ಕೊಯಿಮತ್ತೂರು: ಕರ್ನಾಟಕದಲ್ಲಿ ವಿಶಿಷ್ಟ ಪ್ರತಿಭಟನೆ ಹಾಗೂ ರಾಜಕೀಯ ನಡೆ ಮೂಲಕ ಗಮನ ಸೆಳೆಯುವ ವ್ಯಕ್ತಿ ಅಂದ್ರೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್. ಕತ್ತೆ ಮೇಲೆ ಕುಳಿತು ಮೆರವಣಿಗೆ, ರಸ್ತೆ ಮೇಲೆ ಮಲಗಿ ಧರಣಿ, ಕುರಿಗಳನ್ನು ಹೊತ್ತುಕೊಂಡು ಮೆರವಣಿಗೆ, ಹಾಸಿಗೆ ಮೇಲೆ ಮಲಗಿ ಮುಷ್ಕರ... ಹೀಗೆ ವಿಭಿನ್ನವಾದ ಪ್ರತಿಭಟನೆಗಳು ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇವರ ಮಾದರಿಯಲ್ಲೇ ಪಕ್ಕದ ರಾಜ್ಯ ತಮಿಳುನಾಡಿನ ಯುವಕರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೊಯಿಮತ್ತೂರು ಮಹಾನಗರ ಪಾಲಿಕೆಯು ಡೆಂಗ್ಯೂ ಹರಡುವುದನ್ನು ತಡೆಯುವಲ್ಲಿ ವಿಫಲವಾಗಿದೆ. ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಸಂತ್ರಸ್ತರಿಗೆ 3 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿ
ನಗರದಲ್ಲಿ ಸೊಳ್ಳೆ ಪರದೆ ಧರಿಸಿ ತಮಿಳು ಪುಲಿಗಲ್ ಕಚ್ಚಿಯ ಸದಸ್ಯರು ಪ್ರತಿಭಟನೆ ನಡೆಸಿದ್ರು.
ಪ್ರದೇಶದ ನಿವಾಸಿಗಳಲ್ಲಿ ಡೆಂಗ್ಯೂ ಹರಡುವುದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕೊಯಿಮತ್ತೂರು ಮಹಾನಗರ ಪಾಲಿಕೆಯ ಡೆಂಗ್ಯೂ ರೋಗಿಗಳಿಗೆ 3 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪರಿಹಾರ ಘೋಷಿಸುವಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ಪ್ರತಿಭಟನಾನಿರತ ಕೋವಾಯಿ ರಾವಣನ್ ಮಾತನಾಡಿ, ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಡೆಂಗ್ಯೂ ಕಾರಣದಿಂದಾಗಿ 200ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೊಳ್ಳೆ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದ್ದಕ್ಕೆ ನಾವು ಈ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದೇವೆ ಎಂದರು.