ETV Bharat / bharat

ಮತ್ತೆ ವಂದೇ ಭಾರತ್ ರೈಲು ಜಾನುವಾರುಗೆ ಡಿಕ್ಕಿ: 15 ನಿಮಿಷ ಸಂಚಾರ ವಿಳಂಬ

ವಂದೇ ಭಾರತ್ ರೈಲು ಮುಂಬೈನ ಸೆಂಟ್ರಲ್ ವ್ಯಾಪ್ತಿಯ ಅತುಲ್ ಸ್ಟೇಶನ್ ಬಳಿ ಜಾನುವಾರುಗೆ ಡಿಕ್ಕಿ ಹೊಡೆದ ಪರಿಣಾಮ ಸಣ್ಣ ಅಪಘಾತ ಸಂಭವಿಸಿದ್ದು, ಇದರಿಂದಾಗಿ ವಂದೇ ಭಾರತ್ ರೈಲು ಹದಿನೈದು ನಿಮಿಷ ತಡವಾಗಿ ಸಂಚರಿಸಿತು. ಈ ತಿಂಗಳಿನಲ್ಲಿ ಎರಡನೇ ಬಾರಿ ವಂದೇ ಭಾರತ್​ ರೈಲು ಅಪಘಾತಕ್ಕೊಳಗಾಗಿದೆ.

Cattle hit Vande Bharat train again in Mumbai
ಮತ್ತೆ ವಂದೇ ಭಾರತ್ ರೈಲು ಜಾನುವಾರುಗೆ ಡಿಕ್ಕಿ
author img

By

Published : Oct 29, 2022, 3:28 PM IST

ಮುಂಬೈ: ವಂದೇ ಭಾರತ್ ರೈಲು ಮುಂಬೈನ ಸೆಂಟ್ರಲ್ ವ್ಯಾಪ್ತಿಯ ಅತುಲ್ ಸ್ಟೇಶನ್ ಬಳಿ ಜಾನುವಾರುಗೆ ಡಿಕ್ಕಿ ಹೊಡೆದ ಪರಿಣಾಮ ಸಣ್ಣ ಅಪಘಾತ ಸಂಭವಿಸಿದೆ. ಇದರಿಂದಾಗಿ ವಂದೇ ಭಾರತ್ ರೈಲು 15 ನಿಮಿಷ ತಡವಾಗಿ ಸಂಚರಿಸಿತು. ಈ ತಿಂಗಳಲ್ಲಿ 2ನೇ ಬಾರಿ ವಂದೇ ಭಾರತ್​ ರೈಲು ಅಪಘಾತಕ್ಕೊಳಗಾಗಿದೆ.

15 ನಿಮಿಷ ಸಂಚಾರ ತಡ: ಮುಂಬೈನ ಅತುಲ್ ನಿಲ್ದಾಣದ ಬಳಿ ವಂದೇ ಭಾರತ್ ರೈಲು ಹೊರಟಿದ್ದ ವೇಳೆ ಅಂದರೆ ಬೆಳಗ್ಗೆ 8.15ಕ್ಕೆ ಜಾನುವಾರುಗೆ ಗುದ್ದಿದೆ. ರೈಲಿನಲ್ಲಿ ಜಾನುವಾರು ಸಿಲುಕಿಕೊಂಡ ಪರಿಣಾಮ ರೈಲನ್ನು ನಿಲ್ಲಿಸಬೇಕಾಯಿತು. ಇದರಿಂದಾಗಿ ವಂದೇ ಭಾರತ್ ರೈಲು ಸುಮಾರು 15 ನಿಮಿಷ ಕಾಲ ವಿಳಂಬವಾಯಿತು.

ವಂದೇ ಭಾರತ್ ರೈಲು ಮುಂಬೈ ಸೆಂಟ್ರಲ್ ದಿಂದ ಗಾಂಧಿನಗರಕ್ಕೆ ಸಂಚರಿಸತ್ತು. ಈ ವೇಳೆ ಲೊಕೊ ಪೈಲಟ್​ ಇದ್ದ ಕೋಚ್‌ಗೆ ಸಣ್ಣಪುಟ್ಟ ಹಾನಿಯಾಗಿದೆಯೇ ಹೊರತು ಹೆಚ್ಚಿನ ನಷ್ಟ ಆಗಿಲ್ಲವೆಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಐಪಿಸಿ ಸೆಕ್ಷನ್ 279 - ನಿರ್ಲಕ್ಷ್ಯದ ಚಾಲನೆ ಸಾಕು ಪ್ರಾಣಿಗಳಿಗೆ ಅನ್ವಯವಾಗುವುದಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.