ಮುಂಬೈ: 17ನೇ ಲೋಕಸಭಾ ಚುನಾವಣೆಯಲ್ಲಿ ಸತಾರಾ ಸಂಸತ್ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಚಿನ್ಹೆಯಡಿ ಸ್ಪರ್ಧಿಸಿ ಗೆದ್ದ ಬಳಿಕ ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕಣಕಿಳಿದವನಿಗೆ ಸೋಲುಂಟಾಗಿದೆ.
ಎನ್‌ಸಿಪಿ ಪಕ್ಷದ ಪ್ರಭಾವಿ ನಾಯಕ ಆಗಿದ್ದಾ ಸತಾರಾ ಸಂಸದ ಉದಯನ್‌ರಾಜೆ ಭೋಸಲೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಜೊತೆಗೆ ಸತಾರಾ ಸಂಸತ್ ಕ್ಷೇತ್ರದ ಉಪಚುನಾವಣೆ ಸಹ ನಡೆದಿತ್ತು.
ಭೋಸಲೆ ಅವರು ಬಿಜೆಪಿ ಚಿನ್ಹೆಯಡಿ ಸ್ಪರ್ಧಿಸಿ ಪ್ರತಿಯಾದ ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ್ ಪಾಟೀಲ್ ಅವರ ವಿರುದ್ಧ 85,000 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. 17ನೇ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಭೋಸಲೆ ಅವರು ಸುಮಾರು 1.30 ಲಕ್ಷ ಮತಗಳ ಅಂತರದಿಂದ ಜಯಿಸಿದ್ದರು.
ಸತಾರಾದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಶರದ್ ಪವಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ಭಾರೀ ಮಳೆ ಸುರಿದಿತ್ತು. ಈ ಸಂದರ್ಭದಲ್ಲಿಯೂ ಭಾಷಣ ಮುಂದುವರೆಸಿರುವ ಪವಾರ್ ಅವರು, ದೇವರು ಮಳೆ ಮೂಲಕ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಸತಾರ ಜಿಲ್ಲೆಯಲ್ಲಿ ನಮ್ಮ ಪಕ್ಷ ಪವಾಡ ಮಾಡಲಿದೆ ಎಂದಿದ್ದರು. ಜನತೆಯ ಪವರ್ ಅವರ ಪ್ರಚಾರ ವೈಖರಿಗೆ ಮನಸೋತು ಎನ್‌ಸಿಪಿ ಪಕ್ಷದ ಅಭ್ಯರ್ಥಿಗೆ ಆಶೀರ್ವದಿಸಿದ್ದಾರೆ.