ETV Bharat / bharat

ವಿಧಿಯಿಲ್ಲದೆ ಕೊರೊನಾ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಮಾಡಿದ ಕೇರಳ ಸರ್ಕಾರ - ಕೇರಳದ 10 ಜಿಲ್ಲೆಗಳಲ್ಲಿ ಸೆ.144 ಜಾರಿ

ಕೇರಳದಲ್ಲಿ ಕೊರೊನಾ ಹರಡುವಿಕೆಯ ವೇಗ ತೀವ್ರಗೊಂಡಿದ್ದು, ನಿಯಂತ್ರಿಸುವ ಸಲುವಾಗಿ ರಾಜ್ಯದ 10 ಜಿಲ್ಲೆಗಳಲ್ಲಿ ಸರ್ಕಾರ 144 ಸೆಕ್ಷನ್​ ಜಾರಿಗೊಳಿಸಿ ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನ ನಿರ್ಬಂಧಿಸಿದೆ.

of-kerala-from-october-3
ಕೊರೊನಾ
author img

By

Published : Oct 3, 2020, 11:55 AM IST

Updated : Oct 3, 2020, 12:36 PM IST

ತಿರುವನಂತಪುರ: ಕೊರೊನಾ ಪ್ರಕರಣ ಏರಿಕೆ ತಡೆಗಟ್ಟಲು ಕೇರಳ ಸರ್ಕಾರ 10 ಜಿಲ್ಲೆಗಳಲ್ಲಿ ಸಿಆರ್​​ಪಿಸಿಯ ಸೆ.144 ಜಾರಿಗೊಳಿಸಿದ್ದು, ಐದಕ್ಕೂ ಹೆಚ್ಚು ಜನ ಒಂದೆಡೆ ಸೇರದಂತೆ ನಿರ್ಬಂಧ ವಿಧಿಸಿದೆ.

ಜನರು ಗುಂಪು ಸೇರುವುದರಿಂದ ಕೋವಿಡ್​ ಹರಡುವಿಕೆ ಅಪಾಯ ಹೆಚ್ಚಾಗಿರುತ್ತದೆ ಈ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದಲೇ ಸೆ.144 ಜಾರಿಗೆ ಬರಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ತಿರುವನಂತಪುರಂ, ಕೊಟ್ಟಾಯಂ, ಎರ್ನಾಕುಲಂ, ಕೋಝಿಕೋಡ್, ಮಲಪ್ಪುರಂ, ಅಲಪ್ಪುಜ, ಇಡುಕ್ಕಿ, ಪಾಲಕ್ಕಾಡ್, ತ್ರಿಶೂರ್, ಕೊಲ್ಲಂ ಜಿಲ್ಲೆಗಳಲ್ಲಿ ಕೋವಿಡ್ -19 ಪಾಸಿಟಿವ್​ ಪ್ರಕರಣಳು ಉಲ್ಭಣಗೊಂಡ ಹಿನ್ನೆಲೆ ಅಕ್ಟೋಬರ್ 31 ರವರೆಗೆ ಸೆಕ್ಷನ್​ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಯಾವುದೇ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸಲು ಅನುಮತಿ ಇಲ್ಲ ಹಾಗೂ ಕಂಟೈನ್ಮೆಂಟ್ ಝೋನ್​​ ಒಳಗೆ ಮತ್ತು ಹೊರಗೆ ಯಾವುದೇ ಸಭೆ ನಡೆಸಲು ಅನುಮತಿ ನೀಡಲಾಗುವುದಿಲ್ಲ. ಇನ್ನು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಜನರಿಗೆ ಅವಕಾಶ ನೀಡಿದರೆ, ಮದುವೆಗೆ 50 ಜನರ ಪಾಲ್ಗೊಳ್ಳುವಿಕೆಗೆ ಅವಕಾಶವಿರುತ್ತದೆ.

ಸರ್ಕಾರಿ, ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಜನರು ಭಾಗವಹಿಸಬಹುದು. ಆದರೆ, ಸಾರ್ವಜನಿಕ ಸಾರಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂಗಡಿಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸೆ.144 ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ. ಸಾರ್ವಜನಿಕ ಸಾರಿಗೆ, ಸರ್ಕಾರಿ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು ಸಾಮಾಜಿಕ ಅಂತರ ಕಾಪಾಡುವ ಮೂಲಕ ಕಾರ್ಯನಿರ್ವಹಿಸಬಹುದು ಎಂದು ತಿಳಿಸಲಾಗಿದೆ.

ಆರೋಗ್ಯ, ಪೊಲೀಸ್, ಸರ್ಕಾರಿ ಇಲಾಖೆ, ವಿದ್ಯುತ್, ನೈರ್ಮಲ್ಯ ಮತ್ತು ನೀರು ಸರಬರಾಜಿನಂತ ಅಗತ್ಯ ಸೇವೆಗಳಿಗೆ ಅವಕಾಶವಿದೆ. ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ಹೊರತುಪಡಿಸಿ ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆ ಹೊರತುಪಡಿಸಿ ಕಂಟೈನ್ಮೆಂಟ್​​ ವಲಯಗಳಲ್ಲಿ ಜನರು ಓಡಾಡುವಂತಿಲ್ಲ.

ಕೇರಳದಲ್ಲಿ ವೈರಸ್​ ಹರಡುವಿಕೆಯ ವೇಗ ಮತ್ತಷ್ಟು ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ ಅತಿ ಹೆಚ್ಚು ಅಂದರೆ 9,258 ಕೋವಿಡ್​​ ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿವೆ. ಸೆಪ್ಟೆಂಬರ್ 24 ರ ವೇಳೆಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1.50 ಲಕ್ಷ ದಾಟಿತ್ತು. ಸದ್ಯ ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 77,482 ಕ್ಕೆ ತಲುಪಿದೆ.

ಸದ್ಯ ಕೋವಿಡ್​ ಆಸ್ಪತ್ರೆ ಸೇರಿದಂತೆ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ 72,339 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಲ್ಲಿ ಐಸೋಲೇಶನ್​​ನಲ್ಲಿರುವ 30,258 ಜನರು ಸೇರಿದಂತೆ ಒಟ್ಟು 2.43 ಲಕ್ಷಕ್ಕೂ ಹೆಚ್ಚು ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

Last Updated : Oct 3, 2020, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.