ನ್ಯೂಯಾರ್ಕ್: ಭಾರತೀಯ ನೌಕಾಪಡೆಗೆ ಇದೀಗ ಮತ್ತಷ್ಟು ಆನೆ ಬಲ ಬಂದಿದ್ದು, 1 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ.
ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸಲು ನೌಕಾ ಬಂದೂಕು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಮುಂದಾಗಿದೆ. ಇವುಗಳನ್ನ ಯುದ್ಧನೌಕೆ, ವಿಮಾನ ವಿರೋಧಿ ಮತ್ತು ಸಮುದ್ರದಲ್ಲಿನ ಬಾಂಬ್ ಸ್ಫೋಟದ ವಿರುದ್ಧ ಬಳಕೆಗಾಗಿ ಉಪಯೋಗ ಮಾಡಬಹುದಾಗಿದೆ.
13 ಎಂಕೆ -45 ಐದುಇಂಚಿನ / 62 ಕ್ಯಾಲಿಬರ್ (ಎಂಒಡಿ 4) ನೌಕಾ ಬಂದೂಕುಗಳು ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕಾಗಿ ಅಂದಾಜು ವೆಚ್ಚ 1.0210 ಬಿಲಿಯನ್ ಯುಎಸ್ ಡಾಲರ್ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಅಧಿಸೂಚನೆಯಲ್ಲಿ ತಿಳಿಸಿದೆ.
ಎಂಕೆ -45 ಗನ್ ವಾಯು-ವಿರೋಧಿ ರಕ್ಷಣಾ ಕಾರ್ಯಾಚರಣೆ ನಡೆಸುವಾಗ ಮಹತ್ವದ ಸಾಮರ್ಥ್ಯ ನೀಡಲಿದ್ದು, ಅದಕ್ಕಾಗಿ ಇದು ಬಳಕೆಯಾಗಲಿದೆ. ಈಗಾಗಲೇ ಈ ಬಂದೂಕು ಅಮೆರಿಕದಿಂದ ಆಸ್ಟ್ರೇಲಿಯಾ,ಜಪಾನ್, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾಗೆ ನೀಡಲಾಗಿದ್ದು, ಇದೀಗ ಭಾರತಕ್ಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಿತ್ರರಾಷ್ಟ್ರಗಳಾದ ಬ್ರಿಟನ್ ಮತ್ತು ಕೆನಡಾಗೆ ನೀಡಲು ಪ್ಲಾನ್ ಹಾಕಿಕೊಂಡಿದೆ.