ನವದೆಹಲಿ: ಪಡಿತರ ನೀಡಲು ಸ್ಥಳೀಯ ಆಡಳಿತ ನಿರಾಕರಿಸಿದ ಹಿನ್ನೆಲೆಯಲ್ಲಿ ನವದೆಹಲಿಯ ಪ್ರೇಮ್‌ನಗರ ನಿವಾಸಿಗಳು ಸರ್ಕಾರಿ ಶಾಲೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಶುಕ್ರವಾರ ಪಡಿತರ ನೀಡುವುದಾಗಿ ಹೇಳಿ ಒಂದು ದಿನ ಮುಂಚಿತವಾಗಿ ಟೋಕನ್ ನೀಡಲಾಗಿತ್ತು. ಅದರಂತೆ ಇಂದು ಮುಂಜಾನೆಯೆ ಜನರು ಪಡಿತರಕ್ಕಾಗಿ ಕಾದು ನಿಂತಿದ್ದರು. ಆದರೆ, ಶಾಲಾ ಉದ್ಯೋಗಿಯೊಬ್ಬರು ಇಂದು ಪಡಿತರ ನೀಡುವುದಿಲ್ಲ ಎಂದಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ನಾವು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅಷ್ಟರಲ್ಲಿ, ಶಾಲೆಯಲ್ಲಿ ಪಡಿತರ ನೀಡಲಾಗುತ್ತಿದೆ ಎಂದು ಜನರು ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ್ದಾರೆ. ಇಂದು ಪಡಿತರ ನೀಡುವುದಿಲ್ಲ ಎಂದು ನಾವು ತಿಳಿಸಿದಾಗ ಕೋಪಗೊಂಡ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.