ETV Bharat / bharat

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಎಂದರೇನು? ಏನಿದರ ಉಪಯೋಗ? - ಐಸೊಲೇಷನ್

ಯಾವುದಾದರೂ ವೈರಸ್​ ಅಥವಾ ರೋಗಕಾರಕ ಜೀವಿ ದೇಹ ಹೊಕ್ಕಿದಾಗ ಅದರ ವಿರುದ್ಧ ಹೋರಾಡಲು ಶರೀರದಲ್ಲಿ ಪ್ರತಿಕಾಯಗಳು (ಆ್ಯಂಟಿಬಾಡಿ) ಹುಟ್ಟಿಕೊಳ್ಳುತ್ತವೆ. ಹೀಗೆ ರಕ್ತದಲ್ಲಿ ಇರುವ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುವುದೇ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್ ಆಗಿದೆ. ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿದೆಯಾ ಅಥವಾ ಇಲ್ಲ ಎಂಬುದನ್ನು ಮಾತ್ರ ಈ ಟೆಸ್ಟ್​ನಿಂದ ಕಂಡುಹಿಡಿಯಬಹುದು.

RAPID ANTIBODY TEST
RAPID ANTIBODY TEST
author img

By

Published : Apr 20, 2020, 7:44 PM IST

Updated : Apr 20, 2020, 8:05 PM IST

ಕೋವಿಡ್​-19 ಕಾಳ್ಗಿಚ್ಚಿನಂತೆ ಜಗತ್ತಿನಲ್ಲಿ ಹರಡುತ್ತಿರುವ ಈ ಸಮಯದಲ್ಲಿ ಕೋವಿಡ್​ ಸೋಂಕು ಪತ್ತೆ ಪರೀಕ್ಷೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಕೋವಿಡ್​ ಸೋಂಕು ಪತ್ತೆಗಾಗಿ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್ ಕುರಿತು ಆಗಾಗ ಒಂದಿಲ್ಲೊಂದು ಮಾಧ್ಯಮದಲ್ಲಿ ವರದಿಯಾಗುತ್ತಲೇ ಇದೆ. ಹಾಗಾದರೆ ಈ ಆ್ಯಂಟಿಬಾಡಿ ಟೆಸ್ಟ್ ಎಂದರೇನು, ಏತಕ್ಕಾಗಿ ಅದನ್ನು ಮಾಡುತ್ತಾರೆ ಅನ್ನೋದನ್ನು ತಿಳಿಯೋಣ.

ಏ.20 ರಿಂದ ದೇಶದ ಕೆಲ ರಾಜ್ಯಗಳಲ್ಲಿ ಕೋವಿಡ್​ ಸೋಂಕು ಪತ್ತೆಗಾಗಿ ರ್‍ಯಾಪಿಡ್ ಆ್ಯಂಟಿಬಾಡಿ ಟೆಸ್ಟ್​ಗಳನ್ನು ಆರಂಭಿಸಲಾಗುತ್ತಿದೆ.

ಸೆರಾಲಜಿ ಕಿಟ್​ಗಳನ್ನೇ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟಿಂಗ್​ ಕಿಟ್​ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ರಕ್ತದ ಸೀರಮ್​ಗಳ ವೈಜ್ಞಾನಿಕ ಅಧ್ಯಯನವೇ ಸೆರಾಲಜಿ. ಕೊರೊನಾ ಸೋಂಕು ತಗುಲಿದಾಗ ಆರಂಭದಲ್ಲಿ ವೈರಸ್​ ಮೂಗಿನ ದ್ರಾವಣ ಹಾಗೂ ಫೆರಿಂಜಿಯಲ್ ದ್ರಾವಣದಲ್ಲಿ ಕಂಡುಬರುತ್ತದೆ. ಎಂಟು ದಿನಗಳ ನಂತರ ಗಂಟಲು ಹಾಗೂ ಮೂಗಿನಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸುತ್ತವೆ.

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಎಂದರೇನು?

