ETV Bharat / bharat

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಕಾತುರನಾದ ಫಾಶಿದಾರ ಯಾರು ಗೊತ್ತೆ? - ಗಲ್ಲು ಶಿಕ್ಷೆ

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧನಾಗಿದ್ದೇನೆ ಮತ್ತು ಮರಣದಂಡನೆ ನಡೆಸಲು ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಮೀರತ್​ ಜೈಲ್​ನ ಫಾಶಿದಾರ ಪವನ್ ಜಲ್ಲಾಡ್ ಹೇಳಿದ್ದಾರೆ. ಇನ್ನೊಂದೆಡೆ, ನಿರ್ಭಯಾ ಅಪರಾಧಿಗಳ ಮರಣದಂಡನೆಗಾಗಿ ಗಲ್ಲಿಗೇರಿಸುವವನ ಸೇವೆಯನ್ನು ಕೋರಿ, ಪ್ರಾಧಿಕಾರವು ಉತ್ತರ ಪ್ರದೇಶ ಜೈಲು ಇಲಾಖೆಗೆ ಪತ್ರ ಬರೆಯಲಿದೆ ಎಂದು ತಿಹಾರ್ ಜೈಲು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Nirbhaya case
ನಿರ್ಭಯಾ ಪ್ರಕರಣ
author img

By

Published : Jan 8, 2020, 6:05 AM IST

Updated : Jan 8, 2020, 6:22 AM IST

ಮೀರತ್​: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ನೇಣುಗಂಬಕ್ಕೆ ಏರಲು ದಿನಗಳ ಎಣಿಸುತ್ತಿರುವ ಅಪರಾಧಿಗಳನ್ನು ಗಲ್ಲಿಗೇರಿಸಲು ಕಾತುರನಾಗಿ ಇರುವುದಾಗಿ ಫಾಶಿದಾರನೊಬ್ಬ ಹೇಳಿದ್ದಾನೆ.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧನಾಗಿದ್ದೇನೆ ಮತ್ತು ಮರಣದಂಡನೆ ನಡೆಸಲು ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಮೀರತ್​ ಜೈಲ್​ನ ಫಾಶಿದಾರ ಪವನ್ ಜಲ್ಲಾಡ್ ಹೇಳಿದ್ದಾರೆ.

ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧನಿದ್ದೇನೆ. ಜೈಲು ಆಡಳಿತದಿಂದ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಆದೇಶವನ್ನು ಸ್ವೀಕರಿಸಿದರೆ ಖಂಡಿತವಾಗಿಯೂ ಹೋಗುತ್ತೇನೆ ಎಂದು ತಲೆಮಾರುಗಳಿಂದ ಫಾಶಿದಾರಿಕೆ ಮಾಡಿಕೊಂಡು ಬರುತ್ತಿರುವ ಜಲ್ಲಾಡ್ ಸುದ್ದಿಗಾರರಿಗೆ ತಿಳಿಸಿದರು.

ಈ ಅಪರಾಧಿಗಳನ್ನು ಗಲ್ಲಿಗೇರಿಸಿದರೆ ನನಗೆ, ನಿರ್ಭಯಾ ಅವರ ಪೋಷಕರಿಗೆ ಮತ್ತು ದೇಶದ ಎಲ್ಲರಿಗೂ ಒಂದು ದೊಡ್ಡ ನಿಟ್ಟುಸಿರು ಸಿಕ್ಕಂತಾಗುತ್ತದೆ. ಇಂತಹ ಜನರನ್ನು ಗಲ್ಲಿಗೇರಿಸಬೇಕು. ಅಗತ್ಯವಿದ್ದಲ್ಲಿ ನಾಲ್ವರು ಆರೋಪಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸಬಹುದು ಎಂದು ಪವನ್ ಹೇಳಿದ್ದಾರೆ.

ನಿರ್ಭಯಾ ಅಪರಾಧಿಗಳ ಮರಣದಂಡನೆಗಾಗಿ ಗಲ್ಲಿಗೇರಿಸುವವನ ಸೇವೆಯನ್ನು ಕೋರಿ, ಪ್ರಾಧಿಕಾರವು ಉತ್ತರ ಪ್ರದೇಶ ಜೈಲು ಇಲಾಖೆಗೆ ಪತ್ರ ಬರೆಯಲಿದೆ ಎಂದು ತಿಹಾರ್ ಜೈಲು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ನ್ಯಾಯಾಲಯವು ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜನವರಿ 22ರಂದು ಮರಣದಂಡನೆ ವಿಧಿಸುವಂತೆ ಆದೇಶ ನೀಡಿದೆ. ಅಪರಾಧಿಗಳಾದ ಪವನ್ ಕುಮಾರ್ ಗುಪ್ತಾ, ಅಕ್ಷಯ್, ವಿನಯ್ ಮತ್ತು ಮುಖೇಶ್ ಅವರನ್ನು ಅಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುವುದು.

Intro:Body:Conclusion:
Last Updated : Jan 8, 2020, 6:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.