ETV Bharat / bharat

ಸಂಸತ್ತು ಅಲ್ಲ, ಸಂವಿಧಾನವೇ ಸರ್ವೋಚ್ಚ: ಪಿ. ಚಿದಂಬರಂ - ಸಂವಿಧಾನದ ತಳಹದಿಯ ತತ್ವ

ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ, ದೇಶದಲ್ಲಿ ಸಂವಿಧಾನವೇ ಸರ್ವೋಚ್ಚ ಎಂದಿದ್ದಾರೆ.

ಸಂವಿಧಾನವೇ ಸರ್ವೋಚ್ಚ; ಪಿ. ಚಿದಂಬರಂ ಅಭಿಪ್ರಾಯ
Constitution is supreme P Chidambaram opinion
author img

By

Published : Jan 12, 2023, 1:21 PM IST

ನವದೆಹಲಿ: ಸಂಸತ್ತಿನ ಪಾರಮ್ಯ ಸ್ಥಾಪನೆಯ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಒತ್ತಾಯಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನವು ಸರ್ವೋಚ್ಚವಾಗಿದೆ ಮತ್ತು ಉಪರಾಷ್ಟ್ರಪತಿಗಳ ದೃಷ್ಟಿಕೋನಗಳು ಎಚ್ಚರಿಕೆಯ ಸಂಕೇತವಾಗಿರಬಹುದು ಎಂದು ಗುರುವಾರ ಚಿದಂಬರಂ ಹೇಳಿದ್ದಾರೆ.

ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರು ಸಂಸತ್ತನ್ನು ಸರ್ವೋಚ್ಚ ಎಂದು ಹೇಳುವುದು ತಪ್ಪು. ಸಂವಿಧಾನವೇ ಸರ್ವೋಚ್ಚವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ. ಬಹುಶಃ ಇದೊಂದು ಎಚ್ಚರಿಕೆಯ ಮುನ್ಸೂಚನೆಯಾಗಿರಬಹುದು ಎಂದ ಚಿದಂಬರಂ, ವಾಸ್ತವವಾಗಿ, ಗೌರವಾನ್ವಿತ ಸಭಾಪತಿಯವರ ಅಭಿಪ್ರಾಯಗಳು ಸಂವಿಧಾನವನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕ ಮುಂಬರುವ ಅಪಾಯಗಳ ಬಗ್ಗೆ ಎಚ್ಚರದಿಂದಿರುವಂತೆ ಜಾಗರೂಕರನ್ನಾಗಿಸಬೇಕು ಎಂದರು. ಸಂವಿಧಾನದ ತಳಹದಿಯ ತತ್ವಗಳ ಮೇಲೆ ಬಹುಸಂಖ್ಯಾತ ಪ್ರೇರಿತ ದಾಳಿಯನ್ನು ತಡೆಗಟ್ಟುವ ಸಲುವಾಗಿ ಮೂಲ ರಚನೆ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಒಂದೊಮ್ಮೆ ಸಂಸತ್ತು ಬಹುಮತದಿಂದ ಸಂಸತ್ತಿನ ವ್ಯವಸ್ಥೆಯನ್ನು ಅಧ್ಯಕ್ಷೀಯ ವ್ಯವಸ್ಥೆಯಾಗಿ ಪರಿವರ್ತಿಸಲು ಮತ ಚಲಾಯಿಸಿದೆ ಎಂದು ಭಾವಿಸೋಣ ಅಥವಾ ಶೆಡ್ಯೂಲ್​​ VII ನಲ್ಲಿನ ರಾಜ್ಯ ಪಟ್ಟಿಯನ್ನು ರದ್ದುಗೊಳಿಸಿ ಮತ್ತು ರಾಜ್ಯಗಳ ವಿಶೇಷ ಶಾಸಕಾಂಗ ಅಧಿಕಾರವನ್ನು ಕಸಿದುಕೊಂಡಿದೆ ಎಂದುಕೊಳ್ಳೋಣ. ಆದರೆ ಅಂಥ ತಿದ್ದುಪಡಿಗಳು ಮಾನ್ಯವಾಗಬಹುದೇ? ಎಂದು ಅವರು ಪ್ರಶ್ನಿಸಿದರು.

