ಹೈದರಾಬಾದ್: ಕೊರೊನಾ ಸೋಂಕಿಗೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಮಹಿಳಾ ಕೌನ್ಸಿಲರ್ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ನಿಂದ ಮೃತಪಟ್ಟ ಮೊದಲ ಜನಪ್ರತಿನಿಧಿ ಇವರಾಗಿದ್ದಾರೆ.
ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸಂಗರೆಡ್ಡಿ ಪುರಸಭೆ ಕೌನ್ಸಿಲರ್ರನ್ನು ಜೂನ್ 30ರಂದು ಹೈದರಾಬಾದ್ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜುಲೈ 3ರಂದು ಸೋಂಕು ತಗುಲಿರುವುದು ದೃಢವಾಗಿತ್ತು. ಇವರ ಸ್ಥಿತಿ ಗಂಭೀರವಾದ ಕಾರಣ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತ ಕೌನ್ಸಿಲರ್ ಮಗನ ಕೋವಿಡ್ ಪರೀಕ್ಷಾ ವರದಿಯೂ ಪಾಸಿಟಿವ್ ಬಂದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಕುಟುಂಬದ 14 ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಈವರೆಗೆ 23,902 ಕೊರೊನಾ ಕೇಸ್ಗಳು ಹಾಗೂ 295 ಸಾವು ವರದಿಯಾಗಿದೆ. ಗ್ರೇಟರ್ ಹೈದರಾಬಾದ್ ಬಳಿಕ ಸಂಗರೆಡ್ಡಿ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸಂಗರೆಡ್ಡಿಯ ತಹಶೀಲ್ದಾರ್ಗೆ ಕೂಡ ಸೋಂಕು ತಗುಲಿತ್ತು.