ಮುಂಬೈ: ರೈತರ ಪ್ರತಿಭಟನಾ ಸ್ಥಳದಲ್ಲಿ ಅಂತರ್ಜಾಲ ಸ್ಥಗಿತಗೊಳಿಸುವಿಕೆಯನ್ನು ಟೀಕಿಸಿರುವ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
32 ವರ್ಷದ ಗಾಯಕಿ ರಿಹಾನ್ನಾ ರೈತರ ಪರವಾಗಿ ದನಿ ಎತ್ತಿದ ಮೊದಲ ಜಾಗತಿಕ ವ್ಯಕ್ತಿಯಾಗಿ ನಿಲ್ಲುತ್ತಾಳೆ. 'ರೈತರು ಪೊಲೀಸರ ಘರ್ಷಣೆ ನಡೆಯುತ್ತಿರುವುದರಿಂದ ಭಾರತವು ನವದೆಹಲಿಯ ಸುತ್ತಲೂ ಇಂಟರ್ನೆಟ್ ಕಡಿತಗೊಳಿಸುತ್ತದೆ, ನಾವ್ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ?' ಎಂದು ತಮ್ಮ ಟ್ಟಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
-
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021 \" class="align-text-top noRightClick twitterSection" data="
\">why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
\why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ಇನ್ನು ರಿಹಾನ್ನಾ ಟ್ವೀಟ್ ವೇಗವಾಗಿ ಸಂಚಲನ ಮೂಡಿಸಿತು, ಗಂಟೆಗೆ ಒಂದು ಲಕ್ಷಕ್ಕೂ ಹೆಚ್ಚು ರೀಟ್ವೀಟ್ ಆದರೆ ಎರಡು ಲಕ್ಷ ಲೈಕ್ ಪಡೆದವು. ಈ ಆಂದೋಲನಕ್ಕೆ ಬೆಂಬಲ ಸೂಚಿಸಿದ ಬಾಲಿವುಡ್ ನಟಿಯರಾದ ರಿಚಾ ಚಡ್ಡಾ ಮತ್ತು ಸ್ವರಾ ಭಾಸ್ಕರ್ ರಿಹಾನ್ನಾ ಹೇಳಿಕೆಯನ್ನು ಶ್ಲಾಘಿಸಿದರೆ, ನಟಿ ಕಂಗನಾ ರಣಾವತ್ ಟೀಕಿಸಿದ್ದಾರೆ. ರಿಹಾನ್ನಾ ಓರ್ವ ಫೂಲ್ ಎಂದು ಕಂಗನಾ ಜರಿದಿದ್ದಾರೆ.
ರೈತರ ವಿಷಯದಲ್ಲಿ ಭಾರತೀಯ ತಾರೆಗಳು ಸುಮ್ಮನಿರುವ ಹೊತ್ತಿನಲ್ಲಿ ಪಾಪ್ ತಾರೆಯ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರ ವರ್ಗವು ಆಕೆಯನ್ನು ಬಾಯ್ತುಂಬ ಪ್ರಶಂಸಿಸಿದೆ.
ಇಂಟರ್ನೆಟ್ ನಿರ್ಬಂಧ ವಿರೋಧಿಸಿ ರೈತ ಸಂಘಟನೆಗಳು ಫೆಬ್ರವರಿ 6 ರಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ನಿರ್ಬಂಧಿಸಿ ದೇಶಾದ್ಯಂತ 'ಚಕ್ಕಾ ಜಾಮ್' ಘೋಷಿಸಿದೆ.