ETV Bharat / bharat

ಉತ್ತರಪ್ರದೇಶ ಪೊಲೀಸರಿಂದ ವಿಕಾಸ್ ದುಬೆಯ ಇಬ್ಬರು ಸಹಚರರ ಬಂಧನ - ಜೈ ಬಾಜಪೇಯಿ ಬಂಧನ

ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಅಲ್ಲದೇ ಈತ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ.

Uttar Pradesh police arrest two associates of Vikas Dubey
ವಿಕಾಸ್ ದುಬೆಯ ಇಬ್ಬರು ಸಹಚರರ ಬಂಧನ
author img

By

Published : Jul 20, 2020, 1:03 PM IST

ಕಾನ್ಪುರ : ಇತ್ತೀಚೆಗೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿರುವ ದರೋಡೆಕೋರ ವಿಕಾಸ್​ ದುಬೆಯ ಖಜಾಂಚಿ ಜೈ ಬಾಜಪೇಯಿ ಮತ್ತು ಆತನ ಸಹವರ್ತಿ ಪ್ರಶಾಂತ್​ ಶುಕ್ಲಾ ಅಲಿಯಾಸ್​ ಡಬ್ಬು ಎಂಬಾತನನ್ನು ಬಿಕ್ರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಇದರ ಜೊತೆಗೆ ಈತನ ಮೇಲೆ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ. ಒಂದು ಮಾಹಿತಿಯ ಪ್ರಕಾರ, ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆಯ ಮೊದಲು​ ಅಂದರೆ ಜುಲೈ 2 ರಂದು ಜೈ ಬಾಜಪೇಯಿ ಮತ್ತು ಪ್ರಶಾಂತ್ ಶುಕ್ಲಾ ವಿಕಾಸ್ ದುಬೆಯನ್ನು ಭೇಟಿಯಾಗಿದ್ದರು. ಈ ವೇಳೆ, ದುಬೆಗೆ 2 ಲಕ್ಷ ರೂ ದುಡ್ಡು, 25 ಲೈವ್ ಕಾರ್ಟ್ರಿಜ್ ರಿವಾಲ್ವರ್ ನೀಡಿದ್ದರು.

ಪೊಲೀಸರ ಹತ್ಯೆಯ ಬಳಿಕ ಜುಲೈ 4 ರಂದು ವಿಕಾಸ್ ದುಬೆ ಮತ್ತು ಆತನ ಸಹಚರರು ತಪ್ಪಿಸಿಕೊಳ್ಳಲು ಜೈ ಬಾಜಪೇಯಿ ಸಹಾಯ ಮಾಡಿದ್ದ. ಇದಕ್ಕಾಗಿ ಅವರಿಗೆ ಮೂರು ಐಶಾರಾಮಿ ವಾಹನಗಳನ್ನು ಕಳುಹಿಸಿಕೊಟ್ಟಿದ್ದ. ಈ ವಾಹನಗಳಲ್ಲಿ ತಪ್ಪಿಸಿಕೊಂಡಿದ್ದ ದುಬೆ ಮತ್ತು ಆತನ ಸಹಚರರು ಕಾಕದೇವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು.

ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕಾಸ್​ ದುಬೆಯನ್ನು ಬಂಧಿಸಲು ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮಕ್ಕೆ ತೆರಳಿದ್ದ ಡಿಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಎಂಟು ಪೊಲೀಸರನ್ನು, ದುಬೆ ಮತ್ತು ಆತನ ಸಹಚರರು ಗುಂಡಿಕ್ಕಿ ಕೊಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.