ETV Bharat / bharat

Poorest States of India: ಬಿಹಾರ, ಜಾರ್ಖಂಡ್, ಯುಪಿ ದೇಶದ ಅತ್ಯಂತ ಬಡ ರಾಜ್ಯಗಳು- ನೀತಿ ಆಯೋಗ - poorest states in India

ದೇಶದಲ್ಲಿ ಬಡವರ ಹಸಿವು ಮಾತ್ರ ಇನ್ನೂ ಇಂಗಿಲ್ಲ. ನೀತಿ ಆಯೋಗದ ಬಹು ಆಯಾಮದ ಎಂಪಿಐ (ಬಡತನ ಸೂಚ್ಯಂಕ) ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.

poorest states in India
poorest states in India
author img

By

Published : Nov 26, 2021, 5:35 PM IST

ನವದೆಹಲಿ: ಬಡತನ ಎಂದರೇನು?. ನಿರ್ದಿಷ್ಟ (ಬದಲಾಗಬಹುದಾದ) ಪ್ರಮಾಣದ ಭೌತಿಕ ವಸ್ತುಗಳು ಅಥವಾ ಹಣದ ಕೊರತೆ ಅಥವಾ ಅಭಾವವೇ ಈ ಬಡತನ. ಬಡತನ ಒಂದು ಬಹುಮುಖಿ ಪರಿಕಲ್ಪನೆಯೂ ಹೌದು. ಇದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಒಳಗೊಳ್ಳಬಹುದು.

ಸಂಪೂರ್ಣ ಬಡತನ, ಕಡು ಬಡತನ ಅಥವಾ ದಾರಿದ್ರ್ಯ ಪದವು ಆಹಾರ, ಉಡುಗೆ ಮತ್ತು ಆಶ್ರಯದಂತಹ ಮೂಲಭೂತ ವೈಯಕ್ತಿಕ ಆವಶ್ಯಕತೆಗಳನ್ನು ಪೂರೈಸಲು ಅಗತ್ಯ ಸಾಧನಗಳ ಸಂಪೂರ್ಣ ಕೊರತೆಯನ್ನು ಸೂಚಿಸುತ್ತದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ದೇಶದಲ್ಲಿ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.

ಬಡತನ ಸೂಚ್ಯಂಕದ ವಿವರ ಹೀಗಿದೆ..:

ಈ ಸೂಚ್ಯಂಕದ ಪ್ರಕಾರ, ಬಿಹಾರದ ಜನಸಂಖ್ಯೆಯ ಶೇ. 51.91 ರಷ್ಟು ಮಂದಿ ಬಡವರಾಗಿದ್ದಾರೆ. ಜಾರ್ಖಂಡ್‌ನಲ್ಲಿ ಶೇ. 42.16 ಹಾಗು ಉತ್ತರ ಪ್ರದೇಶದಲ್ಲಿ ಶೇ. 37.79 ಬಡತನ ಸೂಚ್ಯಂಕವಿದೆ.

ಮಧ್ಯಪ್ರದೇಶ (ಶೇ. 36.65) ಸೂಚ್ಯಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ. 32.67) ಐದನೇ ಸ್ಥಾನದಲ್ಲಿದೆ. ಕೇರಳ (ಶೇ. 0.71), ಗೋವಾ (ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ಕಡಿಮೆ ಬಡತನ ದಾಖಲಿಸಿ ಸೂಚ್ಯಂಕದ ಕೆಳಭಾಗದಲ್ಲಿವೆ.

ವರದಿಯ ಪ್ರಕಾರ, ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ ಮತ್ತು ವಿಶ್ವಸಂಸ್ಥೆಯ ಯುಎನ್‌ಡಿಪಿ( ಅಭಿವೃದ್ಧಿ ಕಾರ್ಯಕ್ರಮ) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವಿಧಾನವನ್ನು ಬಳಸುತ್ತದೆ. ಮುಖ್ಯವಾಗಿ, ಬಹು ಆಯಾಮದ ಬಡತನದ ಅಳತೆಯಾಗಿ ಇದು ಕುಟುಂಬಗಳು ಎದುರಿಸುತ್ತಿರುವ ಬಹು ಮತ್ತು ಏಕಕಾಲಿಕ ಅಭಾವವನ್ನು ಒಳಗೊಂಡಿದೆ.

