ETV Bharat / bharat

ಪಬ್​ಜಿ ಬಳಿಕ ಗೂಗಲ್​ನಲ್ಲಿ ಡೆಡ್ಲಿ ಗೇಮ್​ಗಳ ಹುಡುಕಾಟದಲ್ಲಿ ವಿದ್ಯಾರ್ಥಿಗಳು.. - Online game

ನಿಮ್ಮ ಮಕ್ಕಳು ಆನ್​ಲೈನ್​ ಗೇಮ್​ನಿಂದ ಹೊರಬರಬೇಕೆಂದ್ರೆ ಅವರನ್ನು ಮನೆಯಿಂದ ಹೊರಗೆ ಬಿಟ್ಟು, ದೈಹಿಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಎಂದು ಪೋಷಕರಿಗೆ ವೈದ್ಯರಿಂದ ಸಲಹೆ..

PUBG
ಪಬ್​ಜಿ ಬ್ಯಾನ್​
author img

By

Published : Sep 11, 2020, 2:53 PM IST

ಗಾಜಿಯಾಬಾದ್ : ಭಾರತದಲ್ಲಿ ಚೀನಾದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್​ ಪಬ್​ಜಿ ನಿಷೇಧದ ಬಳಿಕ ವಿದ್ಯಾರ್ಥಿಗಳು ಅದೇ ರೀತಿಯ ಡೆಡ್ಲಿ ಗೇಮ್​ಗಳನ್ನು ಗೂಗಲ್‌ನಲ್ಲಿ ಹೆಚ್ಚೆಚ್ಚು ಹುಡುಕುತ್ತಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್​ನ ಮನೋವೈದ್ಯೆ ಹಿಮಿಕಾ ಅಗರ್‌ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಬ್​ಜಿ ಬ್ಯಾನ್​ ಬಳಿಕ ತಮ್ಮ ಮಕ್ಕಳು ಅದೇ ರೀತಿಯ ಗೇಮ್​ಗಳನ್ನು ಹುಡುಕುತ್ತಿದ್ದಾರೆ. ಅವರನ್ನು ಗೇಮ್​ಗಳ ಚಟದಿಂದ ಬಿಡಿಸುವಂತೆ ಅನೇಕ ಪೋಷಕರು ಮನೋವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹಿಮಿಕಾ ಅಗರ್‌ವಾಲ್ ತಿಳಿಸಿದ್ದಾರೆ.

ಪಬ್​ಜಿ ಬಳಿಕ ಗೂಗಲ್​ನಲ್ಲಿ ಡೆಡ್ಲಿ ಗೇಮ್​ಗಳ ಹುಡುಕಾಟದಲ್ಲಿ ವಿದ್ಯಾರ್ಥಿಗಳು..

ಪಬ್​ಜಿಗೆ ಅಡಿಕ್ಟ್​ ಆಗಿ, ಪರೀಕ್ಷೆಗಳಲ್ಲಿ ಅಂಕ ತೆಗೆದುಕೊಂಡಿದ್ದ ವಿದ್ಯಾರ್ಥಿಯೋರ್ವ ಪ್ರತಿಕ್ರಿಯೆ ನೀಡಿದ್ದಾನೆ. ನಾನು ಕೂಡ ಮೊದಲು ಪಬ್​ಜಿ ಗುಂಗಲ್ಲೇ ಇರುತ್ತಿದ್ದೆ. ಆದರೆ, ಶೈಕ್ಷಣಿಕ ಚಟುವಟಿಕೆಗಳಲ್ಲಿ ನನ್ನ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಬಂದಂತೆ ನನ್ನ ತಪ್ಪಿನ ಅರಿವಾಯಿತು. ಪಬ್​ಜಿ ಬ್ಯಾನ್​ ಆದಾಗ ಡಿಪ್ರೆಷನ್​ಗೆ ಹೋಗಿದ್ದೆ. ಇದು ಬ್ಯಾನ್​ ಆಗಿರುವುದೇ ಒಳ್ಳೆಯದಾಗಿದೆ ಎಂದು ಹೇಳಿದ್ದಾನೆ.

ನಿಮ್ಮ ಮಕ್ಕಳು ಆನ್​ಲೈನ್​ ಗೇಮ್​ನಿಂದ ಹೊರಬರಬೇಕೆಂದ್ರೆ ಅವರನ್ನು ಮನೆಯಿಂದ ಹೊರಗೆ ಬಿಟ್ಟು, ದೈಹಿಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಎಂದು ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.