ETV Bharat / bharat

ಅಪ್ರಾಪ್ತ ಗರ್ಭಿಣಿಯ ಜೀವಂತವಾಗಿ ದಹಿಸಿದ ಕ್ರೂರಿ ಪ್ರಿಯಕರ: ಪ್ರಕರಣ ದಾಖಲು - ಬಿಹಾರದಲ್ಲಿ ಅಪ್ರಾಪ್ತ ಗರ್ಭಿಣಿ ಹತ್ಯೆ

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿ ಮಾಡಿ ವಿವಾಹವಾಗಲು ನಿರಾಕರಿಸಿದ್ದಲ್ಲದೇ, ಅವರನ್ನ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಗರ್ಭಿಣಿಯ ಜೀವಂತವಾಗಿ ದಹಿಸಿದ ಕ್ರೂರಿ

author img

By

Published : Mar 18, 2023, 9:25 AM IST

ನವಾಡ (ಬಿಹಾರ): ಮದುವೆಯಾಗು ಎಂದು ಪೀಡಿಸುತ್ತಿದ್ದ ಅಪ್ರಾಪ್ತ ಗರ್ಭಿಣಿ ಗೆಳತಿಯನ್ನು ಯುವಕನೊಬ್ಬ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿದ ಘಟನೆ ಬಿಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಬಿಹಾರದ ನವಾದ ಜಿಲ್ಲೆಯ ರಾಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕಿಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಹೊಂದಿದ್ದು. ಇದೇ ವೇಳೆ ಆಕೆ ಗರ್ಭ ಧರಿಸಿದ್ದಾಳೆ. ತನ್ನನ್ನು ಮದುವೆಯಾಗು ಎಂದು ಕೇಳಿದ್ದಕ್ಕೆ ಕುಪಿತಗೊಂಡ ಯುವಕ ಆಕೆಯ ಮನವಿಯನ್ನು ತಿರಸ್ಕಾರ ಮಾಡಿದ್ದ. ಅಲ್ಲದೇ, ಆತನ ಕುಟುಂಬವೂ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮಗಳು ಆರೋಪಿಯೊಂದಿಗೆ ಪ್ರೇಮಪಾಶದಲ್ಲಿ ಬಿದ್ದಿದ್ದು ಇತ್ತ ಪೋಷಕರಿಗೂ ತಿಳಿದಿರಲಿಲ್ಲ. ಆಕೆ ಗರ್ಭ ಧರಿಸಿದ ಬಳಿಕ ವಿಚಾರ ಬಯಲಾಗಿತ್ತು.

ಮದುವೆಯಾಗಲು ಕೋರಿದ್ದ ಬಾಲಕಿ: ಇನ್ನು, ತನ್ನನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದಕ್ಕೆ ಮದುವೆಯಾಗಲು ಅಪ್ರಾಪ್ತೆ ಬೇಡಿಕೆ ಇಟ್ಟಿದ್ದಳು. ಇದು ಯುವಕನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮದುವೆಯಾಗಲು ಸಾಧ್ಯವಿಲ್ಲ ಎಂದು ಯುವಕ ಹಲವು ಬಾರಿ ಹೇಳಿದ್ದನಂತೆ. ಈ ಬಗ್ಗೆ ಹಲವು ಬಾರಿ ಇಬ್ಬರ ಮಧ್ಯೆ ವಾಗ್ವಾದವೂ ನಡೆದಿತ್ತು. ಆದರೆ, ಗರ್ಭಿಣಿ ಅಪ್ರಾಪ್ತೆ ಮಾತ್ರ ಮದುವೆಗೆ ಪಟ್ಟು ಹಿಡಿದಿದ್ದಳು. ಇದರಿಂದ ಆತ ಮಾಡಬಾರದ ಕೃತ್ಯ ಎಸಗಿದ್ದ.

ಓದಿ: ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ!: ಅಧ್ಯಯನ

ಯುವತಿ ಗರ್ಭಿಣಿಯಾಗಿ ವಿವಾಹಕ್ಕೆ ಬೇಡಿಕೆ ಇಟ್ಟಿದ್ದರಿಂದ ಕೋಪಗೊಂಡ ಯುವಕ ಇದರಿಂದ ತಪ್ಪಿಸಿಕೊಳ್ಳಲು ಮರ್ಡರ್​ ಸ್ಕೆಚ್​ ಹಾಕಿದ್ದಾನೆ. ಅದರಂತೆ ನಾಲ್ಕು ದಿನಗಳ ಹಿಂದೆ ತನ್ನ ಗೆಳತಿಯನ್ನು ಜೀವಂತವಾಗಿ ದಹಿಸಿ ಹಾಕಿದ್ದಾನೆ. ಇದಕ್ಕೆ ತನ್ನ ಕುಟುಂಬಸ್ಥರ ನೆರವೂ ಪಡೆದಿದ್ದಾನೆ. ಇಷ್ಟು ಮಾತ್ರವಲ್ಲ ಬಾಲಕಿಯ ಕುಟುಂಬವನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ ಎಂಬುದು ಆಘಾತಕಾರಿ ಸಂಗತಿ.

ಪೋಷಕರಿಗೆ ಗೃಹಬಂಧನ: ಇತ್ತ ಅಪ್ರಾಪ್ತ ಗರ್ಭಿಣಿಯನ್ನು ಜೀವಂತವಾಗಿ ಸುಟ್ಟು ಹಾಕಿ ಈ ವಿಷಯ ಹೊರ ಬರಕೂಡದು ಎಂಬ ಕಾರಣಕ್ಕಾಗಿ ಆಕೆಯ ಪೋಷಕರನ್ನು ಗೃಹಬಂಧನಕ್ಕೆ ಒಳಪಡಿಸಿದ್ದ. ನಾಲ್ಕು ದಿನ ಅವರನ್ನು ಮನೆಯಲ್ಲೇ ಕೂಡಿಹಾಕಿದ್ದ. ಇದನ್ನು ಬಾಯ್ಬಿಟ್ಟರೆ ನಿಮ್ಮನ್ನೂ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದರು. 4 ದಿನಗಳ ಬಳಿಕ ಅನಾರೋಗ್ಯ ಕಾರಣ ನೀಡಿ ಯುವಕನಿಂದ ಪೋಷಕರು ತಪ್ಪಿಸಿಕೊಂಡು ಬಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

"ತನ್ನ 16 ವರ್ಷದ ಮಗಳು ಆರೋಪಿ ಯುವಕನೊಂದಿಗೆ ಪ್ರೇಮಸಂಬಂಧ ಹೊಂದಿದ್ದರು. ಆತ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿ, ವಿವಾಹವಾಗಲು ನಿರಾಕರಿಸಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಮಗಳನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಆಕೆಗೆ ನ್ಯಾಯ ಕೊಡಿಸಿ" ಎಂದು ಬಾಲಕಿಯ ತಂದೆ ರಾಜೌಲಿ ಪೊಲೀಸ್ ಠಾಣೆಗೆ ದೂರು ಲಿಖಿತ ದೂರು ನೀಡಿದ್ದಾರೆ. ಅದರಂತೆ ಯುವಕ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಓದಿ: ಬಂದೂಕು ಹಿಡಿದು ರಸ್ತೆಗೆ ಬಂದ ವ್ಯಕ್ತಿ, ಪೊಲೀಸರ ಮೇಲೆ ಗುಂಡಿನ ದಾಳಿ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.