ಭಾರತದ ಎಂಪಿಐ 3 ಸಮಾನ ಆಯಾಮಗಳನ್ನು ಹೊಂದಿದೆ. ಅವುಗಳೆಂದರೆ..:

  1. ಆರೋಗ್ಯ
  2. ಶಿಕ್ಷಣ
  3. ಜೀವನ ಮಟ್ಟ

ಇವುಗಳನ್ನು 12 ಸೂಚಕಗಳು ಪ್ರತಿನಿಧಿಸುತ್ತವೆ. ಅವುಗಳೆಂದರೆ..:

  • ಪೌಷ್ಟಿಕತೆ
  • ಮಗು ಮತ್ತು ಹದಿಹರೆಯದವರ ಮರಣ
  • ಪ್ರಸವ ಪೂರ್ವ ಆರೈಕೆ
  • ಶಾಲಾ ವರ್ಷಗಳು
  • ಶಾಲಾ ಹಾಜರಾತಿ
  • ಅಡುಗೆ ಇಂಧನ
  • ನೈರ್ಮಲ್ಯ
  • ಕುಡಿಯುವ ನೀರು
  • ವಿದ್ಯುತ್
  • ವಸತಿ
  • ಆಸ್ತಿ
  • ಬ್ಯಾಂಕ್ ಖಾತೆ

2015ರಲ್ಲಿ 193 ದೇಶಗಳು ಅಳವಡಿಸಿಕೊಂಡ ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿಗಳ) ಚೌಕಟ್ಟು, ಅಭಿವೃದ್ಧಿ ನೀತಿಗಳು, ಸರ್ಕಾರದ ಆದ್ಯತೆಗಳು ಮತ್ತು ಪ್ರಪಂಚದಾದ್ಯಂತ ಅಭಿವೃದ್ಧಿ ಪ್ರಗತಿಯನ್ನು ಅಳೆಯಲು ಮೆಟ್ರಿಕ್‌ಗಳನ್ನು ಮರುವ್ಯಾಖ್ಯಾನಿಸಿದೆ.

"ಭಾರತದ ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕದ ಅಭಿವೃದ್ಧಿಯು, ಬಹು ಆಯಾಮದ ಬಡತನವನ್ನು ಮೇಲ್ವಿಚಾರಣೆ ಮಾಡುವ, ಸಾಕ್ಷ್ಯಾಧಾರಿತ ಮತ್ತು ಕೇಂದ್ರೀಕೃತ ಮಧ್ಯಸ್ಥಿಕೆಗಳನ್ನು ತಿಳಿಸುವ ಸಾರ್ವಜನಿಕ ನೀತಿ ಸಾಧನವನ್ನು ಸ್ಥಾಪಿಸುವಲ್ಲಿ ಪ್ರಮುಖ ಕೊಡುಗೆಯಾಗಿದೆ" ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ವ್ಯಾಖ್ಯಾನಿಸಿದ್ದಾರೆ.

ಭಾರತದ ಮೊದಲ ರಾಷ್ಟ್ರೀಯ ಎಂಪಿಐ ಅಳತೆಯ ಈ ಮೂಲ ವರದಿಯು ಎನ್‌ಹೆಚ್‌ಎಫ್‌ಎಸ್‌ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ)ಯ 2015-16ರ ಅವಧಿಯನ್ನು ಆಧರಿಸಿದೆ. ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಜೀವನಮಟ್ಟ ಮುಂತಾದ ಕ್ಷೇತ್ರಗಳನ್ನು ಒಳಗೊಂಡಿರುವ 12 ಪ್ರಮುಖ ಅಂಶಗಳನ್ನು ಬಳಸಿಕೊಂಡು ರಾಷ್ಟ್ರೀಯ ಎಂಪಿಐ ಮಾಪನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.