ಎನ್​​ಜೆಎಸಿ ಕಾಯಿದೆಯನ್ನು ರದ್ದು ಮಾಡಿದ ನಂತರ, ಹೊಸ ಮಸೂದೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಯಾವುದೂ ತಡೆಯಲಾಗದು. ಒಂದು ಕಾಯಿದೆಯನ್ನು ರದ್ದು ಮಾಡುವುದರಿಂದ ಮೂಲ ರಚನೆ ಸಿದ್ಧಾಂತವು ತಪ್ಪಾಗಿದೆ ಎಂದು ಅರ್ಥವಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡಲು ಮತ್ತು ಶಾಸನದೊಂದಿಗೆ ವ್ಯವಹರಿಸಲು ಸಂಸತ್ತಿನ ಅಧಿಕಾರವು ಬೇರೆ ಯಾವುದೇ ಅಧಿಕಾರಕ್ಕೆ ಒಳಪಟ್ಟಿಲ್ಲ ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಇವು ತಮ್ಮ ತಮ್ಮ ಅಧಿಕಾರವ್ಯಾಪ್ತಿಗೆ ಸೀಮಿತವಾಗಿರಬೇಕಾಗುತ್ತದೆ ಮತ್ತು ಔಚಿತ್ಯ ಮತ್ತು ಗೌರವದ ಅತ್ಯುನ್ನತ ಗುಣಮಟ್ಟಕ್ಕೆ ಅನುಗುಣವಾಗಿರಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಬುಧವಾರ ಪುನರುಚ್ಚರಿಸಿದರು.

ಅವರು ಬುಧವಾರ ರಾಜಸ್ಥಾನ ವಿಧಾನಸೌಧದಲ್ಲಿ 83ನೇ ಅಖಿಲ ಭಾರತ ಪೀಠಾಧಿಪತಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನವನ್ನು ತಿದ್ದುಪಡಿ ಮಾಡಲು ಮತ್ತು ಶಾಸನದೊಂದಿಗೆ ವ್ಯವಹರಿಸಲು ಸಂಸತ್ತಿನ ಅಧಿಕಾರವು ಯಾವುದೇ ಅಧಿಕಾರಕ್ಕೆ ಒಳಪಟ್ಟಿಲ್ಲ. ಇದು ಪ್ರಜಾಪ್ರಭುತ್ವದ ಜೀವನಾಡಿ ಎಂದು ಅವರು ಹೇಳಿದರು. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಸಾಂವಿಧಾನಿಕ ಗುರಿಗಳನ್ನು ಈಡೇರಿಸಲು ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ ಮತ್ತು ಅರಳುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದರು.

1973ರಲ್ಲಿ ಬಂದ, ಮೂಲ ರಚನೆಯ ಸಿದ್ಧಾಂತವನ್ನು ನೀಡಿದ ಮಹತ್ವದ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಬುಧವಾರ ಪ್ರಶ್ನಿಸಿದ್ದು, ಇದು ಕೆಟ್ಟ ಸಂಪ್ರದಾಯವನ್ನು ಆರಂಭಿಸಿದೆ ಎಂದು ಹೇಳಿದರು. ಯಾವುದೇ ಅಧಿಕಾರವು ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ಪ್ರಶ್ನಿಸಿದರೆ, ನಾವು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳುವುದು ಕಷ್ಟಕರವಾಗಿರುತ್ತದೆ ಎಂದು ಅವರು ತಿಳಿಸಿದರು. 2015 ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ (ಎನ್‌ಜೆಎಸಿ) ಕಾಯಿದೆಯನ್ನು ಉನ್ನತ ನ್ಯಾಯಾಲಯವು ರದ್ದುಗೊಳಿಸಿರುವುದನ್ನು ಅವರು ಮತ್ತೊಮ್ಮೆ ಟೀಕಿಸಿದ್ದು, ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಅದರ ಮೂಲ ರಚನೆಯನ್ನು ಅಲ್ಲ ಎಂಬ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿಗೆ ತಮ್ಮ ಸಮ್ಮತಿಯಿಲ್ಲ ಎಂದು ಧಂಖರ್ ಹೇಳಿದರು.

ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಸವಾಲುಗಳು- ಬೆದರಿಕೆಗಳ ಕುರಿತು ವಾಸ್ತವ ಉಪನ್ಯಾಸ ನೀಡಿದ ಪಿ. ಚಿದಂಬರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.