಗಳು: 2021 ರಲ್ಲಿ ಆಗಿದ್ದ 1442 ಪ್ರಕರಣಗಳಿಗೆ ಹೋಲಿಸಿದರೆ 2022 ರಲ್ಲಿ ಕರ್ನಾಟಕದಲ್ಲಿ ಹಿರಿಯ ನಾಗರಿಕರ ವಿರುದ್ಧ ಒಟ್ಟು 1583 ಅಪರಾಧ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 853, 2019ರಲ್ಲಿ 1172 ಹಾಗೂ 2018ರಲ್ಲಿ 1038 ಅಪರಾಧ ಪ್ರಕರಣಗಳು ದಾಖಲಾಗಿವೆ.

ವಿದೇಶಿಯರ ಮೇಲೆ ನಡೆದ ಅಪರಾಧ ಪ್ರಕರಣಗಳು: 2022 ರಲ್ಲಿ ಕರ್ನಾಟಕದಲ್ಲಿ ವಿದೇಶಿಯರ ವಿರುದ್ಧ ಒಟ್ಟು 28 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2021 ರಲ್ಲಿ 27 ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ 19, 2019ರಲ್ಲಿ 46 ಹಾಗೂ 2018ರಲ್ಲಿ 28 ಅಪರಾಧ ಪ್ರಕರಣಗಳು ದಾಖಲಾಗಿದ್ದವು.

(Source: ಎನ್​ಸಿಆರ್​ಬಿ ವೆಬ್​ಸೈಟ್)

Last Updated : Dec 5, 2023, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.