ಬೆತುಲ್(ಮಧ್ಯಪ್ರದೇಶ): ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ವರ ಕುದುರೆ, ಬೈಕ್, ಕಾರು, ಒಂಟೆ, ಆನೆ ಅಥವಾ ಹೆಲಿಕಾಪ್ಟರ್ ಏರಿ ಬರುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ವಧು ಟ್ರ್ಯಾಕ್ಟರ್ ಓಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ಬಂದು ಗಮನ ಸೆಳೆದಿದ್ದಾರೆ. ಮೇ. 25ರಂದು ಈ ಘಟನೆ ನಡೆದಿದ್ದು, ಇದಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಜವ್ರಾ ಗ್ರಾಮದ ನಿವಾಸಿ ಭಾರತಿ ತಾಗ್ಡೆ ಮೇ 25ರಂದು ಸಪ್ತಪದಿ ತುಳಿದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಓಡಿಸಿಕೊಂಡು ಬರುವ ಮೂಲಕ ಗಮನ ಸೆಳೆದಿದ್ದು, ಪ್ರದೇಶದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ, 'ವಧು ಭಾರತಿ ಡ್ರೈವಿಂಗ್ ಸ್ವರಾಜ್' ಎಂದು ಟ್ವೀಟ್ ಮಾಡಿದ್ದು, Brand Makes Sense... ಎಂದು ಬರೆದುಕೊಂಡಿದ್ದಾರೆ.
-
Bride named ‘Bharti’ driving a Swaraj. (A @MahindraRise brand) Makes sense… https://t.co/pfSNEe1MDh
— anand mahindra (@anandmahindra) May 31, 2022 " class="align-text-top noRightClick twitterSection" data="
">Bride named ‘Bharti’ driving a Swaraj. (A @MahindraRise brand) Makes sense… https://t.co/pfSNEe1MDh
— anand mahindra (@anandmahindra) May 31, 2022Bride named ‘Bharti’ driving a Swaraj. (A @MahindraRise brand) Makes sense… https://t.co/pfSNEe1MDh
— anand mahindra (@anandmahindra) May 31, 2022
ಇದನ್ನೂ ಓದಿ: ಕುದುರೆ ಏರಿ ಬಂದ ವಧು.. ಕ್ಲೀನ್ ಬೌಲ್ಡ್ ಆದ ವರ!.. ವಿಡಿಯೋ!
ವಧು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಅನೇಕರು ಫಿದಾ ಆಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ವಧುವಿನ ಶೈಲಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಧು ಡ್ರೈವ್ ಮಾಡಿದ ಟ್ರ್ಯಾಕ್ಟರ್ ಆನಂದ್ ಮಹೀಂದ್ರಾ ಕಂಪನಿಗೆ ಸೇರಿದ್ದಾಗಿದ್ದು, ಇದೀಗ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಟ್ರ್ಯಾಕ್ಟರ್ಗಳು ಲಭ್ಯವಿರುತ್ತವೆ. ಮದುವೆ ಸಮಾರಂಭಗಳಲ್ಲಿ ಇವುಗಳ ಬಳಕೆ ಮಾಡುವುದು ಸರ್ವೆ ಸಾಮಾನ್ಯ. ಆದರೆ, ವಧು ಖುದ್ದಾಗಿ ಓಡಿಸಿಕೊಂಡು ಬರುವುದು ತುಂಬಾ ವಿರಳವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ಕುದುರೆ ಏರಿ ಬಂದು ಎಲ್ಲರ ಗಮನ ಸೆಳೆದಿದ್ದಳು. ಈ ಘಟನೆ ಕೂಡ ಮಧ್ಯಪ್ರದೇಶದ ಬೆತುಲ್ದಲ್ಲಿ ನಡೆದಿತ್ತು.