ETV Bharat / bharat

ಜಿಮ್ ತೆರೆಯಲು ಅನುಮತಿ ಕೋರಿ ಪ್ರತಿಭಟನೆ ನಡೆಸಿದ ಜಿಮ್​ ಮಾಲೀಕರ ಬಂಧನ - ದೆಹಲಿ ಜಿಮ್ ಅಸೋಸಿಯೇಶನ್

ದೆಹಲಿಯಲ್ಲಿ ಸರಿಸುಮಾರು 5,500 ಜಿಮ್​ಗಳಿವೆ. ಅವರ ಜೀವನೋಪಾಯಕ್ಕೆ ಧಕ್ಕೆಯುಂಟಾಗಿದೆ. ಹಾಗಾಗಿ ಅವುಗಳನ್ನು ಪುನಃ ತೆರೆಯಲು ಅನುಮತಿ ಕೋರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

Protesting gym owners want to resume business
ಪ್ರತಿಭಟನೆ ನಡೆಸುತ್ತಿದ್ದ ಜಿಮ್​ ಮಾಲೀಕರ ಬಂಧನ
author img

By

Published : Aug 22, 2020, 7:06 PM IST

ನವದೆಹಲಿ: ನಗರದ ಜಿಮ್​ ಕೇಂದ್ರಗಳನ್ನು ಮತ್ತೆ ತೆರೆಯಲು ಅನುಮತಿ ಕೋರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸುತ್ತಿದ್ದ 12 ಜಿಮ್ ಮಾಲೀಕರನ್ನು ದೆಹಲಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Protesting gym owners want to resume business
ಪ್ರತಿಭಟನೆ ನಡೆಸುತ್ತಿದ್ದ ಜಿಮ್​ ಮಾಲೀಕರ ಬಂಧನ

ದೆಹಲಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಜಿಮ್​ ಕೇಂದ್ರಗಳಿಂದ ಬರುವ ಆದಾಯವನ್ನೇ ನಂಬಿದ್ದಾರೆ. ಜಿಮ್​ ಮುಚ್ಚಿದ್ದರಿಂದ ಇವರ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಹಾಗಾಗಿ ಜಿಮ್​ಗಳನ್ನು ಮತ್ತೆ ತೆರೆಯುವಂತೆ ನಾವು ಲೆಫ್ಟಿನೆಂಟ್ ಗವರ್ನರ್​ಗೆ ವಿನಂತಿಸಲು ಬಂದಿದ್ದೆವು. ಆದರೆ, ಪೊಲೀಸರು ನಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು 4,000 ಸಣ್ಣ ಮತ್ತು ಮಧ್ಯಮ ಉದ್ಯಮಿಗಳನ್ನು ಒಳಗೊಂಡಿರುವ ದೆಹಲಿ ಜಿಮ್ ಅಸೋಸಿಯೇಶನ್ ಉಪಾಧ್ಯಕ್ಷ ​ಚಿರಾಗ್ ಸೇಥಿ ತಮ್ಮ ನೋವು ತೋಡಿಕೊಂಡರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುಮಾರು 12 ಜನರನ್ನು ವಶಕ್ಕೆ ಪಡೆದಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ COVID-19 ಪರಿಶೀಲನಾ ಸಭೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೋಟೆಲ್​ ಮತ್ತು ಮಾರುಕಟ್ಟೆಗಳನ್ನು ಪುನಃ ತೆರೆಯಲು ಅನುಮೋದನೆ ನೀಡಿದೆ. ಆದರೆ, ಜಿಮ್​ಗಳನ್ನು ಮರುಪ್ರಾರಂಭಿಸಲು ಅನುಮತಿಸಲಿಲ್ಲ. ಸರ್ಕಾರ ಜಿಮ್​ಗಳನ್ನು ನಿರ್ಲಕ್ಷಿಸಿದೆ.

ದೆಹಲಿಯಲ್ಲಿ ಸರಿಸುಮಾರು 5,500 ಜಿಮ್​ಗಳಿವೆ. ಅವರ ಜೀವನೋಪಾಯಕ್ಕೆ ಧಕ್ಕೆಯುಂಟಾಗಿದೆ. ಫಿಟ್​ನೆಸ್ ತರಬೇತುದಾರರು, ಕಾರ್ಯನಿರ್ವಾಹಕರು, ಕ್ಲೀನರ್​ಗಳು, ಸಹಾಯಕರು, ಸಲಕರಣೆಗಳ ಮಾರಾಟಗಾರರು ಮತ್ತು ಮನೆಗೆಲಸದ ಸಿಬ್ಬಂದಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ನೆರೆಯ ರಾಜ್ಯಗಳಲ್ಲಿನ ಜಿಮ್​ಗಳನ್ನು ಮತ್ತೆ ತೆರೆಯಲು ಅನುಮತಿಸಲಾಗಿದೆ. ಆದರೆ, ಇಲ್ಲಿ ಮಾತ್ರ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಜಿಮ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.