ETV Bharat / bharat

ಸಮುದಾಯವೊಂದರ ವಿರುದ್ಧ ಅವಹೇಳಕಾರಿ ಹೇಳಿಕೆ : ಛತ್ತೀಸ್​ಗಢ ಸಿಎಂ ಬಘೇಲ್ ತಂದೆ ವಿರುದ್ಧ ದೂರು

ನಂದ್ ಕುಮಾರ್ ಬಘೇಲ್ ಬ್ರಾಹ್ಮಣರನ್ನು ವಿದೇಶಿಯರಂತೆ ಬಿಂಬಿಸಿದ್ದಾರೆ. ಅವರನ್ನು ಬಹಿಷ್ಕರಿಸುವಂತೆ ಮತ್ತು ಗ್ರಾಮಗಳಿಗೆ ಅವರ ಪ್ರವೇಶವನ್ನು ನಿರಾಕರಿಸುವಂತೆ ನಂದ್ ಕುಮಾರ್ ಬಘೇಲ್ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ, ಸರ್ವ್​ ಬ್ರಾಹ್ಮಿನ್ ಸಮಾಜ್ ದೂರಿನಲ್ಲಿ ಉಲ್ಲೇಖಿಸಿದೆ..

Case against Chhattisgarh CM Baghel's father for alleged derogatory remarks
ಸಮುದಾಯವೊಂದರ ವಿರುದ್ಧ ಅವಹೇಳಕಾರಿ ಹೇಳಿಕೆ: ಛತ್ತಿಸ್​ಗಢ ಸಿಎಂ ಬಘೇಲ್ ತಂದೆ ವಿರುದ್ಧ ದೂರು
author img

By

Published : Sep 5, 2021, 3:36 PM IST

ರಾಯಪುರ(ಛತ್ತೀಸ್​ಗಢ) : ಸಮುದಾಯವೊಂದರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ವಿರುದ್ಧ ರಾಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಸರ್ವ್​ ಬ್ರಾಹ್ಮಿನ್ ಸಮಾಜ್' ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶನಿವಾರ ರಾತ್ರಿ ನಂದ್​ ಕುಮಾರ್ ಬಘೇಲ್ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವುದು) ಮತ್ತು 505 (1) (b) (ಉದ್ದೇಶಪೂರ್ವಕವಾಗಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆ ಬರುವಂತೆ ಮಾಡುವುದು) ಅಡಿಯಲ್ಲಿ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ನಂದ್ ಕುಮಾರ್ ಬಘೇಲ್ ಬ್ರಾಹ್ಮಣರನ್ನು ವಿದೇಶಿಯರಂತೆ ಬಿಂಬಿಸಿದ್ದಾರೆ. ಅವರನ್ನು ಬಹಿಷ್ಕರಿಸುವಂತೆ ಮತ್ತು ಗ್ರಾಮಗಳಿಗೆ ಅವರ ಪ್ರವೇಶವನ್ನು ನಿರಾಕರಿಸುವಂತೆ ನಂದ್ ಕುಮಾರ್ ಬಘೇಲ್ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ, ಸರ್ವ್​ ಬ್ರಾಹ್ಮಿನ್ ಸಮಾಜ್ ದೂರಿನಲ್ಲಿ ಉಲ್ಲೇಖಿಸಿದೆ.

ಇದರ ಜೊತೆಗೆ ಶ್ರೀರಾಮನ ಬಗ್ಗೆಯೂ ನಂದ್ ಕುಮಾರ್ ಬಘೇಲ್ ಅವಹೇಳಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದಾವೆ ಎಂದು ಸರ್ವ್​ ಬ್ರಾಹ್ಮಿನ್ ಸಮಾಜ್ ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ವಿಶ್ವದ 13 ಪ್ರಭಾವಿ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿಯೇ ನಂಬರ್​-1 ಲೀಡರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.