ಥಾಣೆ(ಮಹಾರಾಷ್ಟ್ರ): ದೊಡ್ಡ ದೊಡ್ಡ ರಾಜಕಾರಣಿಗಳು ಸಾಮಾನ್ಯವಾಗಿ ದೊಡ್ಡ ದೊಡ್ಡ ಹೋಟೆಲ್ಗಳಲ್ಲೇ ತಿಂಡಿ ತಿನ್ನುತ್ತಾರೆ. ಅಲ್ಲೊಮ್ಮೆ- ಇಲ್ಲೊಮ್ಮೆ ಕೆಲವರು ರಸ್ತೆ ಬದಿಯಲ್ಲೋ, ಹಳ್ಳಿಯಲ್ಲೋ ಇರುವ ಹೋಟೆಲ್ನಲ್ಲಿ ತಿಂದರೆ, ಅದು ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ. 'ಸರಳ ರಾಜಕಾರಣಿ' ಎಂಬ ಪಟ್ಟ ತಾನಾಗಿಯೇ ಒಲಿದುಬರುತ್ತದೆ. ಆದರೆ ಇಲ್ಲೊಬ್ಬ ಕೇಂದ್ರ ಸಚಿವರು ರಸ್ತೆ ಬದಿಯ ಹೋಟೆಲ್ನಲ್ಲಿ ವಡಾ ಪಾವ್ ಸೇವಿಸಿ ಬಿಲ್ ಕೊಡದೇ ಹೋಗಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರಕ್ಕೆ ಆಗಮಿಸಿ, ಥಾಣೆ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ರೈಲು ಮಾರ್ಗಗಳನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಕಾರ್ಯಕ್ರಮದ ನಂತರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆಗೂಡಿ ಇನ್ನಿತರ ಬಿಜೆಪಿ ನಾಯಕರೊಂದಿಗೆ ರೈಲು ನಿಲ್ದಾಣದ ಹೊರಗಿರುವ ಹೋಟೆಲ್ನಲ್ಲಿ ವಡಾ ಪಾವ್ ತಿಂದಿದ್ದರು. ಆದರೆ ಬಿಲ್ ಪಾವತಿ ಮಾಡಿರಲಿಲ್ಲ.
ವಡಾ ಪಾವ್ ತಿಂದು ಬಿಲ್ ಕೊಡದೇ ಹೋದ ಕಾರಣಕ್ಕೆ ಹೋಟೆಲ್ನವರು ಸಾಮಾಜಿಕ ಜಾಲತಾಣಗಳಲ್ಲಿ ವಿಚಾರವನ್ನು ಹಂಚಿಕೊಂಡು, ವಿಡಿಯೋ ಪೋಸ್ಟ್ ಮಾಡಿದ್ದರು. ಈ ಸುದ್ದಿಯನ್ನು ಈಟಿವಿ ಭಾರತ ಪ್ರಸಾರ ಮಾಡಿತ್ತು. ಇದಾದ ನಂತರ ಸಾಕಷ್ಟು ಚರ್ಚೆಗೆ ಈ ಘಟನೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಜೆಪಿ ಕಾರ್ಯಕರ್ತರೊಬ್ಬರು ಹೋಟೆಲ್ಗೆ ಆಗಮಿಸಿ, 2000 ರೂಪಾಯಿಗಳ ಬಿಲ್ ಪಾವತಿಸಿದ್ದಾರೆ.
ಮತ್ತೊಂದು ವಿವಾದ: ಪ್ರಧಾನಿ ಮೋದಿ ಕಪ್ಪು ಹಣದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಪಾವತಿಸಿರುವ ಬಿಲ್ನಲ್ಲಿ ಜಿಎಸ್ಟಿ ಸೇರ್ಪಡೆಯಾಗಿಲ್ಲ. ಬಿಜೆಪಿ ಕಾರ್ಯಕರ್ತರು ಜಿಎಸ್ಟಿ ಪಾವತಿಸದೇ ಬಿಲ್ ನೀಡಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತು ಟ್ರೋಲ್ ಆಗುತ್ತಿದೆ.
ಇದನ್ನೂ ಓದಿ: ಶಾಲಾ ಆವರಣದಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ: ತ್ರಿಪುರಾ ಸರ್ಕಾರ ಆದೇಶ
ಹೋಟೆಲ್ ಗಜಾನನ್‌ನಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಸಂಸದ ವಿನಯ್ ಸಹಸ್ರಬುದ್ಧೆ, ಬಿಜೆಪಿ ಶಾಸಕ ಸಂಜಯ್ ಕೇಲ್ಕರ್, ಶಾಸಕ ನಿರಂಜನ್ ದಾವ್ಖರೆ. ಶಾಸಕ ನಿರಂಜನ್ ದಾವ್ಖರೆ ಮತ್ತಿತರರರು ವಡಾಪಾವ್ ಸೇವಿಸಿದ್ದರು.