ಯಾವುದಾದರೂ ವೈರಸ್​ ಅಥವಾ ರೋಗಕಾರಕ ಜೀವಿ ದೇಹ ಹೊಕ್ಕಿದಾಗ ಅದರ ವಿರುದ್ಧ ಹೋರಾಡಲು ಶರೀರದಲ್ಲಿ ಪ್ರತಿಕಾಯಗಳು (ಆ್ಯಂಟಿಬಾಡಿ) ಹುಟ್ಟಿಕೊಳ್ಳುತ್ತವೆ. ಹೀಗೆ ರಕ್ತದಲ್ಲಿ ಇರುವ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುವುದೇ ರ್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್ ಆಗಿದೆ. ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿದೆಯಾ ಅಥವಾ ಇಲ್ಲ ಎಂಬುದನ್ನು ಮಾತ್ರ ಈ ಟೆಸ್ಟ್​ನಿಂದ ಕಂಡುಹಿಡಿಯಬಹುದು.

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್ ಹೇಗೆ ಮಾಡಲಾಗುತ್ತದೆ?

ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪಡೆದು ಟೆಸ್ಟ್​ ಮಾಡಲಾಗುತ್ತದೆ. ಸಾಮಾನ್ಯವಾಗಿ 20 ರಿಂದ 30 ನಿಮಿಷಗಳಲ್ಲಿ ಫಲಿತಾಂಶ ಸಿಗುತ್ತದೆ.

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​​ನಲ್ಲಿ ಪತ್ತೆಯಾಗುವ ಅಂಶಗಳೇನು?

ವ್ಯಕ್ತಿಯ ರಕ್ತದಲ್ಲಿರಬಹುದಾದ ಕೊರೊನಾ ವೈರಸ್​ ವಿರುದ್ಧ ಆ್ಯಂಟಿಬಾಡಿ ಹೋರಾಡುತ್ತಿದೆಯಾ ಎಂಬುದು ಫಲಿತಾಂಶದಿಂದ ತಿಳಿದುಬರುತ್ತದೆ.

ಟೆಸ್ಟ್​ ವರದಿ ಪಾಸಿಟಿವ್ ಅಥವಾ ನೆಗೆಟಿವ್​ ಬಂದಾಗ ಏನಾಗುತ್ತದೆ?

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ನೆಗೆಟಿವ್​:

ಟೆಸ್ಟ್​ ವರದಿ ನೆಗೆಟಿವ್​ ಬಂದಾಗ ಅವಶ್ಯಕತೆ ಕಂಡುಬಂದಲ್ಲಿ ಮೂಗಿನ ಅಥವಾ ಗಂಟಲಿನ ದ್ರವ ಮಾದರಿಯ ರೀಯಲ್ ಟೈಂ RT-PCR ಟೆಸ್ಟ್​ ಮಾಡಲಾಗುತ್ತದೆ. ಇದೂ ನೆಗೆಟಿವ್ ಆದಲ್ಲಿ ಕೊರೊನಾ ಸೋಂಕು ನೆಗೆಟಿವ್ ಎಂದರ್ಥ.

RT-PCR ಪಾಸಿಟಿವ್​ ಬಂದಲ್ಲಿ ಕೋವಿಡ್​-19 ಸೋಂಕು ತಗುಲಿರುವುದು ಖಚಿತವಾದಂತೆ. ಈ ಹಂತದಲ್ಲಿ ರೋಗಿಯನ್ನು ನಿರ್ದಿಷ್ಟ ನಿಯಮಾನುಸಾರ ಐಸೊಲೇಷನ್​ಗೊಳಪಡಿಸಿ, ಚಿಕಿತ್ಸೆ ಆರಂಭಿಸಲಾಗುತ್ತದೆ. ಜೊತೆಗೆ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಕುಡುಕಾಟ (ಕಾಂಟ್ಯಾಕ್ಟ್ ಟ್ರೇಸಿಂಗ್​) ಆರಂಭಿಸಲಾಗುತ್ತದೆ.

