ETV Bharat / bharat

ತೆಲಂಗಾಣ ವಿಧಾನಸಭಾ ಚುನಾವಣೆ: ಪ್ರಚಾರದ ವೇಳೆ ಬಿಆರ್‌ಎಸ್ ಅಭ್ಯರ್ಥಿ, ಸಂಸದ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ - BRS MP Kota Prabhakar Reddy

ತೆಲಂಗಾಣ ಚುನಾವಣಾ ಕಣ ರಂಗೇರುತ್ತಿದ್ದು, ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯ (ಬಿಆರ್​ಎಸ್​) ಅಭ್ಯರ್ಥಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ಮಾಡಿದ ಘಟನೆ ಇಂದು ನಡೆದಿದೆ.

ಸಂಸದ ಪ್ರಭಾಕರ್ ರೆಡ್ಡಿಗೆ ಚಾಕುವಿನಿಂದ ಇರಿದ ವ್ಯಕ್ತಿ

author img

By ETV Bharat Karnataka Team

Published : Oct 30, 2023, 4:02 PM IST

Updated : Oct 30, 2023, 4:22 PM IST

ಹೈದರಾಬಾದ್​: ತೆಲಂಗಾಣ ವಿಧಾನಸಭೆ ಚುನಾವಣಾ ಕಣದಲ್ಲಿ ರಕ್ತ ಹರಿದಿದೆ. ಮನೆ ಮನೆ ಪ್ರಚಾರ ನಡೆಸುತ್ತಿರುವ ಬಿಆರ್‌ಎಸ್ ಸಂಸದ ಹಾಗೂ ಪಕ್ಷದ ಅಭ್ಯರ್ಥಿಯಾಗಿರುವ ಕೋಟಾ ಪ್ರಭಾಕರ ರೆಡ್ಡಿ ಅವರ ಮೇಲೆ ಸೋಮವಾರ ಮಾರಣಾಂತಿಕ ದಾಳಿ ನಡೆದಿದೆ. ವ್ಯಕ್ತಿಯೊಬ್ಬ ರೆಡ್ಡಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಅವರನ್ನು ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸಿದ್ದಿಪೇಟ್ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಪ್ರಭಾಕರ ರೆಡ್ಡಿ ಮತಪ್ರಚಾರ ಕೈಗೊಂಡಿದ್ದರು. ಕುಟುಂಬವೊಂದನ್ನು ಭೇಟಿ ಮಾಡಿ ಹೊರಗೆ ಬರುತ್ತಿದ್ದಾಗ ಸಂಸದರಿಗೆ ಹಸ್ತಲಾಘವ ಮಾಡುವ ಸೋಗಿನಲ್ಲಿ ಬಂದ ಆರೋಪಿ ದತ್ತಾಣಿ ರಾಜು ಎಂಬಾತ ಏಕಾಏಕಿ ರೆಡ್ಡಿಗೆ ಚಾಕುವಿನಿಂದ ತಿವಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿದೆ. ಅಲ್ಲಿದ್ದ ಕಾರ್ಯಕರ್ತರು ಕೂಡಲೇ ಸಂಸದರನ್ನು ಕಾರಿನಲ್ಲಿ ಗಜ್ವೇಲ್ ಆಸ್ಪತ್ರೆಗೆ ಕರೆದೊಯ್ದರು.

  • #UPDATE | Telangana: BRS MP Kotha Prabhakar Reddy shifted to Yashoda Hospitals, Secunderabad.

    He was stabbed in his stomach by an unidentified person during his campaign in Siddipet. pic.twitter.com/elxfs09DPi

    — ANI (@ANI) October 30, 2023 " class="align-text-top noRightClick twitterSection" data=" ">

ಆರೋಪಿ ರಾಜು ಮಿರುದೊಡ್ಡಿ ಮಂಡಲದ ಪೆದ್ದಪ್ಯಾಲ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಉದ್ರಿಕ್ತರಾದ ಬಿಆರ್​ಎಸ್​ ಕಾರ್ಯಕರ್ತರು ರಾಜು ಮೇಲೆ ಹಲ್ಲೆ ನಡೆಸಿದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಭಾಕರ ರೆಡ್ಡಿ ಅವರನ್ನು ಮೊದಲು ಗಜ್ವೇಲ್‌ನ ಆಸ್ಪತ್ರೆಗೆ ಕರೆದೊಯ್ದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು.

ಬಿಜೆಪಿ ವಿರುದ್ಧ ಆರೋಪ, ಪ್ರತಿಭಟನೆ: ಸಂಸದರ ಮೇಲಿನ ಮಾರಣಾಂತಿಕ ಹಲ್ಲೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಬಿಆರ್​ಎಸ್​ ಆರೋಪಿಸಿದೆ. ಬಿಜೆಪಿಯ ಹಾಲಿ ಶಾಸಕ ರಘುನಂದನ ರೆಡ್ಡಿ ಅವರ ಮೇಲೆ ಆಪಾದನೆ ಮಾಡಿರುವ ಬಿಆರ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂಸದರ ಮೇಲೆ ದಾಳಿ ವಿಷಯ ತಿಳಿದ ತೆಲಂಗಾಣ ಸಚಿವ ಹರೀಶ್ ರಾವ್, ಕೂಡಲೇ ಗಜ್ವೇಲ್ ಆಸ್ಪತ್ರೆಗೆ ತೆರಳಿದರು. ಸಂಸದರ ಆರೋಗ್ಯ ಸ್ಥಿತಿಯನ್ನು ಸಚಿವರು ದೂರವಾಣಿ ಮೂಲಕ ವೈದ್ಯರು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಪ್ರಭಾಕರ್ ರೆಡ್ಡಿ ಅವರನ್ನು ಸದ್ಯ ಸಿಕಂದರಾಬಾದ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನಿಖೆಗೆ ಸಿಎಂ ಕೆಸಿಆರ್ ಸೂಚನೆ​: ಬಿಆರ್​ಎಸ್​ ಅಭ್ಯರ್ಥಿಯೂ ಆಗಿರುವ ಸಂಸದ ಕೋಟಾ ಪ್ರಭಾಕರ ರೆಡ್ಡಿ ಮೇಲೆ ನಡೆದ ಮಾರಣಾಂತಿಕ ದಾಳಿಯ ವಿರುದ್ಧ ತನಿಖೆ ನಡೆಸಲು ಸಿಎಂ ಕೆ.ಚಂದ್ರಶೇಖರ್​ರಾವ್​ ಪೊಲೀಸರಿಗೆ ಆದೇಶಿಸಿದ್ದಾರೆ. ಆರೋಗ್ಯದ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡಲು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಳಿಕೋರ ರಾಜುನನ್ನು ವಶಕ್ಕೆ ಪಡೆದಿದ್ದು, ದಾಳಿ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಂಡೆದ್ದ ಶಿವಸೇನೆ, ಎನ್​ಸಿಪಿ ಶಾಸಕರ ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್​ಗೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್​

Last Updated : Oct 30, 2023, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.