ETV Bharat / bharat

ಬಾತ್​ರೂಮ್​ ಬೀಗ ಮುರಿದು ಕ್ವಾರಂಟೈನ್​​ ಕೇಂದ್ರದಲ್ಲಿದ್ದ ಇಬ್ಬರಿಂದ ತಪ್ಪಿಸಿಕೊಳ್ಳಲು ಯತ್ನ!

author img

By

Published : Apr 17, 2020, 7:15 PM IST

ಉತ್ತರಪ್ರದೇಶದಲ್ಲಿ ಇಬ್ಬರು ಬಾತ್​ರೂಮ್​ ಬೀಗ ಮುರಿದು ಕ್ವಾರಂಟೈನ್​ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಕ್ವಾರಂಟೈನ್​ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನ

ಬಹ್ರೇಚ್(ಯುಪಿ): ತಬ್ಲಿಘಿ ಜಮಾತ್‌ಗೆ ಸಂಬಂಧ ಹೊಂದಿರುವ ಇಬ್ಬರು ಜನರು ಸ್ನಾನ ಗೃಹದ ಬೀಗ ಮುರಿದು ಕ್ವಾರಂಟೈನ್​ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಿಂದ ಹಿಂದಿರುಗಿದ್ದ ತಾಜ್ವಾಪುರ ಪ್ರದೇಶದ 12 ಜನರನ್ನು ಜಿಲ್ಲಾ ಆಸ್ಪತ್ರೆಯ ಮಹಿಳಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇದನ್ನು ಕೊರೊನಾ ಕ್ವಾರಂಟೈನ್​ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಅವರಲ್ಲಿ ಇಬ್ಬರು ಗುರುವಾರ ಸ್ನಾನ ಗೃಹದ ಬೀಗ ಒಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಸಿಂಗ್ ಹೇಳಿದರು.

ಇದನ್ನು ತಿಳಿದ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಹಿಡಿದು ವಾಪಸ್ ಕರೆ ತಂದಿದ್ದಾರೆ. ನಂತರ ಅವರನ್ನು ಮರಳಿ ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಸಿಂಗ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.