ನವದೆಹಲಿ : ಕೊರೊನಾ ಸೋಂಕಿಗೆ ತುತ್ತಾಗಿದ್ದ ಭಾರತದ ಮಾಜಿ ರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮಾ ಅವರ ಪತ್ನಿ ವಿಮಲಾ ಶರ್ಮಾ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.
ಸೋಂಕಿನಿಂದ ಗುಣಮುಖರಾದ 93 ವರ್ಷದ ವಿಮಲಾ ಶರ್ಮಾ ಅವರನ್ನು ಏಮ್ಸ್ ಕೇಂದ್ರದಿಂದ ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಅತ್ಯಂತ ಹಿರಿಯ ನಾಗರಿಕರಲ್ಲಿ ವಿಮಲಾ ಶರ್ಮಾ ಕೂಡ ಒಬ್ಬರಾಗಿದ್ದಾರೆ.

'ಈ ಕಾಯಿಲೆಯ ವಿಚಿತ್ರವಾದ ಸಂಗತಿಯೆಂದರೆ ಕೋವಿಡ್-19 ನಿಂದ ಬಳಲುತ್ತಿರುವ ನಿಮ್ಮ ಸಂಬಂಧಿಕರನ್ನು ಭೇಟಿಯಾಗಲು ನಿಮಗೆ ಅನುಮತಿ ನೀಡುವುದಿಲ್ಲ. ಅವರಿಗೆ ಸೋಂಕು ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಎರಡು ಬಾರಿ ಮಾತನಾಡಿದ್ದೇನೆ' ಎಂದು ಮಗ ಅಶುತೋಷ್ ದಯಾಳ್ ಶರ್ಮಾ ಹೇಳಿದ್ದಾರೆ.
ಸುಮಾರು 18 ದಿನಗಳ ಕಾಲ ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ಕುಟುಂಬ ಮತ್ತು ರೋಗಿಯು ಭರವಸೆ ಕಳೆದುಕೊಳ್ಳದಿರುವುದು ಬಹಳ ಮುಖ್ಯ ಎಂದು ಅಶುತೋಷ್ ಹೇಳಿದ್ದಾರೆ.