ಅಥವಾ, ಒಂದು ವೇಳೆ RT-PCR ಟೆಸ್ಟ್​ ಮಾಡದಿದ್ದರೆ ವ್ಯಕ್ತಿಗೆ ಹೋಂ ಕ್ವಾರಂಟೈನ್​ ವಿಧಿಸಿ, ಹಿಂದಿನ ರ್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ನ 10 ದಿನಗಳ ನಂತರ ಮತ್ತೆ ರ್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಮಾಡಲಾಗುತ್ತದೆ. ಈ ಹಂತದಲ್ಲಿ ರ್‍ಯಾಪಿಡ್ ಆ್ಯಂಟಿಬಾಡಿ ನೆಗೆಟಿವ್​ ಬಂದಲ್ಲಿ ಬಹುತೇಕ ಸೋಂಕು ಬಂದಿಲ್ಲ ಎಂದರ್ಥ. ಒಂದೊಮ್ಮೆ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಪಾಸಿಟಿವ್ ತೋರಿಸಿದಲ್ಲಿ ಇತ್ತೀಚೆಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಮತ್ತೆ ಹತ್ತು ದಿನಗಳ ಕ್ವಾರಂಟೈನ್​ ವಿಧಿಸಲಾಗುತ್ತದೆ.

ರ್‍ಯಾಪಿಡ್ ಆ್ಯಂಟಿಬಾಡಿ ಟೆಸ್ಟ್​ ಪಾಸಿಟಿವ್​:

ವೈದ್ಯಕೀಯ ತಪಾಸಣೆಗಳ ನಂತರ ರೋಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಅಥವಾ ನಿಯಮಾನುಸಾರ ಐಸೊಲೇಷನ್​​ನಲ್ಲಿಡಲಾಗುತ್ತದೆ. ಹಾಗೆಯೇ ಮಾರ್ಗಸೂಚಿಗಳ ಅನುಸಾರ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಹುಡುಕಾಟ ಆರಂಭಿಸಲಾಗುತ್ತದೆ.

ಫಲಿತಾಂಶ ಏನು ಹೇಳುತ್ತದೆ?

ಈ ಮುನ್ನ ವ್ಯಕ್ತಿಯು ರ್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ಗೆ ಒಳಗಾಗಿಲ್ಲದಿರುವುದನ್ನು ಅಥವಾ ಸೋಂಕು ತಗುಲಿ ತಾನಾಗಿಯೇ ಗುಣಮುಖವಾಗಿದ್ದರೂ ಟೆಸ್ಟ್​ನಲ್ಲಿ ತಿಳಿದು ಬರುತ್ತದೆ.

ದೇಶದ ಯಾವೆಲ್ಲ ಭಾಗಗಳಲ್ಲಿ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಮಾಡಲಾಗುತ್ತಿದೆ?

ಕೊರೊನಾ ಸೋಂಕಿನ ಹಾಟ್​ಸ್ಪಾಟ್​ ವಲಯಗಳಲ್ಲಿನ ಹಾಗೂ ಇವುಗಳ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳಿಗೆ ಮಾತ್ರ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಮಾಡಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿದೆ.

ನನಗೂ ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಮಾಡಿ ಎಂದು ಕೇಳಬಹುದೇ?

ಇಲ್ಲ. ಬೇಕಾದವರು ತಮಗೆ ಈ ಟೆಸ್ಟ್ ಮಾಡಿ ಎಂದು ಕೇಳುವಂತಿಲ್ಲ. ಈ ಪರೀಕ್ಷೆಯನ್ನು ಕೊರೊನಾ ತನಿಖೆಗೆ ಮಾಡದೇ ಕೇವಲ ಸೋಂಕಿನ ಹರಡುವಿಕೆಯ ಪ್ರಮಾಣವನ್ನು ನಿರ್ಧರಿಸಲು ಮಾತ್ರ ಕೈಗೊಳ್ಳಲಾಗುತ್ತಿದೆ.

ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಏಕೆ ಬೇಕು?

ಇಲ್ಲಿಯವರೆಗೆ RT-PCR ಟೆಸ್ಟ್​ಗಳನ್ನು ಮಾಡಲಾಗುತ್ತಿತ್ತು. ಗಂಟಲು ಅಥವಾ ಮೂಗಿನ ದ್ರವ ಮಾದರಿ ಬಳಸುವ ಈ ಟೆಸ್ಟ್​ಗಳು ತೀರಾ ದುಬಾರಿಯಾಗಿದ್ದು, ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ರ್‍ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ಗಳು ಅಗ್ಗವಾಗಿದ್ದು, ಬೇಗನೆ ಫಲಿತಾಂಶವೂ ಸಿಗುತ್ತದೆ.

Last Updated : Apr 20, 2020, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.