ಚೆನ್ನೈ (ತಮಿಳುನಾಡು): ಸಬ್ಅರ್ಬನ್ ರೈಲಿನೊಳಗೆ ಮಲಗಿದ್ದ 40 ವರ್ಷದ ಮಹಿಳೆಯ ಮೇಲೆ ಇಬ್ಬರು ರೈಲ್ವೆ ಗುತ್ತಿಗೆ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಂಬರಂ ರೈಲ್ವೆ ಆವರಣದಲ್ಲಿ ನಡೆದಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ರೈಲ್ವೆ ಪೊಲೀಸರು (ಜಿಆರ್‌ಪಿ) ಆರೋಪಿಗಳನ್ನು ಬಂಧಿಸಿದ್ದಾರೆ. ಸುರೇಶ್ (31) ಮತ್ತು ಅಬ್ದುಲ್ ಅಜೀಜ್ (30) ಬಂಧಿತ ಆರೋಪಿಗಳು.
ಚೆಂಗಲ್ಪಟ್ಟು ಮೂಲದವರಾಗಿರುವ 40 ವರ್ಷದ ಮಹಿಳೆ ದಿನಗೂಲಿ ನೌಕರೆಯಾಗಿದ್ದಾರೆ. ಶುಕ್ರವಾರ ರಾತ್ರಿ ಮಹಿಳೆ ಪಲ್ಲವರಂ ರೈಲ್ವೆ ನಿಲ್ದಾಣದಿಂದ ಪರನೂರಿಗೆ ರೈಲು ಹತ್ತಿದ್ದರು. ಗುಡುವಾಂಚೇರಿ ಬಳಿ ಮಹಿಳೆ ನಿದ್ರೆಗೆ ಜಾರಿದ್ದಾರೆ. ರೈಲು ಚೆಂಗಲ್ಪಟ್ಟು ತಲುಪಿತ್ತು. ಆದ್ರೆ ನಿರ್ವಹಣಾ ಕಾರ್ಯಗಳಿಗಾಗಿ ನಿಲ್ದಾಣದಿಂದ ಕನಿಷ್ಠ ಒಂದು ಕಿಲೋ ಮೀಟರ್ ದೂರದಲ್ಲಿರುವ ತಂಬರಂ ರೈಲ್ವೆ ನಿಲ್ದಾಣಕ್ಕೆ ಬಂದಿತ್ತು. ಈ ಸಮಯದಲ್ಲಿ ಗುತ್ತಿಗೆ ಸಿಬ್ಬಂದಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಈ ಸಂಬಂಧ ದೂರು ನೀಡದಂತೆ ಬೆದರಿಕೆ ಕೂಡ ಹಾಕಿದ್ದಾರೆ.
ಓದಿ:ಚೇಂಬರ್ನಲ್ಲೇ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗ ಥಳಿತ : ವಿಡಿಯೋ ನೋಡಿ
ನಂತರ ಮಹಿಳೆ ಹೋಗಿ ಈ ಘಟನೆಯ ಬಗ್ಗೆ ಜಿಆರ್‌ಪಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆ ನಡೆಸಿದ ಜಿಆರ್‌ಪಿ ಪೊಲೀಸರು, ಮಹಿಳೆ ನೀಡಿದ ಗುರುತಿನ ವಿವರಗಳೊಂದಿಗೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಧಿಸಿದ್ದು, ಅತ್ಯಾಚಾರ ಮತ್ತು ಮಹಿಳೆಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.