ಪುಣೆ: ಪುಣೆಯ ಸ್ಟುಡೆಂಟ್ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯು ಬರಗಾಲಕ್ಕೆ ತುತ್ತಾಗಿರುವ ಪ್ರದೇಶದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಎರಡು ಹೊತ್ತಿನ ಊಟವನ್ನ ಉಚಿತವಾಗಿ ನೀಡುತ್ತಿದೆ.
ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದ ಸುಮಾರು 2000 ವಿದ್ಯಾರ್ಥಿಗಳು ಸಹಾಯ ಕೋರಿ ಪುಣೆಯ ಸ್ಟುಡೆಂಟ್ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಗೆ ಅರ್ಜಿ ಹಾಕಿದ್ದರು. ಆದರೆ, ಸಂಸ್ಥೆಯ ಆರ್ಥಿಕ ಮಟ್ಟಕ್ಕೆ ಅನುಗುಣವಾಗಿ 600 ವಿದ್ಯಾರ್ಥಿಗಳಿಗೆ ಉಪಹಾರ ಹೊಂದಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಅದ್ಯಕ್ಷ ಕುಲ್ದೀಪ್ ಅಂಬೇಡ್ಕರ್.

ಅಷ್ಟೇ ಅಲ್ಲ, ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಮನೆಗೆ ತೆರಳದೆ ಬಟ್ಟೆ ಅಂಗಡಿಗಳಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪೋಷಕರಿಗೆ ನೆರವಾಗಿದ್ದಾರೆ.