ಮುಂಬೈ: ಮಹಾರಾಷ್ಟ್ರ ರಾಜಕೀಯ ಹಗ್ಗಜಗ್ಗಾಟಕ್ಕೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದ್ದು, ನಾಲ್ಕು ದಿನಗಳ ಹಿಂದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡುವ ಮೂಲಕ ಮೈತ್ರಿ ಪಕ್ಷಗಳಾದ ಎನ್ಸಿಪಿ+ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮೇಲುಗೈ ಆಗಿದೆ.
-
Swearing in ceremony of Uddhav Thackeray as Maharashtra Chief Minister preponed to 28th November. https://t.co/A6Ogff3ZJl
— ANI (@ANI) November 26, 2019 " class="align-text-top noRightClick twitterSection" data="
">Swearing in ceremony of Uddhav Thackeray as Maharashtra Chief Minister preponed to 28th November. https://t.co/A6Ogff3ZJl
— ANI (@ANI) November 26, 2019Swearing in ceremony of Uddhav Thackeray as Maharashtra Chief Minister preponed to 28th November. https://t.co/A6Ogff3ZJl
— ANI (@ANI) November 26, 2019
-
Shiv Sena chief and CM candidate of 'Maha Vikas Aghadi', Uddhav Thackeray: I had never dreamed of leading the state. I would like to thank Sonia Gandhi and others. We are giving a new direction to country by keeping faith on each other. #Maharashtra pic.twitter.com/EIJFzUVfnt
— ANI (@ANI) November 26, 2019 " class="align-text-top noRightClick twitterSection" data="
">Shiv Sena chief and CM candidate of 'Maha Vikas Aghadi', Uddhav Thackeray: I had never dreamed of leading the state. I would like to thank Sonia Gandhi and others. We are giving a new direction to country by keeping faith on each other. #Maharashtra pic.twitter.com/EIJFzUVfnt
— ANI (@ANI) November 26, 2019Shiv Sena chief and CM candidate of 'Maha Vikas Aghadi', Uddhav Thackeray: I had never dreamed of leading the state. I would like to thank Sonia Gandhi and others. We are giving a new direction to country by keeping faith on each other. #Maharashtra pic.twitter.com/EIJFzUVfnt
— ANI (@ANI) November 26, 2019
ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ಕೊಶ್ಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ನಾಳೆ ವಿಶ್ವಾಸಮತ ಯಾಚಿಸುವಂತೆ ಕೋರ್ಟ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಸೂಚಿಸಿತ್ತು. ಈ ಮೂಲಕ ಪ್ರತಿಪಕ್ಷಗಳಿಗೆ ಜಯ ದೊರೆತಂತಾಗಿದೆ.
ನಾಳೆ ಮಹಾರಾಷ್ಟ್ರದಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ನೂತನವಾಗಿ ಆಯ್ಕೆಗೊಂಡಿರುವ ಎಲ್ಲಾ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇನ್ನು ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಿಸೆಂಬರ್ 1ರಂದು ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಇದೀಗ ಲಭ್ಯವಾದ ಮಾಹಿತಿ ಪ್ರಕಾರ ಇದೇ ತಿಂಗಳ 28ರಂದು ಅವರು ಸಿಎಂ ಗಾದಿ ಅಲಂಕಾರ ಮಾಡಲಿದ್ದಾರೆ.