ETV Bharat / bharat

ಮೊದಲ ರಾತ್ರಿಯೇ ಅತ್ಯಾಚಾರ ನಡೆದ ಮಾಹಿತಿ ಬಿಚ್ಚಿಟ್ಟ ವಧು: ವರ ಮಾಡಿದ್ದೇನು? - ಮದುವೆಯ ಮೊದಲ ರಾತ್ರಿ ಅತ್ಯಾಚಾರ ನಡೆದ ವಿಷಯ ಬಹಿರಂಗ

ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ ಜೋಡಿಯ ಬಾಳಿನಲ್ಲಿ ಫಸ್ಟ್​​ ನೈಟ್​ ವೇಳೆಯೇ ಹೆಂಡತಿ ಹೇಳಿರುವ ಸತ್ಯದಿಂದಾಗಿ ವಿರಸ ಉಂಟಾಗಿದ್ದು, ದಾಂಪತ್ಯ ಜೀವನ ಮುರಿದು ಬಿದ್ದಿದೆ.

Bride reveled about her rape to groom
Bride reveled about her rape to groom
author img

By

Published : Apr 8, 2022, 3:46 PM IST

ಗ್ವಾಲಿಯಾರ್​(ಮಧ್ಯಪ್ರದೇಶ): ಹತ್ತಾರು ಕನಸು ಕಂಡು ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮದುವೆಯಾದ ಮೊದಲ ರಾತ್ರಿಯೇ ಗಂಡನ ಮುಂದೆ ಕಹಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಕ್ಕಾಗಿ ಇಬ್ಬರು ಬೇರ್ಪಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಈ ಪ್ರಕರಣ ನಡೆದಿದ್ದು, 2019ರಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಬಂಧು-ಮಿತ್ರರು, ಅಪಾರ ಜನರ ಮುಂದೆ ನವಜೋಡಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೊದಲ ರಾತ್ರಿ ಇಬ್ಬರು ತಮ್ಮ ಜೀವನದಲ್ಲಿ ನಡೆದ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ವಧು ಹೇಳಿರುವ ಕಹಿ ಸತ್ಯವೊಂದು ಇಬ್ಬರನ್ನು ಮತ್ತಷ್ಟು ದೂರ ಮಾಡಿದೆ. ಜೊತೆಗೆ, ದಾಂಪತ್ಯ ಜೀವನವನ್ನೇ ಮುಗಿಸಿದೆ.

ಇದನ್ನೂ ಓದಿ: ಮೊಬೈಲ್ ಟಾರ್ಚ್​, ಮೇಣದಬತ್ತಿ ಬೆಳಕಿನಲ್ಲಿ ಗರ್ಭಿಣಿಗೆ ಹೆರಿಗೆ; ಸರ್ಕಾರಿ ಆಸ್ಪತ್ರೆಯ ದುಸ್ಥಿತಿ!

ಆಗಿದ್ದೇನು?: ಮದುವೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಷಯವನ್ನು ಪತಿ ಮುಂದೆ ಯುವತಿ ಮೊದಲ ರಾತ್ರಿಯಂದು ಹೇಳಿದಳು. ತನ್ನ ಸಂಬಂಧಿಯಿಂದಲೇ ದುಷ್ಕೃತ್ಯಕ್ಕೊಳಗಾಗಿರುವುದಾಗಿ ಆಕೆ ಘಟನೆಯನ್ನು ವಿವರಿಸಿದ್ದಾಳೆ. ಈ ಮಾತು ಕೇಳಿ ದಿಢೀರ್ ಶಾಕ್​ಗೊಳಗಾಗಿರುವ ಗಂಡ, ತನ್ನ ಸಂಬಂಧಿಕರ ಮುಂದೆ ಮಾಹಿತಿ ಹಚ್ಚಿಕೊಂಡಿದ್ದಾನೆ. ಇಷ್ಟೇ ಅಲ್ಲ, ಆಕೆಯಿಂದ ವಿಚ್ಛೇದನ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಯುವಕ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ನ್ಯಾಯಾಲಯಕ್ಕೆ ಹಾಜರಾಗುವಂತೆ ಯುವತಿಗೆ ಹಲವು ಬಾರಿ ನೋಟಿಸ್ ನೀಡಿದೆ. ಸುಮಾರು ಮೂರು ವರ್ಷಗಳ ಕಾಲ ವಿಚಾರಣೆಗೆ ಹಾಜರಾಗದ ಕಾರಣ ಕೋರ್ಟ್​​ ಮುದುವೆಯನ್ನು ರದ್ದುಪಡಿಸಿ, ಆದೇಶಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.